Pension Hike: 60 ವರ್ಷ ಮೇಲ್ಪಟ್ಟ ಹಿರಿಯರಿಗೆ ಕೇಂದ್ರದಿಂದ ಗುಡ್ ನ್ಯೂಸ್, 2024 ರಿಂದ ಹೊಸ ಪಿಂಚಣಿ ನಿಯಮ.

2024 ರಿಂದ ಪಿಂಚಣಿದಾರರ ಪಿಂಚಣಿಯ ಮೊತ್ತ ಹೆಚ್ಚಳ.

Pensioners Pension Hike: ಜನರು ತಮ್ಮ ಭವಿಷ್ಯಕ್ಕಾಗಿ ವಿವಿಧ ಹೂಡಿಕೆಯ ಯೋಜನೆಗಳಲ್ಲಿ ಉಳಿತಾಯವನ್ನು ಪ್ರಾರಂಭಿಸಲು ಸರ್ಕಾರ ಅವಕಾಶವನ್ನು ಮಾಡಿಕೊಟ್ಟಿದೆ. ಇನ್ನು ಜೀವದ ಭದ್ರತೆಗಾಗಿ ಜೀವ ವಿಮಾ ಯೋಜನೆಗಳಿಂದ ಹಿಡಿದು ಹಿಡಿದು ನಿವೃತ್ತಿಯ ನಂತರ ಪಡೆಯುವ ಪಿಂಚಣಿಯ ಯೋಜನೆಗಳು ಸಾಕಷ್ಟಿವೆ. ಉದ್ಯೋಗಿಗಳು ತಮ್ಮ ನಿವೃತ್ತಿಯ ನಂತರ ಆರಾಮದಾಯಕ ಜೀವನ ನಿರ್ವಹಿಸಲು ಸರ್ಕಾರ ಪಿಂಚಣಿ ಯೋಜನೆಗಳು (Pension Scheme) ಸಹಾಯವಾಗುತ್ತದೆ.

Manohar Lal Khattar About Pension Hike
Image Credit: The Indian Express

ಮಾಸಿಕ ಪಿಂಚಣಿ ಪಡೆಯುವ ನಿಯಮದಲ್ಲಿ ಬದಲಾವಣೆ
ಸಾಮಾನ್ಯವಾಗಿ ವಯಸ್ಸಾದ ನಂತರ ಹಣಕ್ಕಾಗಿ ಬೇರೆಯವರ ಮೇಲೆ ಅವಲಂಬಿತವಾಗಬೇಕಾಗುತ್ತದೆ. 60 ವರ್ಷ ಮೇಲ್ಪಟ್ಟ ನಂತರ ಜೀವನ ನಿರ್ವಹಣೆ ಕಷ್ಟವಾಗುತ್ತದೆ. ವೃದ್ದಾಪ್ಯದಲ್ಲಿ ಬೇರೆಯವರಿಗೆ ಹೊರೆ ಆಗದಿರಲು ಪಿಂಚಣಿಯಲ್ಲಿನ ಹೂಡಿಕೆ ಉತ್ತಮ ಆಯ್ಕೆಯಾಗುತ್ತದೆ. ಇನ್ನು ಇದೀಗ ಕೇಂದ್ರ ಸರ್ಕಾರ ಪಿಂಚಣಿಯ ನಿಯಮದಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. ಪ್ರತಿ ತಿಂಗಳು ಮಾಸಿಕ ಪಿಂಚಣಿ ಪಡೆಯುವ ನಿಯಮದಲ್ಲಿ ಇನ್ನುಮುಂದೆ ಬದಲಾವಣೆ ಆಗಲಿದೆ. ನೀವು ಮಾಸಿಕ ಪಿಂಚಣಿ ಪಡೆಯುವವರಾಗಿದ್ದರೆ ಈ ಬದಲಾಗಿರುವ ಪಿಂಚಣಿಯ ನಿಯಮದ ಬಗ್ಗೆ ಮಾಹಿತಿ ತಿಳಿದುಕೊಂಡು ಪ್ರಯೋಜನ ಪಡೆದುಕೊಳ್ಳಿ.

