MIS: ಗಂಡ ಮತ್ತು ಹೆಂಡತಿಗೆ ಪೋಸ್ಟ್ ಆಫೀಸ್ ಈ ಯೋಜನೆಯ ಅಡಿಯಲ್ಲಿ ಸಿಗಲಿದೆ 5 ಲಕ್ಷ ರೂ, ಇಂದೇ ಅರ್ಜಿ ಸಲ್ಲಿಸಿ.

ಪತಿ ಪತ್ನಿಯರಿಗೆ ಈ ಯೋಜನೆಯ ಅಡಿಯಲ್ಲಿ ಸಿಗಲಿದೆ 5 ಲಕ್ಷ ಲಾಭ.

Post Office Monthly Income Scheme: ಮಧ್ಯಮ ವರ್ಗದ ಜನರಿಗೆ ಅಂಚೆ ಕಚೇರಿಯಲ್ಲಿನ ಮಾಸಿಕ ಹೂಡಿಕೆಯು ಬಹು ಮೊತ್ತದ ಲಾಭವನ್ನು ನೀಡುವ ಮಾರ್ಗವಾಗಿದೆ. ಅಂಚೆ ಇಲಾಖೆಯ ವಿವಿಧ ಯೋಜನೆಗಳಲ್ಲಿ ಮಾಸಿಕ ಸಣ್ಣ ಮೊತ್ತದ ಹೂಡಿಕೆಯಲ್ಲಿ ದೊಡ್ಡ ಮೊತ್ತದ ಲಾಭ ಪಡೆಯುವ ಅವಕಾಶ ಇರುತ್ತದೆ. ಅದರಲ್ಲಿ Post Office Monthly Income Scheme (POMIS ) ಕೂಡ ಒಂದಾಗಿದೆ.

POMIS ನಲ್ಲಿ ನೀವು ಒಮ್ಮೆ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭವನ್ನು ಪಡೆಯಬಹುದು. ಮಾಸಿಕ ಆದಾಯ ನೀಡುವ ಯೋಜನೆಯ ಹೂಡಿಕೆಯ ವಿಧಾನದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. ಈ ಯೋಜನೆಯಡಿ ಹೂಡಿಕೆ ಮಾಡಿದರೆ ಗಂಡ ಹೆಂಡತಿ ಇಬ್ಬರು ಆದಾಯವನ್ನು ಪಡೆಯಬಹುದು.

Post Office Monthly Income Scheme Profit
Image Credit: Samacharjagat

ದಂಪತಿಗಳಿಗಾಗಿ ಅಂಚೆ ಇಲಾಖೆಯ ಭರ್ಜರಿ ಸ್ಕೀಮ್
ಇನ್ನು Post Office Monthly Income Scheme ಹೂಡಿಕೆದಾರರಿಗೆ ಭದ್ರತೆಯನ್ನು ನೀಡುತ್ತದೆ ಎನ್ನಬಹುದು. ಕಡಿಮೆ ಅಪಾಯದ ಹೂಡಿಕೆಯಲ್ಲಿ ಈ ಯೋಜನೆಯು ಒಂದಾಗಿದೆ. ಪ್ರತಿ ತಿಂಗಳ ಹೂಡಿಕೆಯಲ್ಲಿ ಮೆಚ್ಯುರಿಟಿ ಅವಧಿಯ ನಂತರ ನಿಗದಿತ ಮೊತ್ತವನ್ನು ಪಡೆಯಬಹುದು. ಸ್ಥಿರ ಆದಾಯದ ಯೋಜನೆಗೆ Post Office Monthly Income Scheme ಉತ್ತಮ ಆಯ್ಕೆ ಎಂದರೆ ತಪ್ಪಾಗಲಾರದು. ಇದು ಅಲ್ಪಾವಧಿ ಹಾಗೂ ದೀರ್ಘಾವಧಿಯ ಹೂಡಿಕೆಯಾಗಿದ್ದು ಯೋಜನೆಯ ಅವಧಿಯು 5 ವರ್ಷದ್ದಾಗಿದೆ.

