Pan Card: ಪಾನ್ ಕಾರ್ಡ್ ಹೊಂದಿರುವ ಇಂತಹ ಜನರಿಗೆ 10000 ರೂ ದಂಡ, ತೆರಿಗೆ ಇಲಾಖೆ ಕೊನೆಯ ಎಚ್ಚರಿಕೆ.

ಆಧಾರ್ ಹಾಗು ಪಾನ್ ಕಾರ್ಡ್ ಲಿಂಕ್ ಮಾಡುವ ದಂಡದ ಕುರಿತು ಎಚ್ಚರಿಕೆ ನೀಡಿದ ಕೇಂದ್ರ ಸರಕಾರ.

Pan Card Fine: ಕೆಲವು ತಿಂಗಳುಗಳ ಹಿಂದೆ ಆಧಾರ್ ಕಾರ್ಡ್ (Aadhar Card) ಹಾಗು ಪಾನ್ ಕಾರ್ಡ್ (Pan Card) ಲಿಂಕ್ ಸಂಭಂದಿತ ಸಾಕಷ್ಟು ಅಪ್ಡೇಟ್ ಗಳು ಹೊರಬಿದ್ದಿದವು. ಇನ್ನು ಕೇಂದ್ರ ಸರ್ಕಾರ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಜೋಡಣೆಯ ದಿನಾಂಕವನ್ನು ಕೂಡ ವಿಸ್ತರಿಸಿತ್ತು. ಇನ್ನು ಆಧಾರ್ ಹಾಗೂ ಪಾನ್ ಕಾರ್ಡ್ ಜೋಡಣೆಗೆ ಸರಕಾರ ದಂಡ ವಿಧಿಸಿತ್ತು.

ಇದೀಗ ಆಧಾರ್ ಹಾಗೂ ಪಾನ್ ಕಾರ್ಡ್ ಜೋಡಣೆಯ ದಿನಾಂಕದ ಗಡುವು ಹತ್ತಿರ ಬರುತ್ತಿದೆ. ಜೂನ್ ನಲ್ಲಿ ಆಧಾರ್ ಜೊತೆ ಪಾನ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಇದೀಗ ಕೇಂದ್ರ ಸರಕಾರ ಆಧಾರ್ ಹಾಗು ಪಾನ್ ಕಾರ್ಡ್ ಲಿಂಕ್ ಮಾಡುವ ದಂಡದ ಕುರಿತು ಎಚ್ಚರಿಕೆ ನೀಡಿದೆ. ಇನ್ನು ಇಂತಹ ಪಾನ್ ಕಾರ್ಡ್ ಅನ್ನು ನೀವು ಹೊಂದಿದ್ದರೆ 10 ಸಾವಿರ ದಂಡ ಕಟ್ಟಬೇಕಾಗುತ್ತದೆ. ಈ ಕುರಿತು ವಿವರಗಳನ್ನು ತಿಳಿಯೋಣ.

10000 fine for such people having PAN card
Image Credit: News18

ಪಾನ್ ಕಾರ್ಡ್ ಆಧಾರ್ ಲಿಂಕ್ ಗೆ ಕೊನೆಯ ದಿನಾಂಕ
ಸರ್ಕಾರ ಈ ಮೊದಲು ಮಾರ್ಚ್ 31 ಕ್ಕೆ ಪ್ಯಾನ್ ಮತ್ತು ಆಧಾರ ಲಿಂಕ್ ಮಾಡಲು ಕೊನೆಯ ದಿನಾಂಕ ಎಂದು ನಿಗದಿ ಮಾಡಿತ್ತು. ಈ ದಿನಾಂಕದ ಒಳಗೆ ಪಾನ್ ಮತ್ತು ಆಧಾರ್ ಲಿಂಕ್ ಮಾಡದಿದ್ದರೆ 1,000 ದಂಡ ಕಟ್ಟಿ ಲಿಂಕ್ ಮಾಡಿಸಬೇಕು ಇಲ್ಲದಿದ್ದರೆ ಪ್ಯಾನ್ ನಿಷ್ಕ್ರಿಯಗೊಳ್ಳುತ್ತದೆ. ಕೇಂದ್ರ ಸರ್ಕಾರ ಜೂನ್ 30 ರ ತನಕ ಸಮಯ ಕೊಟ್ಟಿದೆ. ನಿಗದಿತ ಸಮಯದೊಳಗೆ ಪಾನ್ ಆಧಾರ್ ಲಿಂಕ್ ಮಾಡುವುದು ಸೂಕ್ತ.

