Pension Scheme: ಕೇಂದ್ರದಿಂದ ಪೆನ್ಷನ್ ಯೋಜನೆಯಲ್ಲಿ ಮಹತ್ವದ ಬದಲಾವಣೆ – ಇಲ್ಲಿದೆ ಕಂಪ್ಲೀಟ್

ಮಹಿಳೆಯರ ಪಿಂಚಣಿ ನಿಯಮದಲ್ಲಿ ಬದಲಾವಣೆ, ಇನ್ನು ಮುಂದೆ ಇವರನ್ನು ಸಹ ಪಿಂಚಣಿಯ ನಾಮಿನಿ ಆಗಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ

Pension Rules Change: ಸರ್ಕಾರಿ ಕೆಲಸದಲ್ಲಿರುವವರಿಗೆ ಪಿಂಚಣಿ ಸೌಲಭ್ಯ ಇರುತ್ತದೆ. ಇದು ನಿವೃತಿಯ ನಂತರ ಸಹಾಯಕ ಬರುತ್ತದೆ. ಹಾಗೆಯೆ ಸರ್ಕಾರಿ ಕೆಲಸದಲ್ಲಿರುವ ಮಹಿಳೆಯಾ ಪಿಂಚಣಿ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಯನ್ನು ಮಾಡಲಾಗಿದೆ.

ಸರ್ಕಾರಿ ವೃತ್ತಿಯಲ್ಲಿರುವ ಮಹಿಳೆಯ ಅಕಾಲಿಕ ಮರಣ ನಂತರ ಆಕೆಯ ಪಿಂಚಣಿಯನ್ನು ಆಕೆಯ ಪತಿ ಪಡೆಯಲು ಅರ್ಹನಾಗಿರುತ್ತಾನೆ. ಆದರೆ ಇನ್ನು ಮುಂದೆ ಈ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಮಹಿಳೆಯ ಇಚ್ಚಾನುಸಾರ ತನ್ನ ಮಕ್ಕಳು ಅಥವಾ ಕುಟುಂಬದ ಇತರ ಯಾವುದೇ ಸದಸ್ಯರ ಹೆಸರನ್ನು ನಾಮಿನಿಯಾಗಿ ಮಾಡಬಹುದಾಗಿದೆ.

Pension Rules Change
Image Credit: Original Source

ಈ ಬದಲಾವಣೆಗೆ ಮುಖ್ಯ ಕಾರಣ ಹೀಗಿದೆ

ಇತ್ತೀಚೆಗಿನ ದಿನಗಳಲ್ಲಿ ಮಹಿಳೆಯರ ಮೇಲೆ ಕೌಟುಂಬಿಕ ದೌರ್ಜನ್ಯ, ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮಹಿಳೆ ತನ್ನ ಪತಿಗೆ ಪಿಂಚಣಿ ಹಣ ನೀಡಲು ಇಷ್ಟಪಡದೇ ಇದ್ದಲ್ಲಿ ತನ್ನ ಮಕ್ಕಳಿಗೆ ವರ್ಗಾಯಿಸಲು ಅನುಕೂಲವಾಗುವಂತೆ ಈ ಹೊಸ ನಿಯಮ ರೂಪಿಸಲಾಗಿದೆ. ಇದಕ್ಕೆ ಮೊದಲು ಮಹಿಳೆಯ ಪತಿ ಕೂಡಾ ಮರಣವನ್ನಪ್ಪಿದ್ದರೆ ಮಾತ್ರ ಮಕ್ಕಳು ಅಥವಾ ಕುಟುಂಬ ಸದಸ್ಯರು ಆಕೆಯ ಪಿಂಚಣಿಗೆ ಅರ್ಹರಾಗಿರುತ್ತಿದ್ದರು. ಆದರೆ ಇದೀಗ ಕೇಂದ್ರ ಸರ್ಕಾರ ಈ ಯೋಜನೆಯಲ್ಲಿ ಮಹತ್ವದ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ.

Pension Scheme Latest Update
Image Credit: cleartax

ಪಿಂಚಣಿಯ ನಿಯಮಗಳು

Join Nadunudi News WhatsApp Group

ಮಹಿಳೆ ತಾನು ನೌಕರಿ ಮಾಡುವ ಮುಖ್ಯ ಕಚೇರಿಗೆ ಪತ್ರ ಬರೆದು ತಾನು ಯಾರಿಗೆ ತನ್ನ ನಂತರ ಪಿಂಚಣಿ ಕೊಡಲು ಬಯಸುತ್ತೇನೆಂದು ಲಿಖಿತವಾಗಿ ದಾಖಲೆ ನೀಡಬೇಕಾಗುತ್ತದೆ. ಒಂದು ವೇಳೆ ಮಹಿಳೆಗೆ ಮಕ್ಕಳಿಲ್ಲದೇ ಪತಿ ಮಾತ್ರವಿದ್ದ ಸಂದರ್ಭದಲ್ಲಿ ಆ ಪೆನ್ಷನ್ ಹಣ ಪತಿಗೇ ಸಂದಾಯವಾಗಲಿದೆ.

ಮಾನಸಿಕವಾಗಿ ಅನಾರೋಗ್ಯ ಪೀಡಿತ ಅಥವಾ ಅಪ್ರಾಪ್ತ ಮಕ್ಕಳಿದ್ದರೂ ಗಾರ್ಡಿಯನ್ ಎಂಬ ಕಾರಣಕ್ಕೆ ಪತಿಗೇ ಪಿಂಚಣಿ ಹಣ ಸಿಗಲಿದೆ. ಆದರೆ ಮಕ್ಕಳು ಪ್ರಾಪ್ತ ವಯಸ್ಸಿಗೆ ಬಂದ ಮೇಲೆ ಆ ಹಣ ಮಕ್ಕಳಿಗೆ ಸೇರಲಿದೆ. ಒಂದು ವೇಳೆ ಮಕ್ಕಳೂ ಪ್ರಾಪ್ತ ವಯಸ್ಸಿಗೆ ಬಂದು, ಪತಿಯೂ ಇದ್ದರೆ ಆ ಪೆನ್ಷನ್ ಹಣ ಮಕ್ಕಳಿಗೇ ಸಂದಾಯವಾಗಲಿದೆ.

Join Nadunudi News WhatsApp Group