Old Pension: ಸರ್ಕಾರೀ ನೌಕರರಿಗೆ ಇನ್ನೊಂದು ರೂಲ್ಸ್, ಇನ್ಮುಂದೆ ಪಿಂಚಣಿ ಪಡೆಯಲು ಈ ದಾಖಲೆ ಕಡ್ಡಾಯ.

ಹಳೆಯ ಪಿಂಚಣಿಯ ಲಾಭವನ್ನು ಪಡೆಯಲು ಈ ಷರತ್ತುಗಳು ಕಡ್ಡಾಯವಾಗಿದೆ.

Old Pension New Update: ಸದ್ಯ ದೇಶದಲ್ಲಿ 7 ನೇ ವೇತನದಡಿ ತುಟ್ಟಿಭತ್ಯೆ ಹೆಚ್ಚಳವನ್ನು ಸರ್ಕಾರ ಘೋಷಿಸಿದೆ. ಹೊಸ ವರ್ಷದಿಂದ ಸರ್ಕಾರೀ ನೌಕರರು ಹೆಚ್ಚಿನ ತುಟ್ಟಿಭತ್ಯೆಯನ್ನು ಪಡೆಯಲಿದ್ದಾರೆ. ತುಟ್ಟಿಭತ್ಯೆ ಹೆಚ್ಚಳ ಘೋಷಣೆಯ ಬೆನ್ನಲೇ ಇದೀಗ ಸರ್ಕಾರೀ ನೌಕರರು ಹಳೆಯ ಪಿಂಚಣಿ (Old Pension Scheme) ಜಾರಿಮಾಡುವ ಕುರಿತು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈಗಾಗಲೇ ಕೆಲ ರಾಜ್ಯದಲ್ಲಿ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಯಾಗಿದೆ. ಇದೀಗ ಸರ್ಕಾರ ಇಂತಹ ನೌಕರರಿಗೆ ಮಾತ್ರ ಹಳೆಯ ಪಿಂಚಣಿ ಯೋಜನೆಯನ್ನು ಪರಿಚಯಿಸಿದೆ. ಇನ್ನುಮುಂದೆ ಸರ್ಕಾರೀ ನೌಕರರು ಹಳೆಯ ಪಿಂಚಣಿಯ ಲಾಭವನ್ನು ಪಡೆಯಬಹುದು. ಆದರೆ ಹಳೆಯ ಪಿಂಚಣಿಯ ಲಾಭವನ್ನು ಪಡೆಯಲು ಈ ಷರತ್ತುಗಳು ಕಡ್ಡಾಯವಾಗಿದೆ.

Old Pension New Update
Image Credit: Zeebiz

ಹಳೆಯ ಪಿಂಚಣಿ ಯೋಜನೆ ಪಡೆಯಲು ಈ ಷರತ್ತುಗಳು ಅನ್ವಯ
•ದಿನಾಂಕ:01.04.2006 ರ ಮೊದಲು ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆಯಾದ ಮತ್ತು ಆ ದಿನಾಂಕದಂದು ಅಥವಾ ನಂತರ ರಾಜ್ಯ ಸರ್ಕಾರದ ಸೇವೆಗೆ ಸೇರ್ಪಡೆಗೊಂಡ ಸರ್ಕಾರಿ ನೌಕರರು ಹಳೆಯ ಡಿಫೈನ್ಸ್ ಪಿಂಚಣಿ ಯೋಜನೆಯಡಿ ಒಳಗೊಳ್ಳಲು ಬಯಸುವವರು ತಮ್ಮ ಆಸಕ್ತಿಯನ್ನು ನೇರವಾಗಿ ಸಕ್ಷಮ ನೇಮಕಾತಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ದಿನಾಂಕ: 30.06.2024 ರೊಳಗೆ ನಿಗದಿತ ನಮೂನೆ ಸಲ್ಲಿಸಬೇಕು. ಈ ಆಯ್ಕೆಯನ್ನು ಒಮ್ಮೆ ಮಾತ್ರ ಚಲಾಯಿಸಲು ಅನುಮತಿಸಲಾಗಿದೆ.

•ಒಮ್ಮೆ ಮಾಡಿದ ಆಯ್ಕೆಯನ್ನು ಬದಲಾಯಿಸಲು ಅವಕಾಶವಿಲ್ಲ.