Post Office ಮಾಸಿಕ ಯೋಜನೆಯಡಿ ಗಂಡ ಹಾಗು ಹೆಂಡತಿ ಅಂಚೆ ಕಚೇರಿಯಲ್ಲಿ ಜಂಟಿ ಖಾತೆಯನ್ನು ತೆರೆಯಬೇಕಾಗುತ್ತದೆ (Post Office Joint Account). ಖಾತೆಯನ್ನು ತೆರೆದ ನಂತರ, ನೀವು ಬಡ್ಡಿಯಿಂದ ಮಾತ್ರ ಪ್ರತಿ ತಿಂಗಳು ಉತ್ತಮ ಆದಾಯವನ್ನು ಪಡೆಯುತ್ತೀರಿ. ಪೋಸ್ಟ್ ಆಫೀಸ್ ಈ ಯೋಜನೆಯು ಪತಿ ಪತ್ನಿಯರಿಗೆ ಮಾಸಿಕ ಹಣವನ್ನ ಪಿಂಚಣಿ ರೂಪದಲ್ಲಿ ನೀಡುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ.

Post Office Monthly Income Scheme 2024
Image Credit: ABP News

ಗಂಡ ಮತ್ತು ಹೆಂಡತಿಗೆ ಪೋಸ್ಟ್ ಆಫೀಸ್ ಈ ಯೋಜನೆಯ ಅಡಿಯಲ್ಲಿ ಸಿಗಲಿದೆ 5 ಲಕ್ಷ ರೂ
ಅಂಚೆ ಕಛೇರಿಯ ಈ ಯೋಜನೆಯಲ್ಲಿ ಏಕ ಮತ್ತು ಜಂಟಿ ರೀತಿಯ ಖಾತೆಯನ್ನು ತೆರೆಯಬಹುದು. ಜಂಟಿ ಖಾತೆಯನ್ನು ಎರಡರಿಂದ ಮೂರು ಜನರು ಒಟ್ಟಿಗೆ ತೆರೆಯಬಹುದು. ನೀವು ಒಂದೇ ಖಾತೆಯಲ್ಲಿ ರೂ. 9 ಲಕ್ಷದವರೆಗೆ ಮತ್ತು ಜಂಟಿ ಖಾತೆಯಲ್ಲಿ ರೂ. 15 ಲಕ್ಷದವರೆಗೆ ಜಮಾ ಮಾಡಬಹುದು. ನೀವು ಮತ್ತು ನಿಮ್ಮ ಪತ್ನಿ ಖಾತೆ ತೆರೆದರೆ ಕೇವಲ ಬಡ್ಡಿಯಿಂದಲೇ 5 ಲಕ್ಷ ರೂ.ಗೂ ಅಧಿಕ ಆದಾಯ ಗಳಿಸುತ್ತೀರಿ.

Join Nadunudi News WhatsApp Group

ನೀವು ಏಕ ಖಾತೆಯಲ್ಲಿ ಗರಿಷ್ಠ 9 ಲಕ್ಷದವರೆಗೆ ಠೇವಣಿ ಮಾಡಬಹುದು, ಈ ಸಂದರ್ಭದಲ್ಲಿ ನೀವು ಪ್ರತಿ ತಿಂಗಳು 5550 ರೂಪಾಯಿಗಳ ಬಡ್ಡಿಯನ್ನು ಪಡೆಯುತ್ತೀರಿ. ಹೀಗೆ ಒಂದು ವರ್ಷದಲ್ಲಿ 66600 ರೂ.ಗಳನ್ನು ಬಡ್ಡಿಯಾಗಿ ಮತ್ತು 5 ವರ್ಷಗಳಲ್ಲಿ 333000 ರೂ.ಗಳನ್ನು ಬಡ್ಡಿಯಿಂದ ಹಣವನ್ನು ಗಳಿಸಬಹುದು.

Join Nadunudi News WhatsApp Group