PM Modi Target: ಮೋದಿ ಮತ್ತೆ ಪ್ರಧಾನಿಯಾದರೆ ದೇಶದಲ್ಲಿ ಜಾರಿಗೆ ಬರಲಿದೆ ಈ 6 ನಿಯಮ, ಮೋದಿ ಮುಂದಿನ 6 ಗುರಿ.

ಮೋದಿ ಮತ್ತೆ ಪ್ರಧಾನಿಯಾದರೆ ದೇಶದಲ್ಲಿ ಜಾರಿಗೆ ಬರಲಿದೆ ಈ 6 ನಿಯಮ

PM Modi 100 Days Target: ಚುನಾವಣೆಗೆ ಹೋಗುವ ಮುನ್ನವೇ ಬಿಜೆಪಿ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದರೆ ವಿಕಸಿತ ಭಾರತ 2047 ಕ್ಕೆ ಯೋಜನೆ ಸಿದ್ಧಪಡಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಅಂದರೆ ಭಾರತದ ಶತಮಾನೋತ್ಸವದ ಹೊತ್ತಿಗೆ ಏನೇನು ಯೋಜನೆಗಳು ಜಾರಿಯಾಗಬೇಕು ಎನ್ನುವುದನ್ನು ಉಲ್ಲೇಖಿಸಿದರು. ಈ ಚುನಾವಣೆಯ ನಂತರವೂ ಮೋದಿ ಇದೇ ವಿಷಯವನ್ನು ಹಲವು ಕಡೆ ಪ್ರಸ್ತಾಪಿಸಿದ್ದರು.

ಮೋದಿ ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ಮಾಡಬೇಕಾದ ಆದ್ಯತೆಯ ಯೋಜನೆಗಳಿಗೆ ಮೊದಲ ಎರಡು ಅವಧಿಯಲ್ಲಿ ಮೋದಿ ಅವರು ಸಚಿವರು ಮತ್ತು ಅಧಿಕಾರಿಗಳಿಗೆ ಟಾರ್ಗೆಟ್ ಹಾಕಿದ್ದರು. ಮೂರನೇ ಅವಧಿಗೂ ಇದೇ ರೀತಿಯ ಯೋಜನೆಗಳನ್ನು ಜುಲೈನಲ್ಲಿ ಆರಂಭಿಸಲು ಸಿದ್ಧತೆಗಳು ಆರಂಭವಾಗಬಹುದು ಎಂಬ ಮಾತುಗಳು ಕೇಳಿಬಂದಿವೆ. ಮೋದಿ ಮತ್ತೆ ಪ್ರಧಾನಿಯಾದರೆ ದೇಶದಲ್ಲಿ ಜಾರಿಗೆ ಬರಲಿರುವ ನಿಯಮಗಳ ಬಗ್ಗೆ ಮಾಹಿತಿ ಇಲ್ಲಿದೆ.

PM Modi 100 Days Target
Image Credit: DD News

ಮೋದಿ ಮತ್ತೆ ಪ್ರಧಾನಿಯಾದರೆ ದೇಶದಲ್ಲಿ ಜಾರಿಗೆ ಬರಲಿದೆ ಈ 6 ನಿಯಮ
ಮೊದಲ ನೂರು ದಿನಗಳಲ್ಲಿ ಏನು ಮಾಡಬಹುದು..? ಅದಕ್ಕೆ ಸಿದ್ಧತೆ ಹೇಗಿರಬೇಕು..? ತಂಡದಲ್ಲಿ ಯಾರು ಇರಬೇಕು..? ಹಾಗೆಯೆ ದಿಕ್ಸೂಚಿ ಮತ್ತು ಪೂರ್ವಸಿದ್ಧತಾ ಯೋಜನೆಗಳನ್ನು ರೂಪಿಸುವಂತೆ ಮೋದಿ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು. ಎಲ್ಲಕ್ಕಿಂತ ಮುಖ್ಯವಾಗಿ ಹತ್ತು ಗುಂಪುಗಳನ್ನು ರಚಿಸಬೇಕು. ಪ್ರತಿ ಗುಂಪಿಗೆ ಕಾರ್ಯದರ್ಶಿ ದರ್ಜೆಯ ಅಧಿಕಾರಿ ಇರುತ್ತಾರೆ. ಅವರು ಸಂಯೋಜಕರಾಗಿ ಕೆಲಸ ಮಾಡಲಿ. ನಿಗದಿತ ವಿಷಯಾಧಾರಿತ ಗುರಿಗಳನ್ನು 100 ದಿನಗಳಲ್ಲಿ ಪೂರ್ಣಗೊಳಿಸಲು ಕಾರ್ಯ ಯೋಜನೆಯನ್ನು ರೂಪಿಸಬೇಕು. ಜುಲೈ 1 ರಿಂದ ಕನಿಷ್ಠ 100 ದಿನದ ಗುರಿಯೊಂದಿಗೆ ಕಾರ್ಯಕ್ರಮಗಳನ್ನು ಆರಂಭಿಸಬೇಕು ಎಂದು ಮೋದಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಮೋದಿ ಮುಂದಿನ ಗುರಿ ಏನು…?
•UPSC ಫೌಂಡೇಶನ್ ಕೋರ್ಸ್‌ಗಳನ್ನು ಬದಲಾಯಿಸುವುದು.

•ಮರು ಪರೀಕ್ಷೆಯನ್ನು ಒಳಗೊಂಡಂತೆ ಹಲವಾರು ವರ್ಷಗಳಿಂದ ಹಿಂದಿನ ರೀತಿಯಲ್ಲಿಯೇ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ

Join Nadunudi News WhatsApp Group

•IAS, IPS, IFS ಸೇರಿದಂತೆ ಭಾರತದ ಪ್ರಮುಖ ನಾಗರಿಕ ಸೇವಾ ಅಧಿಕಾರಿಗಳ ಆಡಳಿತ ಮತ್ತು ಕೆಲಸದ ಶೈಲಿಯ ರೇಟಿಂಗ್ ಇಲ್ಲ.

•ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಸುಧಾರಿಸುವ ಯೋಜನೆಯನ್ನು ಸಹ ಇದಕ್ಕೆ ಸೇರಿಸಬಹುದು.

•ಒಂದು ದೇಶ ಒಂದು ಚುನಾವಣೆಯ ಅಡಿಯಲ್ಲಿ ದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಉದ್ದೇಶವನ್ನು ಬಿಜೆಪಿ ಹೊಂದಿದೆ. ಹೀಗೆ ಹೇಳಿದರೂ ಅದಕ್ಕೊಂದು ರೂಪ ಸಿಕ್ಕಿಲ್ಲ. ಇದಕ್ಕಾಗಿ ಯೋಜನೆ ರೂಪಿಸುವ ಸಾಧ್ಯತೆಗಳಿವೆ.

•ಏಕರೂಪ ನಾಗರಿಕ ಸಂಹಿತೆ ಜಾರಿ ಬಿಜೆಪಿಯ ಪ್ರಮುಖ ಅಜೆಂಡಾ. ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳು ನಡೆದಿದ್ದರೂ ಅನುಷ್ಠಾನದ ವಿಷಯದಲ್ಲಿ ಸಾಕಷ್ಟು ನೀತಿ ನಿರೂಪಣೆ ಬಾಕಿ ಇದೆ.

Prime Minister Narendra Modi
Image Credit: The Hindu

Join Nadunudi News WhatsApp Group