•ಮೇಲಿನ 1 ರ ಪ್ರಕಾರ ಆಯ್ಕೆಯನ್ನು ಚಲಾಯಿಸಲು ಅರ್ಹರಾಗಿರುವ ಸರ್ಕಾರಿ ನೌಕರರು ನಿಗದಿತ ದಿನಾಂಕದೊಳಗೆ ತಮ್ಮ ಆಯ್ಕೆಯನ್ನು ಚಲಾಯಿಸದಿದ್ದರೆ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಮುಂದುವರಿಯುತ್ತಾರೆ.

Join Nadunudi News WhatsApp Group

•ದಿನಾಂಕ 01.04.2006 ರ ಮೊದಲು ರಾಜ್ಯ ಸಿವಿಲ್ ಸೇವೆಯಲ್ಲಿನ ಖಾಲಿ ಹುದ್ದೆಗಳಿಗೆ ಹೊರಡಿಸಲಾದ ನೇಮಕಾತಿ ಅಧಿಸೂಚನೆಯನ್ವಯ ಆಯ್ಕೆಯಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಂಡು ತದನಂತರ ಸಮುಚಿತ ಮಾರ್ಗದಲ್ಲಿ ಅರ್ಜಿಯನ್ನು ಸಲ್ಲಿಸಿ ಸರ್ಕಾರದ ಅನ್ಯ ಇಲಾಖೆಯಲ್ಲಿನ ಹುದ್ದೆಗೆ ನೇಮಕಾತಿ ಹೊಂದಿದ ಅರ್ಹ ಸರ್ಕಾರೀ ನೌಕರರು ಹಿಂದಿನ ಡಿಫೈನ್ಸ್ ಪಿಂಚಣಿ ಯೋಜನೆ ಸೌಲಭ್ಯ ಪಡೆದುಕೊಳ್ಳಲು ಬಯಸಿದ್ದಲ್ಲಿ ಮನವಿಯನ್ನು ಹಿಂದಿನ ನೇಮಕಾತಿ ಪ್ರಾಧಿಕಾರಕ್ಕೆ ದಿನಾಂಕ 30 .06 .2024 ರೊಳಗಾಗಿ ಸಲ್ಲಿಸಬೇಕಾಗುತ್ತದೆ.

Old Pension Latest News
Image Credit: ibc24

ಇನ್ಮುಂದೆ ಪಿಂಚಣಿ ಪಡೆಯಲು ಈ ದಾಖಲೆ ಕಡ್ಡಾಯ
•ಹುದ್ದೆಗಳ ಭರ್ತಿಗಾಗಿ ಪ್ರಕಟಿಸಲಾದ ನೇಮಕಾತಿ ಅಧಿಸೂಚನೆ ದಿನಾಂಕ: ರ ಪ್ರತಿಯನ್ನು ಲಗತ್ತಿಸಿದೆ.

•ದಿನಾಂಕದ ಸಂಬಂಧಿತ ಆಯ್ಕೆ ಪಟ್ಟಿಯ ಪ್ರತಿಯನ್ನು ಲಗತ್ತಿಸಲಾಗಿದೆ:

•ದಿನಾಂಕದ ನೇಮಕಾತಿ ಆದೇಶದ ಪ್ರತಿಯನ್ನು ಲಗತ್ತಿಸಲಾಗಿದೆ:

•ನೇಮಕಾತಿ ನಂತರ ಇಲಾಖೆಯಲ್ಲಿ ಬದಲಾವಣೆಯಾಗಿದೆಯೇ? ವಿವರಗಳನ್ನು ನೀಡುವುದು.

•ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಛೇರಿ/ಇಲಾಖೆಯ ವಿಳಾಸ:

•ಕೆಜಿಐಡಿ ಸಂಖ್ಯೆ:

•NPS ಪ್ರಾನ್ ಸಂಖ್ಯೆ:

•ಪ್ರಸ್ತುತ ವೇತನ ಚೀಟಿ:

•ದಿನಾಂಕ:

(ಸಹಿ ಮತ್ತು ಹೆಸರು)

Old Pension New Rules
Image Credit: Himtimes

Join Nadunudi News WhatsApp Group