Students New Rules: ದಸರಾ ಹಬ್ಬದ ರಜೆ ಮುಗಿಯುವ ಮುನ್ನವೇ ದೇಶದ ಎಲ್ಲಾ ಶಾಲಾ ಮಕ್ಕಳಿಗೆ ಹೊಸ ನಿಯಮ, ಕೇಂದ್ರದ ಆದೇಶ.

ದೇಶದ ಎಲ್ಲಾ ಶಾಲಾ ಮಕ್ಕಳಿಗೆ ಹೊಸ ನಿಯಮ ಜಾರಿಗೆ ತಂದ ಕೇಂದ್ರ ಸರ್ಕಾರ.

One ID Card Rules For Students: ದೇಶದಲ್ಲಿ ನವರಾತ್ರಿ ಹಬ್ಬದ ಸಂಭ್ರಮ ಭರ್ಜರಿಯಿಂದ ಪ್ರಾರಂಭ ಆಗಿದೆ. ಅಷ್ಟೇ ಅಲ್ಲದೆ ಶಾಲಾ ಮಕ್ಕಳು ಶಾಲೆಯಿಂದ ಬ್ರೇಕ್ ಪಡೆದು ಮನೆಯವರ ಜೊತೆ ಹಬ್ಬದ ದಿನಗಳನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಧಾರ್ಮಿಕ ಕ್ಷೇತ್ರಗಳು, ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಮೂಲಕ ಮಕ್ಕಳು ದಸರಾ ರಜೆಯ ಮೋಜನ್ನು ಅನುಭವಿಸುತ್ತಿದ್ದಾರೆ.

ಇದೇ ಹೊತ್ತಲ್ಲೇ ಕೇಂದ್ರ ಸರಕಾರ ದೇಶದಲ್ಲಿನ ಶಾಲಾ ಮಕ್ಕಳಿಗೆ ಗುಡ್‌ ನ್ಯೂಸ್‌ ಕೊಟ್ಟಿದೆ. ಅದೇನೆಂದರೆ ಒನ್‌ ನೇಷನ್‌ ಒನ್‌ ಸ್ಟೂಡೆಂಟ್ ಐಡಿ ಕಾರ್ಡ್. ದಸರಾ ರಜೆಯ ಬೆನ್ನಲ್ಲೇ ಈಗ ಕೇಂದ್ರ ಸರ್ಕಾರ ಶಾಲಾ ಮಕ್ಕಳಿಗೆ ಹೊಸ ನಿಯಮವನ್ನ ಜಾರಿಗೆ ತಂದಿದ್ದು ದೇಶಾದ್ಯಂತ ಈ ನಿಯಮ ಜಾರಿಗೆ ಬಂದಿರುತ್ತದೆ.

one nation one id cards for students
Image Credit: unicef

                                                                                                            
ಶಾಲಾ ಮಕ್ಕಳಿಗೆ ಕೇಂದ್ರ ಸರಕಾರದ ಹೊಸ ನಿಯಮ
ದೇಶದಲ್ಲಿ ಕೇಂದ್ರ ಸರಕಾರ ಈಗಾಗಲೇ ಶಿಕ್ಷಣ ವ್ಯವಸ್ಥೆಯಲ್ಲಿ ಹಲವು ರೀತಿಯ ಬದಲಾವಣೆ ಗಳನ್ನೂ ಜಾರಿಗೆ ತಂದಿದೆ ಅದರಲ್ಲಿ ಶಿಕ್ಷಣ ಇಲಾಖೆ ಹೊಸ ಪಠ್ಯಕ್ರಮಗಳನ್ನು ಅಳವಡಿಸಿಕೊಳ್ಳುತ್ತಿದೆ. ಹಲವು ರಾಜ್ಯಗಳು ಈಗಾಗಲೇ ಹೊಸ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡಿವೆ. ಈ ನಡುವಲ್ಲೇ ಕೇಂದ್ರ ಸರಕಾರ ಹೊಸ ಯೋಜನೆಯನ್ನು ಜಾರಿಗೆ ತರಲಿದೆ. ಸದ್ಯ ದೇಶದಲ್ಲಿ ಒನ್‌ ನೇಷನ್‌ ಒನ್‌ ರೇಷನ್‌, ಒನ್‌ ನೇಷನ್‌ ಒನ್‌ ಎಲೆಕ್ಷನ್‌ ಮಾತುಗಳು ಕೇಳಿಬರುತ್ತಿದೆ. ಇದೀಗ ಒನ್‌ ನೇಷನ್‌ ಒನ್‌ ಸ್ಟೂಡೆಂಟ್ಸ್‌ (One Nation One Students) ಯೋಜನೆ ಜಾರಿಗೆ ಬರಲಿದೆ.

