Marriage: ಇನ್ಮುಂದೆ ಮದುವೆಯ ಚಿಂತೆ ಬೇಡ, 1 ರೂ ಕೊಟ್ಟರೆ ಸಾಕು ಇವರೇ ನಿಮ್ಮ ಮದುವೆ ಮಾಡುತ್ತಾರೆ.

ಈ ಯೋಜನೆಯಡಿ ಕೇವಲ 1 ರೂ. ನಲ್ಲಿ ಮದುವೆ ಮಾಡಿಕೊಳ್ಳಬಹುದಾಗಿದೆ.

Poor Couples Get Married For Just 1 Rupee: ಸಾಮಾನ್ಯವಾಗಿ ಎಲ್ಲರೂ ಕೂಡ ಮದುವೆಯ ಬಗ್ಗೆ ಒಂದು ರೀತಿಯ ಕನಸು ಕಟ್ಟಿಕೊಂಡಿರುತ್ತಾರೆ. ಹಿಂದೂ ಧರ್ಮದಲ್ಲಿ ಮದುವೆಗೆ ಅದರದ್ದೇ ಆದಂತಹ ಮಹತ್ವವಿರುತ್ತದೆ. ಇನ್ನು ಮದುವೆಯನ್ನು ಬಹಳ ವಿಶೇಷವಾಗಿ ಮಾಡಿಕೊಳ್ಳಬೇಕು ಎನ್ನುವ ಯೋಚನೆ ಸಾಕಷ್ಟು ಜನರಲ್ಲಿ ಇರುತ್ತದೆ.

ಆದರೆ ಒಂದು ಮದುವೆ ಮಾಡಿ ಮುಗಿಸುವುದು ಸುಲಭದ ಮಾತಲ್ಲ. ಇದಕ್ಕಾಗಿ ಸಾಕಷ್ಟು ಕಷ್ಟಪಡಬೇಕಾಗುತ್ತದೆ. ಮದುವೆಗೆ ಎಷ್ಟು ಹಣವಿದ್ದರೂ ಸಾಕಾಗುವುದಿಲ್ಲ ಎನ್ನಬಹುದು. ಮದುವೆಗಾಗಿ ವರ್ಷಗಳಿಂದಲೇ ಹಣವನ್ನು ಕೂಡಿಡಬೇಕಾದ ಅನಿವಾರ್ಯತೆ ಇರುತ್ತದೆ. ಆದರೆ ಇದೀಗ ಮದುವೆಯ ಕನಸು ಕಟ್ಟಿಕೊಂಡವರಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ.

Amma Foundation Marriage
Image Credit: Times Of India

ಇನ್ಮುಂದೆ ಮದುವೆಯ ಚಿಂತೆ ಬೇಡ
ಹೌದು, ನಿಮ್ಮ ಮದುವೆಯ ಕನಸನ್ನು ನನಸು ಮಾಡಿಕೊಳ್ಳಲು ನೀವು ಹೆಚ್ಚು ಕಷ್ಟಪಡುವ ಅಗತ್ಯ ಇರುವುದಿಲ್ಲ. ಏಕೆಂದರೆ ಮದುವೆಗೆ ಮಾಡಿಕೊಳ್ಳಲು ನೆರವಾಗಲು ಇದೀಗ ವಿಶೇಷ ಯೋಜನೆ ಜಾರಿಯಾಗಿದೆ. ಈ ಯೋಜನೆಯಡಿ ಯಾವುದೇ ಖರ್ಚಿಲ್ಲದೆ ಮದುವೆಯಗಬಹುದು.

