Couple Pension: ಕೇಂದ್ರದ ಈ ಯೋಜನೆಯಲ್ಲಿ ಗಂಡ ಮತ್ತು ಹೆಂಡತಿಗೆ ಪ್ರತಿ ತಿಂಗಳು ಸಿಗಲಿದೆ 5000 ರೂ, ಇಂದೇ ಅರ್ಜಿ ಸಲ್ಲಿಸಿ.

ಈ ಯೋಜನೆಯಡಿ ದಂಪತಿಗಳು ಪಡೆಯಬಹುದು 5000 ಪಿಂಚಣಿ, ದಂಪತಿಗಳಿಗಾಗಿ ಕೇಂದ್ರದಿಂದ ಹೊಸ ಯೋಜನೆ ಜಾರಿ.

PM Atal Pension Yojana Investment Profit: ಸದ್ಯ ಜನರಿಗೆ ತಮ್ಮ ಭವಿಷ್ಯದಲ್ಲಿ ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳೋ ವಿವಿಧ ಉಳಿತಾಯ ಯೋಜನೆಗಳು ಹಾಗೂ ಪಿಂಚಣಿ ಯೋಜನೆಗಳನ್ನು ಕೇಂದ್ರ ಸರ್ಕಾರ ಪರಿಚಯಿಸುತ್ತಿದೆ.

ಇನ್ನು ನಿವೃತ್ತಿಯ ನಂತರ ಜೀವನ ಸಾಮಾನ್ಯವಾಗಿ ಆರ್ಥಿಕ ವಿಷಯವಾಗಿ ಸ್ವಲ್ಪ ಕಷ್ಟವಾಗುತ್ತದೆ. ನಿವೃತ್ತಿಯ ನಂತರ ಹಣಕ್ಕಾಗಿ ಬೇರೆಯವರ ಮೇಲೆ ಅವಲಂಭಿಸಿರಬೇಕಾಗುತ್ತದೆ. ಹೀಗಾಗಿ ಈ ತೊಂದರೆ ಎದುರಾಗಬಾರದೆಂದಿದ್ದರೆ ಜನರು ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಿವುದು ಉತ್ತಮ.

PM Atal Pension Yojana
Image Credit: Vakilsearch

ದಂಪತಿಗಳಿಗಾಗಿ ಕೇಂದ್ರದಿಂದ ಹೊಸ ಯೋಜನೆ ಜಾರಿ
ಕೇಂದ್ರ ಸರ್ಕಾರ ಜನಸಾಮಾನ್ಯರಿಗಾಗಿ ವಿವಿಧ ಪಿಂಚಣಿಯ ಯೋಜನೆನ್ನು ಪರಿಚಯಿಸಿದೆ. ಕೇಂದ್ರ ಸರ್ಕಾರ ಜನರಿಗಾಗಿ PM Atal Pension Scheme ಅನ್ನು ಪರಿಚಯಿಸಿದೆ. ಈ ಯೋಜನೆಯ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿರಬಹುದು. ಈ ಯೋಜನೆಯಡಿ ಲಕ್ಷಾಂತರ ಜನರು ಹೂಡಿಕೆಯ ಆರಂಭಿಸಿದ್ದಾರೆ. ಇನ್ನು ಕೇಂದ್ರ ಸರ್ಕಾರ ಈ ಯೋಜನೆಯಡಿ ಗಂಡ ಹೆಂಡತಿ ಇಬ್ಬರಿಗೂ ಕೂಡ ಹೂಡಿಕೆ ಮಾಡುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ದಂಪತಿಗಳು ಜೊತೆಯಾಗಿ PM APY ಯಲ್ಲಿ ಹೂಡಿಕೆ ಮಾಡಿದರೆ 60 ವರ್ಷದ ನಂತರ ನಿವೃತ್ತಿಯ ಬದುಕನ್ನು ಆರಾಮದಾಯಕವಾಗಿ ಕಳೆಯಬಹುದಾಗಿದೆ.