ವಿದ್ಯಾರ್ಥಿಗಳ ಭವಿಷ್ಯಕ್ಕೆ ಈ ಯೋಜನೆ ಸಹಕಾರಿ ಆಗಲಿದೆ
ಎಐಸಿಟಿಇ ಅಧ್ಯಕ್ಷ ಸೀತರಾಮನ್‌ ಅವರು ಈ ಹೊಸ ಯೋಜನೆಯ ಕುರಿತು ಮಾಹಿತಿಯನ್ನು ನೀಡಿದ್ದಾರೆ. ಒನ್‌ ನೇಷನ್‌ ಒನ್‌ ಸ್ಟೂಡೆಂಟ್‌ ಐಡಿ ದೇಶದ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೆ ಬರಲಿದೆ. ಎಜುಕೇಶನ್‌ ಐಡಿಯ ಮೂಲಕ ವಿದ್ಯಾರ್ಥಿಗಳು ತಮ್ಮ ಎಲ್ಲಾ ದಾಖಲೆಗಳನ್ನು ಒಂದೇ ಕಡೆಯಲ್ಲಿ ಇರಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.

ಸರ್ಕಾರದ ಈ ಹೊಸ ಯೋಜನೆಯು ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದ ವರೆಗೆ ಶಾಶ್ವತ ಶಿಕ್ಷಣ ಖಾತೆ ನೋಂದಣಿಯ( APAAR) ಗುರುತಿನ ಸಂಖ್ಯೆಯನ್ನು ನೀಡಲಿದೆ. ಇನ್ನು ಈ ಕಾರ್ಡಿನಲ್ಲಿ ವಿದ್ಯಾರ್ಥಿಗಳ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಬಹುದು. ವಿದ್ಯಾರ್ಥಿಗಳ ಸಂಪೂರ್ಣ ಮಾಹಿತಿ ಈ ಕಾರಿನಲ್ಲಿ ಇರಲಿದ್ದು ಅವರ ವಿದ್ಯಾಭ್ಯಾಸದ ಮಾಹಿತಿ ಈ ಕಾರ್ಡಿನ ಮೂಲಕ ತಿಳಿದುಕೊಳ್ಳಬಹುದು.

Join Nadunudi News WhatsApp Group

one nation one id card rules in india
Image Credit: Original Source

ವಿದ್ಯಾರ್ಥಿಗಳಿಗಾಗಿ ಹೊಸ ದಾಖಲೆ
ಆಧಾರ್‌ ಸಂಖ್ಯೆ, ಪ್ಯಾನ್‌ ಸಂಖ್ಯೆಯಂತೆಯೇ ಇನ್ಮುಂದೆ ವಿದ್ಯಾರ್ಥಿಗಳಿಗೂ ಒಂದೊಂದು ಕೋಡ್‌ ನೀಡುವುದರಿಂದ ವಿದ್ಯಾರ್ಥಿಗಳ ದಾಖಲೆಗಳನ್ನು ಸುಲಭವಾಗಿ ಟ್ರ್ಯಾಕ್‌ ಮಾಡಲು ಸಾಧ್ಯವಾಗುತ್ತದೆ. ಈ ಯೋಜನೆಯನ್ನು ದೇಶದಾದ್ಯಂತ ಜಾರಿ ಮಾಡುವ ನಿಟ್ಟಿನಲ್ಲಿ ಕೇಂದ್ರ ಶಿಕ್ಷಣ ಇಲಾಖೆ ಕ್ರಮವಹಿಸಿದೆ.

ಎಜುಲಾಕರ್‌ ವ್ಯವಸ್ಥೆಯಿಂದಾಗಿ ವಿದ್ಯಾರ್ಥಿಗಳು ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದ ವರೆಗಿನ ಎಲ್ಲಾ ದಾಖಲೆಗಳು ಒಂದೇ ಲಾಕರ್‌ ನಲ್ಲಿ ಸಿಗುವುದರಿಂದ ಸಾಕಷ್ಟು ಅನುಕೂಲತೆಗಳಿಗೆ. ಜೊತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಅಂಕಪಟ್ಟಿ, ಶೈಕ್ಷಣಿಕ ದಾಖಲೆ ಹಾಗೂ ಅವರ ಇತರ ವಿಚಾರಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗಲಿದೆ.

Join Nadunudi News WhatsApp Group