60 ವರ್ಷ ಮೇಲ್ಪಟ್ಟ ಹಿರಿಯರಿಗೆ ಕೇಂದ್ರದಿಂದ ಗುಡ್ ನ್ಯೂಸ್
ಇದೀಗ ಹರಿಯಾಣದ ಪಿಂಚಣಿದಾರರಿಗೆ ಹೊಸ ವರ್ಷಕ್ಕೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಪಿಂಚಣಿದಾರರು ಮುಂದಿನ ವರ್ಷದಿಂದ ಹೆಚ್ಚಿನ ಪಿಂಚಣಿ ಪಡೆಯಲಿದ್ದಾರೆ. 2024 ರಿಂದ ಹರಿಯಾಣದ ಪಿಂಚಣಿದಾರರ ಪಿಂಚಣಿಯ ಮೊತ್ತ ಹೆಚ್ಚಳವಾಗಲಿದೆ. ವೃದ್ದಾಪ್ಯ ವೇತನದಲ್ಲಿ ನೀಡುವ ಮೊತ್ತವನ್ನು ಹೆಚ್ಚಿಸಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಅವರು ಮಾಹಿತಿ ನೀಡಿದ್ದಾರೆ.

ವೃದ್ದಾಪ್ಯ ವೇತನದಲ್ಲಿ ನೀಡುವ ಮೊತ್ತ ಹೆಚ್ಚಳದ ಬಗ್ಗರ್ ಮುಖ್ಯಮಂತ್ರಿ ಅವರು X ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದ್ದಾರೆ. ಹರಿಯಾಣದಲ್ಲಿ ಈ ಹೊಸ ನಿಯಮ ಜಾರಿಗೆ ಬರಲಿದ್ದು ಹರಿಯಾಣದ 60 ವರ್ಷ ಮೇಲ್ಪಟ್ಟ ಪಿಂಚಣಿದಾರರು ಈ ಯೋಜನೆಯ ಲಾಭವನ್ನ ಪಡೆದುಕೊಳ್ಳಬಹುದಾಗಿದೆ.

Pensioner's Pension Hike
Image Credit: Informal News

ಇಷ್ಟು ಹೆಚ್ಚಾಗಲಿದೆ ಪಿಂಚಣಿದಾರರ ಪಿಂಚಣಿ
ಸಿಎಂ ಮನೋಹರ್ ಲಾಲ್ ಖಟ್ಟರ್ ಅವರು ವೃದ್ಧಾಪ್ಯ ವೇತನ ಯೋಜನೆಯಡಿ ನೀಡುವ ಮೊತ್ತವನ್ನು ಮಾಸಿಕ 3,000 ರೂ.ಗೆ ಹೆಚ್ಚಿಸಲಾಗುವುದು ಎಂದು ಘೋಷಿಸಿದ್ದರು. ಇದೀಗ ನವೆಂಬರ್ 25 ರಂದು ಸಾಮಾಜಿಕ ಮಾಧ್ಯಮ ಪ್ಲಾಟ್‌ ಫಾರ್ಮ್ ಎಕ್ಸ್‌ ನಲ್ಲಿ ಪೋಸ್ಟ್ ಮಾಡುವ ಮೂಲಕ ಸಿಎಂ ಅವರು ಮಾಹಿತಿ ನೀಡಿದ್ದಾರೆ. ಜನವರಿ 1 2024 ರಿಂದ ಹರಿಯಾಣದಲ್ಲಿ ವೃದ್ಧಾಪ್ಯ ಪಿಂಚಣಿ 3,000 ರೂ. ಗೆ ಹೆಚ್ಚಾಗುತ್ತದೆ. ಪ್ರಸ್ತುತ ವೃದ್ಧರಿಗೆ ಪ್ರತಿ ತಿಂಗಳು 2,750 ರೂಪಾಯಿ ಪಿಂಚಣಿ ನೀಡಲಾಗುತ್ತಿದ್ದು, ಜನವರಿಯಿಂದ 250 ರೂ. ಅಂದರೆ 3000 ರೂಪಾಯಿಗೆ ಹೆಚ್ಚಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

Join Nadunudi News WhatsApp Group

Join Nadunudi News WhatsApp Group