PMSBY v/s PMJJBY: ದೇಶದ ಎಲ್ಲಾ ಜನರಿಗೆ ಕೇಂದ್ರದಿಂದ ಇನ್ನೆರಡು ಬಂಪರ್ ಯೋಜನೆ, ಎಲ್ಲರಿಗು ಸಿಗಲಿದೆ 2 ಲಕ್ಷ ರೂ

ಈ ಎರಡು ವಿಮಾ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ 2 ಲಕ್ಷ ಲಾಭ ಪಡೆಯಬಹುದಾಗಿದೆ.

PMSBY And PMJJBY Insurance Policy: ಸಮಾಜದ ಪ್ರತಿಯೊಂದು ವರ್ಗದ ಜನರಿಗೆ ಅನುಕೂಲವಾಗುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿವಿಧ ಯೋಜನೆಗಳನ್ನು ಪರಿಚಯಿಸುತ್ತಿರುತ್ತದೆ. ಎಲ್ಲ ವರ್ಗದ ಬಡ ಜನರು ಹೆಚ್ಚಿನ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎನ್ನುವ ಉದ್ದೇಶದಿಂದ ಸರ್ಕಾರ ವಿವಿಧ ಸೌಲಭ್ಯವನ್ನು ಜಾರಿಗಳಿಸುತ್ತಿರುತ್ತದೆ.

ಇನ್ನು ಸರ್ಕಾರ ನೀಡುತ್ತಿರುವ Term Insurance Policy ಬಗ್ಗೆ ತಿಳಿದಿದೆಯೇ..? ಈ ಜೀವ ವಿಮ ಸೌಲಭ್ಯವನ್ನು ಸರ್ಕಾರ ದೇಶದ ಬಡ ಜನರಿಗಾಗಿ ಪರಿಚಯಿಸುತ್ತಿದೆ. ಈ ಈ ಜೀವ ವಿಮ ಯೋಜನೆಗಳಲ್ಲಿ ಹೂಡಿಕೆಯನ್ನು ಮಾಡುವುದರಿಂದ ಲಕ್ಷ ಮೊತ್ತದ ಲಾಭವನ್ನು ಕೂಡ ಪಡೆಯಬಹುದು. ಇದೀಗ ನಾವು ಈ ಲೇಖನದಲ್ಲಿ ಸರ್ಕಾರ ಪರಿಚಯಿಸಿರುವ ಜೀವ ವಿಮ ಯೋಜನೆಗಳ ಬಗ್ಗೆ ಮಾಹಿತಿ ತಿಳಿಯೋಣ.

PMJJBY Insurance Policy
Image Credit: Shivalikbank

ಈ ಎರಡು ವಿಮಾ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಪಡೆಯಬಹುದು 2 ಲಕ್ಷ ಲಾಭ
ಕೇಂದ್ರ ಸರ್ಕಾರ ಜನರಿಗಾಗಿ Pradhan Mantri Jeevan Jyoti Bima Yojana ಮತ್ತು Pradhan Mantri Suraksha Bhima Yojana ಹೆಸರಿನ ಎರಡು ವಿಮಾ ಯೋಜನೆಗಳನ್ನು ಪರಿಚಯಿಸಿದೆ. ಈ ಎರಡು ಯೋಜನೆಗಳಲ್ಲಿ ನೀವು ಹೂಡಿಕೆ ಮಾಡಿದರೆ 2 ಲಕ್ಷ ವಿಮೆಯ ಲಾಭವನ್ನು ಪಡೆಯಬಹುದು. ಈ ಎರಡು ಯೋಜನೆಗಳಲ್ಲಿ ಮಾಡಿದವರು, ಯಾವುದೇ ಬ್ಯಾಂಕ್ ಖಾತೆಯಲ್ಲಿ ಆಟೋ ಡೆಬಿಟ್ ಆಯ್ಕೆಯನ್ನು ಆರಿಸಿದ್ದರೆ ನಿಮ್ಮ ಖಾತೆಯಿಂದ ಮೊತ್ತವು ಕಡಿತವಾಗುತ್ತದೆ.

ನೀವು ಯೋಜನೆಯ ಮೇಲೆ ಮಾಡಿದ ಆಯ್ಕೆಯ ಆಧಾರದ ಮೇರೆಗೆ ವಾರ್ಷಿಕ ಪ್ರೀಮಿಯಂ ಮೊತ್ತ ಕಡಿತವಾಗಿದೆ. ಭಾರತದ ಯಾವುದೇ ಪ್ರಜೆಯು ಈ ಎರಡು ಯೋಜನೆಯ ಪ್ರಯೋಜನವನ್ನು ಪಡೆಯಬಹುದು. ಅರ್ಜಿದಾರರ ವಯಸ್ಸು 18 ವರ್ಷಕ್ಕಿಂತ ಮೇಲ್ಪಟ್ಟು ಮತ್ತು 50 ವರ್ಷಕ್ಕಿಂತ ಕಡಿಮೆ ಇರುವುದು ಕಡ್ಡಾಯವಾಗಿದೆ. ಈ ಪಾಲಿಸಿಯು 55 ವರ್ಷ ವಯಸ್ಸಿನವರೆಗೆ ಇರುತ್ತದೆ.

PMSBY Insurance Policy
Image Credit: tataaia

ಯೋಜನೆಗಳ ಹೂಡಿಕೆಯ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ
ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯಲ್ಲಿ 18 ರಿಂದ 70 ವಯಸ್ಸಿನ ನಾಗರಿಕರು ರೂ. 20 ರೂಗಳನ್ನು ಹೂಡಿಕೆ ಮಾಡಬೇಕಾಗುತ್ತದೆ. ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆಗೆ ಅರ್ಜಿ ಸಲ್ಲಿಸುವ ನಾಗರಿಕರು ವರ್ಷಕ್ಕೆ 436 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಟರ್ಮ್ ಪ್ಲಾನ್ ಅಡಿಯಲ್ಲಿ, ವ್ಯಕ್ತಿಯ ಅಕಾಲಿಕ ಮರಣದ ಸಂದರ್ಭದಲ್ಲಿ ಅವನ ಕುಟುಂಬವು ನಿಗದಿತ ಮೊತ್ತದ ವಿಮೆಯನ್ನು ಪಡೆಯುತ್ತದೆ.

Join Nadunudi News WhatsApp Group

ಈ ಯೋಜನೆಯಲ್ಲಿ ಸಾವಿನ ಕಾರಣವನ್ನು ಕೇಳದೆ ಮೃತರ ಕುಟುಂಬಕ್ಕೆ ನಿಗದಿತ ಮೊತ್ತವನ್ನು ನೀಡಲಾಗುತ್ತದೆ. ವಾರ್ಷಿಕ 436 ರೂ. ಹೂಡಿಕೆ ಮಾಡುವ ಮೂಲಕ 2 ಲಕ್ಷ ಹಣವನ್ನು ಪಡೆಯಬಹುದಾಗಿದೆ. ಇನ್ನು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಪಾಸ್‌ ಪೋರ್ಟ್ ಅಳತೆಯ ಫೋಟೋ, ಬ್ಯಾಂಕ್ ಪಾಸ್‌ ಬುಕ್ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡುವ ಮೂಲಕ ನೀವು ಅರ್ಜಿ ಸಲ್ಲಿಸಿ ಯೋಜನೆಯಲ್ಲಿ ಹೂಡಿಕೆಯನ್ನು ಆರಂಭಿಸಬಹುದು.

Join Nadunudi News WhatsApp Group