Fuel Cess: ದೇಶದಲ್ಲಿ ಮತ್ತೆ ಇಷ್ಟು ಏರಿಕೆ ಆಗಲಿದೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ, ಸರ್ಕಾರದ ಘೋಷಣೆ ಮಾತ್ರ ಭಾಕಿ

ದೇಶದಲ್ಲಿ ಮತ್ತೆ ಇಷ್ಟು ಏರಿಕೆ ಆಗಲಿದೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ

Petrol And Diesel Price Hike : ಸದ್ಯ ರಾಜ್ಯದಲ್ಲಿ ವಿವಿಧ ಯೋಜನೆಗಳು ಅನುಷ್ಠಾನಗೊಳ್ಳುವುದರ ಜೊತೆಗೆ ಅನೇಕ ಹೊಸ ಹೊಸ ನಿಯಮಗಳು ಕೂಡ ಜಾರಿಯಾಗುತ್ತಿದೆ. ಕಾಂಗ್ರೆಸ್ ಸರ್ಕಾರದ ಅಧಿಕಾರವಧಿಯಿಂದ ಅನೇಕ ನಿಯಮಗಳು ಬದಲಾಗುತ್ತಾ ಬಂದಿದೆ. ಇದೀಗ ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆಯ ಏರಿಕೆಯ ಬಗ್ಗೆ ಚಿಂತನೆ ನಡೆಸುತ್ತಿದೆಯಂತೆ.

ಹೌದು, ಇಂಧನ ಸೆಸ್ ಅನ್ನು ವಿಧಿಸುವ ಯೋಜನೆ ಹೂಡಿದ್ದು, ಇಂಧನ ಸೆಸ್ ಜಾರಿಯಾದರೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗಲಿದೆ. ಮೊದಲೇ ಹಣದುಬ್ಬರತೆಯ ಪರಿಸ್ಥಿಯಿಂದ ಕಂಗಾಲಾಗಿರುವ ಜನರಿಗೆ ಮತ್ತೆ ಕಚ್ಚಾತೈಲಗಳ ಬೆಲೆ ಏರಿಕೆ ಇನ್ನಷ್ಟು ನಷ್ಟವನ್ನು ನೀಡಲಿದೆ. ರಾಜ್ಯ ಸರಕಾರ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಎಷ್ಟು ಪ್ರಮಾಣದಲ್ಲಿ ಏರಿಕೆ ಮಾಡಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Petrol And Diesel Price
Image Credit: Hindustantimes

ದೇಶದಲ್ಲಿ ಮತ್ತೆ ಇಷ್ಟು ಏರಿಕೆ ಆಗಲಿದೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ
ಅಸಂಘಟಿತ ಕಾರ್ಮಿಕರಿಗೆ ಅನುಕೂಲವಾಗುವಂತೆ ಆರ್ಥಿಕ ಸಂಪನ್ಮೂಲಗಳನ್ನು ಸಂಗ್ರಹಿಸಲು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸೆಸ್ ವಿಧಿಸಲು ಚಿಂತನೆ ನಡೆಸಲಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 50 ಪೈಸೆಯಿಂದ ಒಂದು ರೂಪಾಯಿ ಹೆಚ್ಚಳ ಮಾಡುವ ಚಿಂತನೆ ನಡೆದಿದೆ. ಇದರಿಂದ ವಾರ್ಷಿಕ 2,200 ಕೋಟಿ ರೂ. ಸಂಗ್ರಹದ ನಿರೀಕ್ಷೆಯಿದ್ದು, 1.80 ಕೋಟಿ ಕಾರ್ಮಿಕರಿಗೆ ಹಲವು ಯೋಜನೆಗಳನ್ನು ಯೋಜಿಸಬಹುದು.

ಸರ್ಕಾರದ ಘೋಷಣೆ ಮಾತ್ರ ಭಾಕಿ
ಬೀದಿ ಬದಿ ವ್ಯಾಪಾರಿಗಳು, ಗೃಹ ಕಾರ್ಮಿಕರು, ಬಿಸಿಯೂಟ ತಯಾರಕರು, ಅಕ್ಕಸಾಲಿಗರು, ವಿದ್ಯುತ್ ಕಾರ್ಮಿಕರು, ಸವಿತಾ ಸಮಾಜ, ಮಡಿವಾಳ ಸಮಾಜ, ಟೈಲರ್‌ ಗಳು, ಭೂರಹಿತ ಕಾರ್ಮಿಕರು ಸೇರಿದಂತೆ 42 ರೀತಿಯ ಕಾರ್ಮಿಕರನ್ನು ಅಸಂಘಟಿತ ಕಾರ್ಮಿಕರು ಎಂದು ಗುರುತಿಸಲಾಗಿದೆ.

Petrol And Diesel Price Hike
Image Credit: India TV News

ಪ್ರಸ್ತುತ ಕರ್ನಾಟಕದಲ್ಲಿ ಪೆಟ್ರೋಲ್ ಮಾರಾಟ ತೆರಿಗೆ 25 .94 ಹಾಗೆಯೆ ಡೀಸೆಲ್ ಮಾರಾಟ ತೆರಿಗೆ 14 .34 ರಷ್ಟಿದೆ. ಕೇಂದ್ರ ಅಬಕಾರಿ ತೆರಿಗೆ ಪೆಟ್ರೋಲ್ ಮೇಲೆಪ್ರತಿ ಲೀಟರ್ ಗೆ 7.40 ರೂ., ಹಾಗೂ ಡೀಸೆಲ್ ಮೇಲೆ ಪ್ರತಿ ಲೀಟರ್ ಗೆ 14.80 ರೂ. ವಿಧಿಸಿದೆ. ಇನ್ನು ಇಂಧನ ಸೆಸ್ ವಿಧಿಸುವ ಬಗ್ಗೆ ಸರ್ಕಾರ ಘೋಷಣೆ ಮಾಡುವುದು ಬಾಕಿ ಇದೆ. ಇಂಧನ ಸೆಸ್ ಜಾರಿಯಾದರೆ ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.

Join Nadunudi News WhatsApp Group

Join Nadunudi News WhatsApp Group