ಈ ವಿಶೇಷ ಯೋಜನೆಯಡಿ ಕೇವಲ 1 ರೂ. ನ ಮೂಲಕ ನೀವು ನೋಂದಣಿ ಮಾಡಿಕೊಂಡರೆ ಯಾವುದೇ ಖರ್ಚಿಲ್ಲದೆ ನಿಮಗೆ ಮದುವೆಯನ್ನು ಮಾಡಿಸಲಿದ್ದಾರೆ. ಆದರೆ ಈ ಯೋಜನೆಯ ಲಾಭ ಎಲ್ಲ ಅರ್ಹರಿಗೂ ಲಭ್ಯವಾಗುವುದಿಲ್ಲ. ಈ ಯೋಜನೆಯ ಲಾಭವನ್ನು ಪಡೆಯಲು ಶರತ್ತುಗಳಿವೆ. ಇಂತವರು ಮಾತ್ರ ಈ ಯೋಜನೆಯಡಿ ಕೇವಲ 1 ರೂ. ನಲ್ಲಿ ಮದುವೆ ಮಾಡಿಕೊಳ್ಳಬಹುದಾಗಿದೆ.

Poor couples get married for just 1 Rupee
Image Credit: Nepal News

1 ರೂ ಕೊಟ್ಟರೆ ಸಾಕು ಇವರೇ ನಿಮ್ಮ ಮದುವೆ ಮಾಡುತ್ತಾರೆ
ತೆಲಂಗಾಣದ ನಾಗಮಲ್ಲ ಅನಿಲಕುಮಾರ್ ಮತ್ತು ಅರುಣಾ ಇಬ್ಬರು ಅಮ್ಮ ಫೌಂಡೇಶನ್‌ ನ ನಿರ್ವಾಹಕರು. ಇತ್ತೀಚೆಗೆ ಅವರು ರುಪೇ ಫೌಂಡೇಶನ್ ಎಂಬ ಸೇವಾ ಸಂಸ್ಥೆಯನ್ನು ಸ್ಥಾಪಿಸಿದರು. ಈ ಸಂಸ್ಥೆಯಲ್ಲಿ ನೋಂದಾಯಿಸಿಕೊಳ್ಳುವ ಅಂಗವಿಕಲರು ಕೇವಲ ಒಂದು ರೂಪಾಯಿಯಲ್ಲಿ ಮಾಡಿಕೊಡಲಿದ್ದಾರೆ. ವಿಕಲಚೇತನರ ಬಾಳಿನಲ್ಲಿ ಬೆಳಕು ಮೂಡಿಸಲು ಈ ವಿಶೇಷ ಕಾರ್ಯಕ್ರಮ ಆರಂಭಿಸಲಾಗಿದೆ. ಅಂಗವಿಕಲ ದಂಪತಿಗೆ 1 ರೂ.ಗೆ ನೋಂದಣಿ ಮಾಡಿಸಿದರೆ ಉಚಿತವಾಗಿ ಮದುವೆ ಮಾಡುವುದಾಗಿ ಅಮ್ಮ ಪೌಂಡೇಶನ್ ನಿರ್ವಾಹಕರು ಹೇಳಿದ್ದಾರೆ.

Join Nadunudi News WhatsApp Group

ರುಪೇ ಫೌಂಡೇಶನ್‌ ನ ಈ ನಿರ್ಧಾರ ಅಂಗವಿಕಲರಿಗೆ ವರದಾನವಾಗಲಿದೆ. ಕಳೆದ 15 ವರ್ಷಗಳಲ್ಲಿ, ಅಮ್ಮಾ ಫೌಂಡೇಶನ್ ನೂರಕ್ಕೂ ಹೆಚ್ಚು ಅನಾಥ ಮತ್ತು ಅಂಗವಿಕಲ ದಂಪತಿಗಳಿಗೆ ಮದುವೆ ಮಾಡಿದೆ. ಈಗ ಕೇವಲ ಒಂದು ರೂಪಾಯಿ ವೆಚ್ಚದಲ್ಲಿ ರೂಪಾಯಿ ಫೌಂಡೇಶನ್‌ ನೊಂದಿಗೆ ಮದುವೆಗಳನ್ನು ಮಾಡಲಾಗುತ್ತದೆ. ಅಂಗವಿಕರು ಈ ಪೌಂಡೇಶನ್ ನ ಅಡಿಯಲ್ಲಿ ಯಾವುದೇ ಖರ್ಚಿಲ್ಲದೆ ಮದುವೆಯನ್ನು ಮಾಡಿಕೊಳ್ಳಬಹುದಾಗಿದೆ.

Join Nadunudi News WhatsApp Group