Post Office Scheme: ಮೋದಿ ತನ್ನ ಎಲ್ಲಾ ಹಣವನ್ನ ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಇಟ್ಟಿದ್ದಾರೆ, ನೀವು ಹೂಡಿಕೆ ಮಾಡಿ

ನರೇಂದ್ರ ಮೋದಿ ಹೂಡಿಕೆ ಮಾಡಿರುವ ಪೋಸ್ಟ್ ಆಫೀಸ್ ನ ಈ ಯೋಜನೆಯ ಬಗ್ಗೆ ಮಾಹಿತಿ

PM Narendra Modi FD Investment: ದೇಶದ ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮೇ 13 ರಂದು ಉತ್ತರ ಪ್ರದೇಶದ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಮೂರನೇ ಭಾರಿಗೆ ಸ್ಪರ್ದಿಸಲು ತಮ್ಮ ಚುನಾವಣಾ ನಾಮಪತ್ರವನ್ನು ಸಲ್ಲಿಸಿದ್ದಾರೆ. ಈ ವೇಳೆ ಅವರು ತಮ್ಮ ಬ್ಯಾಂಕ್ ಬ್ಯಾಲೆನ್ಸ್, ಆಸ್ತಿ, ಹಾಗೆ ತಮ್ಮ ಹೂಡಿಕೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಇದೀಗ ನಾವು ನರೇಂದ್ರ ಮೋದಿ ಹೂಡಿಕೆ ಮಾಡಿರುವ ಪೋಸ್ಟ್ ಆಫೀಸ್ ನ ಈ ಯೋಜನೆಯ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

National Saving Certificate
Image Credit: India TV News

PM Narendra Modi Investment
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಚುನಾವಣಾ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಹೂಡಿಕೆ ಮಾಡಿರುವ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸುಮಾರು 2.85 ಕೋಟಿ ಹಣವನ್ನು FD ಇಟ್ಟಿದ್ದಾರೆ. ಇದ್ದಲ್ಲದೆ ಪೋಸ್ಟ್ ಆಫೀಸ್ ನ ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ ನಲ್ಲಿ 9,12,338 ರೂ ಹೂಡಿಕೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

National Saving Certificate
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಯು ಸರ್ಕಾರೀ ಚಾಲಿತ ಉಳಿತಾಯ ಯೋಜನೆಯಾಗಿದೆ. ಇದರಲ್ಲಿ ವಾರ್ಷಿಕವಾಗಿ 7.7 ಪ್ರತಿಶತ ಬಡ್ಡಿಯನ್ನು ಬಡ್ಡಿಯನ್ನು ನೀಡಲಾಗುತ್ತದೆ. ಒಬ್ಬರು ಒಂದೇ ಖಾತೆ ಅಥವಾ ಜಂಟಿ ಖಾತೆಯನ್ನು ತೆರೆಯಬಹುದು. ಅಪ್ರಾಪ್ತ ವಯಸ್ಕರ ಖಾತೆಯನ್ನು ಪೋಷಕರು ತೆರೆಯಬಹುದು. NSC 5 ವರ್ಷಗಳ ಲಾಕ್-ಇನ್ ಅವಧಿಯೊಂದಿಗೆ ಬರುತ್ತದೆ.

Post Office Time deposit scheme
Image Credit: Original Source

ಇನ್ನಿತರ ಹೂಡಿಕೆ ಯೋಜನೆ
*Post Office Time deposit scheme
Post Office Time Deposit ನಲ್ಲಿ 1 ರಿಂದ 5 ವರ್ಷಗಳ ಅವಧಿಗೆ ಹೂಡಿಕೆ ಮಾಡಬಹುದಾಗಿದೆ. 5 ವರ್ಷಗಳ ಅವಧಿಯ ಹೂಡಿಕೆಗೆ ಶೇ. 7.5 ರಷ್ಟು ಬಡ್ಡಿ, ಒಂದು ವರ್ಷದ ಅವಧಿಗೆ 6.9 ಶೇ. ಬಡ್ಡಿ, 2-3 ವರ್ಷದ ಅವಧಿಗೆ ಶೇ. 7 ರಿಂದ 7.1 ರಷ್ಟು ಬಡ್ಡಿಯನ್ನು ನೀಡುತ್ತದೆ.

*Senior Citizen Saving Scheme
60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗಾಗಿ ಈ ಯೋಜನೆಯನ್ನು ಜಾರಿಗೆ ತಂದಿದೆ. ಪ್ರಸ್ತುತ 8.2 ರಷ್ಟು ಬಡ್ಡಿಯನ್ನು ನೀಡಲಾಗುತ್ತಿದೆ.

Join Nadunudi News WhatsApp Group

*Post Office Monthly Investment Scheme
ಪೋಸ್ಟ್ ಆಫೀಸ್ ನ ಈ MIS ಯೋಜನೆಯ ಕನಿಷ್ಠ ಹೂಡಿಕೆ ಯೋಜನೆಯ ಮೊತ್ತ 1000 ಹಾಗೆ ಗರಿಷ್ಠ 9 ಲಕ್ಷದ ವರೆಗೆ ಹೂಡಿಕೆ ಮಾಡಬಹುದಾಗಿದೆ.

Post Office Monthly Investment Scheme
Image Credit: Wintwealth

Join Nadunudi News WhatsApp Group