PM Atal Pension Yojana
ಅಟಲ್ ಪಿಂಚಣಿ ಯೋಜನೆಯನ್ನು 2015 ರಲ್ಲಿ ಪ್ರಾರಂಭಿಸಲಾಯಿತು. ಈ ಯೋಜನೆಯಲ್ಲಿ ಹೂಡಿಕೆದಾರರು 60 ವರ್ಷ ವಯಸ್ಸಿನವರಾದಾಗ ಪ್ರತಿ ತಿಂಗಳು 1,000 ರೂ. ನಿಂದ 5,000 ರೂ.ವರೆಗೆ ಪಿಂಚಣಿ ಪಡೆಯಬಹುದು. ಅಟಲ್ ಪಿಂಚಣಿ ಯೋಜನೆಯ ಅಡಿಯಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಮಾಸಿಕ ಪಿಂಚಣಿ ಲಭ್ಯವಾಗಲಿದೆ. ನೀವು ಈ ಯೋಜನೆಗಳಲ್ಲಿ ಎಷ್ಟು ಬೇಗ ಹೂಡಿಕೆ ಮಾಡುತ್ತಿರೋ ಅಷ್ಟು ಹೆಚ್ಚು ಹಣವನ್ನು ಪಡೆಯುವ ಅವಕಾಶ ಇರುತ್ತದೆ.

PM Atal Pension Yojana Investment Profit
Image Credit: Sarkari Yojnaa

ಈ ಯೋಜನೆಯಡಿ ದಂಪತಿಗಳು ಪಡೆಯಬಹುದು 5000 ಪಿಂಚಣಿ
ಅಟಲ್ ಪಿಂಚಣಿ ಯೋಜನೆಯಲ್ಲಿ ನೀವು ಪ್ರತಿ ತಿಂಗಳು 210 ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ನಿವೃತ್ತಿಯ ನಂತರ ನಿಮಗೆ ಪ್ರತಿ ತಿಂಗಳು 5 ಸಾವಿರ ರೂಪಾಯಿ ಪಿಂಚಣಿ ಸಿಗುತ್ತದೆ. ಈ ಯೋಜನೆಗಳಲ್ಲಿ 210 ರೂ. ಗಿಂತ ಕಡಿಮೆ ಹೂಡಿಕೆ ಮಾಡಬಹುದು. ನಿಮ್ಮ ಹೂಡಿಕೆಗೆ ಅನುಗುಣವಾಗಿ ನೀವು ಪ್ರತಿ ತಿಂಗಳು ಪಡೆಯುವ ಪಿಂಚಣಿಯ ಹಣ ನಿರ್ಧಾರವಾಗುತ್ತದೆ. 18 ವರ್ಷದಿಂದ 40 ವರ್ಷದೊಳಗಿನ ಯಾವುದೇ ವ್ಯಕ್ತಿ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

Join Nadunudi News WhatsApp Group

ಹೂಡಿಕೆಯ ಮೊತ್ತದ ಮೇಲೆ ಪಿಂಚಣಿ ನಿರ್ಧಾರವಾಗಲಿದೆ
ಕನಿಷ್ಠ 20 ವರ್ಷಗಳವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬೇಕು. ಯೋಜನೆಯ ಲಾಭ ಪಡೆಯಲು ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ ಮತ್ತು ಉಳಿತಾಯ ಖಾತೆ ಇತ್ಯಾದಿಗಳು ಅವಶ್ಯಕ. 1,000 ರೂ.ನಿಂದ 5,000 ರೂ.ವರೆಗಿನ ಪಿಂಚಣಿ ಪಡೆಯಲು ಪ್ರತಿ ತಿಂಗಳು 42 ರಿಂದ 210 ರೂ. ಹೂಡಿಕೆ ಅಗತ್ಯವಾಗಿದೆ.

18 ವರ್ಷದ ವ್ಯಕ್ತಿ ಪ್ರತಿ ತಿಂಗಳು 42 ರೂಪಾಯಿ ಠೇವಣಿ ಇಟ್ಟರೆ, 60 ವರ್ಷಗಳ ನಂತರ ಪ್ರತಿ ತಿಂಗಳು 1,000 ರೂಪಾಯಿ ಪಿಂಚಣಿ ಪಡೆಯುತ್ತಾನೆ. 210 ರೂ.ಗಳನ್ನು ಠೇವಣಿ ಮಾಡುವುದರಿಂದ ರೂ. 5,000 ಪಿಂಚಣಿ ಪ್ರಯೋಜನವನ್ನು ಪಡೆಯುತ್ತದೆ.

Join Nadunudi News WhatsApp Group