Old Phone: ನಿಮ್ಮಲ್ಲಿ ಹಳೆಯ ಫೋನ್ ಇದ್ದರೆ ಅದನ್ನು CCTV ಆಗಿ ಪರಿವರ್ತಿಸಿ, ಬಂದಿದೆ ಹೊಸ ತಂತ್ರಜ್ಞಾನ.

ಈ ರೀತಿಯಾಗಿ ನಿಮ್ಮ ಹಳೆಯ ಫೋನ್ ಅನ್ನು CCTV ಆಗಿ ಪರಿವರ್ತಿಸಿ

Old Phone Use As CCTV: ಮಾರುಕಟ್ಟೆಯಲ್ಲಿ ಹೊಸ ಹೊಸ ಸ್ಮಾರ್ಟ್ ಫೋನ್ ಗಳು ಲಾಂಚ್ ಆಗುತ್ತಾ ಇರುತ್ತದೆ. ಹೊಸ ಮಾದರಿಯ ಸ್ಮಾರ್ಟ್ಫೋನ್ ಗಳು ಮಾರುಕಟ್ಟೆಗೆ ಬಂದಂತೆ ಹಳೆಯ ಸ್ಮಾರ್ಟ್ ಫೋನ್ ನ ಬದಲಿಗೆ ಹೊಸ ಸ್ಮಾರ್ಟ್ ಫೋನ್ ಖರೀದಿಸಲು ಮುಂದಾಗುವುದು ಸಹಜ.

ಇನ್ನು ನೀವು ಹೊಸ ಸ್ಮಾರ್ಟ್ ಫೋನ್ ಖರೀದಿಗೆ ನಿಮ್ಮ ಬಳಿ ಇರುವ ಹಳೆಯ ಸ್ಮಾರ್ಟ್ ಫೋನ್ ಅನ್ನು ಸೆಕೆಂಡ್ ಹ್ಯಾಂಡ್ ಗೆ ಮಾರಾಟ ಮಾಡುವುದಾಗಲಿ ಅಥವಾ ಬಳಸದೆ ಇಡುವುದಾಗಲಿ ಮಾಡುವ ಅಗತ್ಯ ಇಲ್ಲ. ಏಕೆಂದರೆ ನಿಮ್ಮ ಹಳೆಯ ಸ್ಮಾರ್ಟ್ ಫೋನ್ ಅನ್ನು ನೀವು ಸೇಫ್ಟಿಗಾಗಿ ಬಳಸಿಕೊಳ್ಳಬಹುದು. ನೀವು ನಿಮ್ಮ ಹಳೆಯ ಸ್ಮಾರ್ಟ್ ಅನ್ನು CCTV ಆಗಿ ಕೂಡ ಪರಿವರ್ತಿಸಿಕೊಳ್ಳಬಹುದು. 

Old Phone Use As CCTV
Image Credit: Nifdthhe

ನಿಮ್ಮಲ್ಲಿ ಹಳೆಯ ಫೋನ್ ಇದ್ದರೆ ಅದನ್ನು ಸಿಸಿಟಿವ್ ಆಗಿ ಪರಿವರ್ತಿಸಿ
ಸಾಮಾನ್ಯವಾಗಿ ಮನೆ ಅಥವಾ ಓಫೀಸ್ ನಲ್ಲಿ ಹೆಚ್ಚಿನ ಜನರು CCTV ಕ್ಯಾಮರಗಳನ್ನು ಬಳಸುತ್ತಾರೆ. ಆದರೆ CCTV ಕ್ಯಾಮರಾಗಳನ್ನು ಅಳವಡಿಸಲು ಹೆಚ್ಚು ಖರ್ಚಾಗುತ್ತದೆ. ಆದರೆ ನೀವು ಯಾವುದೇ ದೊಡ್ಡ ಪ್ರಮಾಣದ ಖರ್ಚಿಲ್ಲದೆ ನಿಮ್ಮ ಹಳೆಯ ಸ್ಮಾರ್ಟ್ ಫೋನ್ ಅನ್ನು CCTV ಆಗಿ ಪರಿವರ್ತಿಸಿಕೊಳ್ಳಬಹುದು. ಹೌದು, ನಿಮಗೆ ಬೇಕಾಗಿರುವುದು ಸಾಫ್ಟ್‌ವೇರ್, ಚಾರ್ಜರ್, ರೆಕಾರ್ಡ್ ಮಾಡಿದ ವೀಡಿಯೊ ಕ್ಲಿಪ್‌ ಗಳನ್ನು ವೀಕ್ಷಿಸಲು ನೀವು ಬಳಸುವ ಫೋನ್ ಅಥವಾ ಕಂಪ್ಯೂಟರ್. ಮೊದಲು ನೀವು ಸಿಸಿಟಿವಿಯಾಗಿ ಬಳಸುವ ನಿಮ್ಮ ಹಳೆಯ ಸ್ಮಾರ್ಟ್‌ ಫೋನ್‌ ನಲ್ಲಿ ಮತ್ತು ನಿಮ್ಮ ಹೊಸ ಮೊಬೈಲ್‌ ನಲ್ಲಿ “AtHome Video Streamer -Monitor” ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳಿ.