ಪಾನ್ ಕಾರ್ಡ್ ಹೊಂದಿರುವ ಇಂತಹ ಜನರಿಗೆ 10000 ರೂ ದಂಡ
ಆಧಾರ್ ಲಿಂಕ್ ಆಗದೆ ವ್ಯಾಲಿಡ್ ಇಲ್ಲದ ಪಾನ್ ಕಾರ್ಡ್ ನೀಡಿದರೆ  ಇನ್ನುಮುಂದೆ  ಅದು ಮಾನ್ಯವಾಗುವುದಿಲ್ಲ. ಆದಾಯ ತೆರಿಗೆ ಕಾಯ್ದೆ 1961 ರ ಸೆಕ್ಷನ್ 272N ಅಡಿಯಲ್ಲಿ ಅಂತಹ ವ್ಯಕ್ತಿಯು 10000 ರೂ. ದಂಡವನ್ನು ಪಾವತಿಸಬೇಕಾಗುತ್ತದೆ. ಇನ್ನು ನಿಮ್ಮ ಬಳಿ ಒಂದಕ್ಕಿಂತ ಹೆಚ್ಚಿನ ಪಾನ್ ಕಾರ್ಡ್ ಇದ್ದರೆ ಒಂದನ್ನು ನಿಷ್ಕ್ರಿಯಗೊಳಿಸುವುದು ಉತ್ತಮ. ಒಬ್ಬ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಅನ್ನು ಹೊಂದಿದ್ದರೆ ಕನಿಷ್ಠ 6 ತಿಂಗಳ ಶಿಕ್ಷೆ ಮತ್ತು 10000 ದಂಡವನ್ನು ವಿಧಿಸಲಾಗುತ್ತದೆ.

10000 fine for such people having PAN card
Image Credit: News18

ಪಾನ್ ಕಾರ್ಡ್ ಜೊತೆ ಆಧಾರ್ ಲಿಂಕ್ ಮಾಡುವ ವಿಧಾನ
* ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ನೊಂದಿಗೆ ಲಿಂಕ್ ಮಾಡಲು ನೀವು ಮೊದಲು ಆದಾಯ ತೆರಿಗೆಯ ವೆಬ್ ಸೈಟ್ ಗೆ ಹೋಗಬೇಕು.
* ನಂತರ ‘ಲಿಂಕ್ ಆಧಾರ್ ‘ (Link Aadhar) ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮಗೆ ಲಾಗಿನ್ ಮಾಡಲು ಕೇಳುತ್ತದೆ.

Join Nadunudi News WhatsApp Group

* ಅದರಲ್ಲಿ ನೀವು ನಿಮ್ಮ ಜನ್ಮ ದಿನಾಂಕವನ್ನು ಪ್ಯಾನ್ ಸಂಖ್ಯೆ ಮತ್ತು ಬಳಕೆದಾರನ ಐಡಿಯೊಂದಿಗೆ ನಮೂದಿಸಬೇಕು. ಆಧಾರ್ ಕಾರ್ಡ್ ನಲ್ಲಿ ನಮೂದಿತವಾದ ಜನ್ಮ ದಿನಾಂಕವನ್ನು ನಮೂದಿಸಬೇಕು.

* ನಂತರ ನಿಮ್ಮ ಖಾತೆಯ ಪ್ರೊಪೈಲ್ ಸೆಟ್ಟಿಂಗ್ (Profile Setting) ಗೆ ಹೋಗಿ ಅಲ್ಲಿ ಆಧಾರ್ ಕಾರ್ಡ್ ಲಿಂಕ್ ಆಯ್ಕೆಯನ್ನು ಕ್ಲಿಕ್ ಮಾಡಿ.
* ಅಲ್ಲಿ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚ ಕೋಡ್  ಅನ್ನು ನಮೂದಿಸಿ. ಅಲ್ಲಿ ಕೆಳಗೆ ನೀವು ಆಧಾರ್ ಲಿಂಕ್ ಆಯ್ಕೆಯನ್ನು ಹೊಂದುತ್ತೀರಿ. ಅದನ್ನು ಕ್ಲಿಕ್ ಮಾಡಿ ನಂತರ ನಿಮ್ಮ ಪ್ಯಾನ್ ಕಾರ್ಡ್ ಆಧಾರ ನೊಂದಿಗೆ ಲಿಂಕ್ ಆಗುತ್ತದೆ.

Join Nadunudi News WhatsApp Group