Paytm Payments: ಇಂದಿನಿಂದ ಪೆಟಿಎಂ ನಲ್ಲಿ ನಿಮಗೆ ಸಿಗಲ್ಲ ಈ ಸೇವೆಗಳು, ಪೆಟಿಎಂ ನ ಈ ಸೇವೆ ಬಂದ್ ಮಾಡಿದ RBI

ಪೆಟಿಎಂ ನಿರ್ಬಂಧ ಜಾರಿಯಾದರೆ ಯಾವೆಲ್ಲ ಸೇವೆ ಲಭ್ಯವಾಗುವುದಿಲ್ಲ ಹಾಗೂ ಯಾವ ಸೇವೆ ಲಭ್ಯವಾಗುತ್ತದೆ.

Paytm Payment Bank Latest Update: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ (Paytm Payments Bank) ಮೇಲೆ ಆರ್ ಬಿಐ (RBI) ನಿಷೇಧ ಹೇರಿದ್ದು, ಮಾರ್ಚ್ 15 ರಿಂದ ಅಂದರೆ ಇಂದಿನಿಂದ ನಿಷೇಧ ಜಾರಿಗೆ ಬರಲಿದೆ. ನಿಷೇಧದಿಂದಾಗಿ ಪೇಟಿಎಂ ಸಂಕಷ್ಟಕ್ಕೆ ಸಿಲುಕಿದ್ದು, ಸಾವಿರಾರು ಕೋಟಿ ರೂ. ನಷ್ಟ ಅನುಭವಿಸಿದೆ.

ಮಾರ್ಚ್ 15 ರಿಂದ ನಿರ್ಬಂಧ ಜಾರಿಯಾದರೆ ಪೇಟಿಎಂ ಗ್ರಾಹಕರು ಮತ್ತು ಫಾಸ್ಟ್‌ ಟ್ಯಾಗ್ ಅಳವಡಿಸಿಕೊಂಡವರ ಸೇವೆಗಳಲ್ಲಿ ವ್ಯತ್ಯಾಸವಾಗಲಿದೆ. ಇನ್ನು ಪೆಟಿಎಂ ನಿರ್ಬಂಧ ಜಾರಿಯಾದರೆ ಯಾವೆಲ್ಲ ಸೇವೆ ಲಭ್ಯವಾಗುವುದಿಲ್ಲ ಹಾಗೂ ಯಾವ ಸೇವೆ ಲಭ್ಯವಾಗುತ್ತದೆ ಎನ್ನುವ ಬಗ್ಗೆ ನಾವೀಗ ಈ ಲೇಖನದಲ್ಲಿ ಮಾಹಿತಿ ತಿಳಿಯೋಣ.

Paytm Payment Bank Latest Update
Image Credit: India Today

ಖಾತೆಯಲ್ಲಿರುವ ಹಣ ಏನಾಗಲಿದೆ..?
Paytm Payments ಬ್ಯಾಂಕ್ ಖಾತೆದಾರರು ತಮ್ಮ ಖಾತೆಯಲ್ಲಿ ಹಣ ಉಳಿದಿದ್ದರೆ ಮಾರ್ಚ್ 15 ರ ನಂತರವೂ ಹಣವನ್ನು ಹಲವು ರೀತಿಯಲ್ಲಿ ಬಳಸಬಹುದು. ಉಳಿತಾಯದ ಬಾಕಿಯನ್ನು ಫಾಸ್ಟ್‌ ಟ್ಯಾಗ್, ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (NCMC) ಖಾತೆಯ ವ್ಯಾಲೆಟ್‌ ಗಳ ಮೂಲಕ ಖರ್ಚು ಮಾಡಬಹುದು.

ಪೆಟಿಎಂ ನಲ್ಲಿ ಏನೆಲ್ಲಾ ಯಾವ ಸೇವೆ ಇರಲಿದೆ..? ಯಾವ ಸೇವೆ ಇರುವುದಿಲ್ಲ..?
•ಗ್ರಾಹಕರು Paytm ಪಾವತಿಗಳ ಬ್ಯಾಂಕ್ ಖಾತೆಗಳಿಗೆ ಹಣವನ್ನು ಜಮಾ ಮಾಡಲು ಸಾಧ್ಯವಿಲ್ಲ. ಆದಾಗ್ಯೂ, ಮಾರ್ಚ್ 15 ರ ನಂತರವೂ ಹಿಂಪಡೆಯುವಿಕೆ ಅಥವಾ ವರ್ಗಾವಣೆಯನ್ನು ಮಾಡಬಹುದು

•Paytm ಪಾವತಿಗಳ ಬ್ಯಾಂಕ್ ಖಾತೆಗಳಿಗೆ ಸಂಬಳ ಕ್ರೆಡಿಟ್ ಆಗುವುದಿಲ್ಲ, ಸರ್ಕಾರಿ ಸ್ಕೀಮ್ ಫಂಡ್ (DBT) ಕ್ರೆಡಿಟ್ ಆಗುವುದಿಲ್ಲ. ಆದಾಗ್ಯೂ Cashback ಮತ್ತು ಮರುಪಾವತಿಯನ್ನು ನೀಡಲಾಗುತ್ತದೆ.

Join Nadunudi News WhatsApp Group

Paytm Payment Bank
Image Credit: Reuters

•ಮಾರ್ಚ್ 15 ರ ನಂತರ ಗ್ರಾಹಕರು ತಮ್ಮ ವ್ಯಾಲೆಟ್‌ ಗಳಿಗೆ ಹಣವನ್ನು ಠೇವಣಿ ಮಾಡಲು ಸಾಧ್ಯವಾಗುವುದಿಲ್ಲ. ಆದಾಗ್ಯೂ, ಉಳಿದ ಹಣವನ್ನು ಖರ್ಚು ಮಾಡಬಹುದು.

•FastTag ಅನ್ನು Paytm ಪಾವತಿಗಳ ಬ್ಯಾಂಕ್ ಮೂಲಕ ರೀಚಾರ್ಜ್ ಮಾಡಲಾಗುವುದಿಲ್ಲ. ಆದಾಗ್ಯೂ, ಉಳಿದ ಮೊತ್ತವನ್ನು ಫಾಸ್ಟ್‌ ಟ್ಯಾಗ್‌ ಗೆ ಖರ್ಚು ಮಾಡಬಹುದು.

•ಮಾರ್ಚ್ 15 ರ ನಂತರವೂ, Paytm ಅಪ್ಲಿಕೇಶನ್ ಮೂಲಕ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಪಾವತಿ ಮಾಡಬಹುದು. ಆದಾಗ್ಯೂ ಕ್ರೆಡಿಟ್ ಕಾರ್ಡ್ ಮೂಲಕ ವ್ಯಾಲೆಟ್‌ ಗೆ ಹಣವನ್ನು ಠೇವಣಿ ಮಾಡಲು ಸಾಧ್ಯವಿಲ್ಲ.

RBI Ban On Paytm Payment Bank
Image Credit: One India

Join Nadunudi News WhatsApp Group