ಈ ರೀತಿಯಾಗಿ ನಿಮ್ಮ ಹಳೆಯ ಫೋನ್ ಅನ್ನು CCTV ಆಗಿ ಪರಿವರ್ತಿಸಿ
ಈ ಸ್ಮಾರ್ಟ್‌ಫೋನ್ ಭದ್ರತಾ ಸಿಸಿಟಿವಿ ಕ್ಯಾಮೆರಾದಂತೆ ವೀಡಿಯೊವನ್ನು ಸಹ ರೆಕಾರ್ಡ್ ಮಾಡುತ್ತದೆ. ಆದ್ದರಿಂದ ಈ ಅಪ್ಲಿಕೇಶನ್ ಅನ್ನು Android ಮತ್ತು iOS ಎರಡಕ್ಕೂ ಬಳಸಬಹುದು. ಎರಡೂ ಫೋನ್‌ ಗಳು ವೈಫೈ ಸಂಪರ್ಕದೊಂದಿಗೆ ಆನ್‌ ಲೈನ್‌ ನಲ್ಲಿರಬೇಕು. AtHome ವೀಡಿಯೊ ಸ್ಟ್ರೀಮರ್ ಅಪ್ಲಿಕೇಶನ್ Usename ಮತ್ತು Password ನೊಂದಿಗೆ Connection ID (ಸಿಐಡಿ) ಅನ್ನು ರಚಿಸುತ್ತದೆ.

Use Old Phone as Security Camera
Image Credit: Androidcentral

ನೀವು ಸಿಸಿಟಿವಿ ಕ್ಯಾಮೆರಾದಂತೆ ಬಳಸುವ ಫೋನ್‌ ನಲ್ಲಿ ಈ ಐಡಿಯನ್ನು ನೀಡಿ. ಇಲ್ಲದಿದ್ದರೆ ನೀವು ಖಾತೆಯ ಸಂಪೂರ್ಣ ಮಾಹಿತಿಯನ್ನು ಒದಗಿಸಲು QR ಕೋಡ್ ಅನ್ನು ಸಹ ಸ್ಕ್ಯಾನ್ ಮಾಡಬಹುದು. ವೀಡಿಯೊ ರೆಕಾರ್ಡಿಂಗ್ ಸ್ಮಾರ್ಟ್‌ ಫೋನ್‌ ನಲ್ಲಿ, ವೀಡಿಯೊ ಸ್ವೀಕರಿಸುವ ಸ್ಮಾರ್ಟ್‌ ಫೋನ್‌ ನಲ್ಲಿ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಮತ್ತು ನಂತರ ನೀವು ಸಿಸಿಟಿವಿ ಕ್ಯಾಮೆರಾವನ್ನು ಬಳಸಲು ಪ್ರಾರಂಭಿಸಬಹುದು ಮತ್ತು ವೀಡಿಯೊ ಕ್ಲಿಪ್‌ ಗಳನ್ನು ಸಹ ವೀಕ್ಷಿಸಬಹುದು.

Join Nadunudi News WhatsApp Group

Turn Your Old Smartphone Into a CCTV Camera
Image Credit: Tweaking4all

Join Nadunudi News WhatsApp Group