NPS And OPS: ಸರ್ಕಾರೀ ನೌಕರರ ಪಿಂಚಣಿ ಬಗ್ಗೆ ಅಂತಿಮ ನಿರ್ಧಾರ ಹೊರಹಾಕಿದ ಕೇಂದ್ರ ಸರ್ಕಾರ, ಸಂಬಳದಲ್ಲಿ 10% ಕಡಿತ

ಕೇಂದ್ರ ಸರ್ಕಾರ ನೌಕರರ ಪಿಂಚಣಿ ಕುರಿತು ಅಂತಿಮ ನಿರ್ಧಾರ ಘೋಷಿಸಿದೆ, ಸರ್ಕಾರಿ ನೌಕರರಿಗೆ ಕೇಂದ್ರದ ನಿರ್ಧಾರದಿಂದ ಬೇಸರ

Old Pension System And National Pension System: ಸರ್ಕಾರಿ ನೌಕರರ ವೇತನ ಹಾಗು ಪಿಂಚಣಿ ಕುರಿತಾಗಿ ಈಗಾಗಲೇ ಹಲವು ಚರ್ಚೆಗಳಾಗಿದ್ದು, ಈ ಕುರಿತು ಕೇಂದ್ರ ಒಂದು ನಿರ್ದಿಷ್ಟ ಕ್ರಮಕ್ಕೆ ಬಂದಿದೆ. ಲೋಕಸಭೆಯಲ್ಲಿ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಮೊನ್ನೆ ನೀಡಿದ ಲಿಖಿತ ಉತ್ತರದಲ್ಲಿ ಸರ್ಕಾರಿ ಉದ್ಯೋಗಿಗಳಿಗೆ ಹಿಂದೆ ಜಾರಿಯಲ್ಲಿದ್ದ ಪಿಂಚಣಿ ಯೋಜನೆಗೆ (Old pension system) ಮರಳುವ ಯಾವ ಆಲೋಚನೆ ತನಗೆ ಇಲ್ಲ ಎಂಬ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.

‘2004ರ ಜನವರಿ 1 ರಂದು ಮತ್ತು ಆ ಬಳಿಕ ನೇಮಕವಾದ ಕೇಂದ್ರ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಜಾರಿ ಮಾಡುವ ಯಾವ ಪ್ರಸ್ತಾಪವೂ ಸರ್ಕಾರದ ಮುಂದಿಲ್ಲ’ ಎಂದು ಸಚಿವರು ತಿಳಿಸಿದ್ದಾರೆ. ಇದರೊಂದಿಗೆ ಹೊಸ ಪಿಂಚಣಿ ಸ್ಕೀಮ್ ಆದ ನ್ಯಾಷನಲ್ ಪೆನ್ಷನ್ ಸಿಸ್ಟಂ (National Pension System) ಅನ್ನೇ ಸರ್ಕಾರಿ ಉದ್ಯೋಗಿಗಳಿಗೆ ಮುಂದುವರಿಸಲಾಗುತ್ತದೆ.

Old Pension System
Image Credit: Central Government Staffnews

ಹಳೆಯ ಪೆನ್ಷನ್ ಸ್ಕೀಮ್ ಮತ್ತು ಹೊಸ ಪೆನ್ಷನ್ ಸ್ಕೀಮ್ ಮಧ್ಯೆ ಇರುವ ವ್ಯತ್ಯಾಸ

ಹಳೆಯ ಪೆನ್ಷನ್ ಸ್ಕೀಮ್ ಆದ ಒಪಿಎಸ್​ನಲ್ಲಿ ಸರ್ಕಾರಿ ಉದ್ಯೋಗಿ ನಿವೃತ್ತರಾದಾಗ ಅವರ ಕೊನೆಯ ಸಂಬಳದ ಶೇ. 50 ರಷ್ಟು ಹಣವನ್ನು ಮಾಸಿಕ ಪಿಂಚಣಿಯಾಗಿ ನೀಡಲಾಗುತ್ತದೆ. ಸೇವೆಯಲ್ಲಿರುವಾಗ ಉದ್ಯೋಗಿಯ ಸಂಬಳದಲ್ಲಿ ಪಿಂಚಣಿಗಾಗಿ ಹಣವನ್ನು ಕಡಿತ ಮಾಡಲಾಗುತ್ತಿರಲಿಲ್ಲ.ಹೊಸ ನ್ಯಾಷನಲ್ ಪೆನ್ಷನ್ ಸಿಸ್ಟಂನಲ್ಲಿ ಉದ್ಯೋಗಿಯ ಮೂಲ ವೇತನದ ಶೇ. 10 ರಷ್ಟು ಹಣವನ್ನು ಕಡಿತ ಮಾಡಿ ಪೆನ್ಷನ್ ಫಂಡ್​ ಗೆ ವರ್ಗಾಯಿಸಲಾಗುತ್ತದೆ.

ಸರ್ಕಾರ ಶೇ. 14 ರಷ್ಟು ಕೊಡುಗೆ ನೀಡುತ್ತದೆ. ಈ ಹಣವನ್ನು ಸರ್ಕಾರದ ಸಾಲಪತ್ರಗಳ ಮೇಲೆ ಹೂಡಿಕೆ ಮಾಡಲಾಗುತ್ತದೆ. ಆದರೆ, ಪಿಂಚಣಿ ಹಣ ನಿರ್ದಿಷ್ಟವಾಗಿರುವುದಿಲ್ಲ. ಹೂಡಿಕೆಯಿಂದ ಸಿಗುವ ರಿಟರ್ನ್ ಮೇಲೆ ಪಿಂಚಣಿ ಮೊತ್ತ ನಿರ್ಧಾರಿತವಾಗಿರುತ್ತದೆ.

Join Nadunudi News WhatsApp Group

National Pension System
Image Credit: Odishatv

ಅಟಲ್ ಪೆನ್ಷನ್ ಸ್ಕೀಮ್ ಬಗ್ಗೆ ಮಾಹಿತಿ

APY ಅಟಲ್ ಪೆನ್ಷನ್ ಸ್ಕೀಮ್ ಪಡೆದವರ ಸಂಖ್ಯೆ 6 ಕೋಟಿಗೆ ಏರಿಕೆ ಆಗಿದೆ ಆದರೆ, ಎನ್​ಪಿಎಸ್ ಬಗ್ಗೆ ಸಾಕಷ್ಟು ಆಕ್ಷೇಪಣೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸಮಸ್ಯೆಗಳೇನೆಂದು ಗುರುತಿಸಿ ಅದಕ್ಕೆ ಪರಿಹಾರ ಹುಡುಕಲು ಒಂದು ಸಮಿತಿ ರಚಿಸಲಾಗಿದೆ. ಕೇಂದ್ರ ಹಣಕಾಸು ಇಲಾಖೆ ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಈ ಕಮಿಟಿ ನೇತೃತ್ವ ವಹಿಸಿದ್ದಾರೆ. ಒಟ್ಟಾರೆಯಾಗಿ ಸರಕಾರಿ ನೌಕರರು ಕೇಂದ್ರ ಸರಕಾರದ ಈ ನಿರ್ಧಾರದಿಂದ ಬೇಸರ ಹೊಂದಿದ್ದಾರೆ ಎನ್ನಬಹದು.

Join Nadunudi News WhatsApp Group