Accident Insurance: ಅಂಚೆ ಕಚೇರಿಯ ಹೊಸ ಯೋಜನೆ, ಪ್ರತಿಯೊಬ್ಬರಿಗೂ ಸಿಗಲಿದೆ 15 ಲಕ್ಷ ರೂ.

ಅಂಚೆ ಕಚೇರಿಯ ಈ ಯೋಜನೆಯಿಂದ ಪ್ರತಿಯೊಬ್ಬರಿಗೂ ಸಿಗಲಿದೆ 15 ಲಕ್ಷ ರೂ

Post Office Accident Insurance: ಕಡಿಮೆ ಪ್ರಿಮಿಯಂ ನಲ್ಲಿ ಸರ್ಕಾರದ ಬೆಂಬಲದಿಂದ ನಡೆಸುವ ಸಾಕಷ್ಟು ವಿಮಾ ಯೋಜನೆಗಳಿವೆ. ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಈ ವಿಮಾ ಪಾಲಿಸಿಗಳು ಹೆಚ್ಚು ಉಪಯೋಗಕಾರಿಯಾಗಿದೆ. ಇದೀಗ ಭಾರತೀಯ ಅಂಚೆ ಇಲಾಖೆಯು ಹೊಸ ಅಪಘಾತ ವಿಮೆಯನ್ನು (Accident Insurance) ಜಾರಿಗೊಳಿಸಿದೆ.

ಜೀವ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ವಿಮಾ ಪಾಲಿಸಿಗಳು ಸಹಾಯವಾಗುತ್ತದೆ. ಅನಿರೀಕ್ಷಿತ ಅಪಘಾತಗಳು ಸಂಭವಿಸಿದಾಗ ವಿಮ ಪಾಲಿಸಿಗಳು ನೆರವಾಗುತ್ತದೆ. ನಾವೀಗ ಈ ಲೇಖನದಲ್ಲಿ Post office ನೀಡುತ್ತಿರುವ ಎರಡು ವಿಮ ಪಾಲಿಸಿಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ನೀವು ಈ ವಿಮೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡು ಇದರ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

Post Office Accident Insurance Scheme
Image Credit: ABP Live

ಅಂಚೆ  ಕಚೇರಿಯ ಹೊಸ ಯೋಜನೆ
ವಾರ್ಷಿಕ 549 ಪ್ರೀಮಿಯಂನೊಂದಿಗೆ ಅಂಚೆ ಕಚೇರಿಯಲ್ಲಿ ನಿಮ್ಮ ಹೆಸರಿನಲ್ಲಿ ಅಪಘಾತ ವಿಮೆಯನ್ನು ತೆರೆಯಬಹುದು. ಇದು 10 ಲಕ್ಷ ರೂ. ವಿಮ ಪಾಲಿಸಿಯನ್ನು ನೀಡುವ ಅಪಘಾತ ವಿಮೆ ಆಗಿದೆ. ನೀವು 749 ರೂ. ವಾರ್ಷಿಕ ಪ್ರೀಮಿಯಂ ಅನ್ನು ಪಾವತಿಸಿದರೆ 15 ಲಕ್ಷ ರೂ. ವಿಮ ಪಾಲಿಸಿಯನ್ನು ಪಡೆಯಬಹುದು. ನೀವು ಆಕಸ್ಮಿಕವಾಗಿ ಸಾವನ್ನಪ್ಪಿದರೆ, ನೀವು ಹೆಸರಿಸಿದ ನಾಮಿನಿಗೆ 10 ಲಕ್ಷ ರೂಪಾಯಿ ಪರಿಹಾರವನ್ನು ನೀಡಲಾಗುತ್ತದೆ. ಆಕಸ್ಮಿಕವಾಗಿ ಆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ, ಚಿಕಿತ್ಸಾ ವೆಚ್ಚಕ್ಕೆ 60,000 ರೂ. ಹಣ ಲಭ್ಯವಾಗಲಿದೆ. ಈ ವಿಮಾ ಯೋಜನೆಗಾಗಿ ಅಂಚೆ ಕಚೇರಿಯು ಟಾಟಾ ಮತ್ತು ಬಜಾಜ್ ವಿಮಾ ಕಂಪನಿಗಳೊಂದಿಗೆ ಪಾಲುದಾರಿಕೆ ಹೊಂದಿದೆ.

ಪ್ರತಿಯೊಬ್ಬರಿಗೂ ಸಿಗಲಿದೆ 15 ಲಕ್ಷ ರೂ
ಇನ್ನು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಮೋದಿ ಸರ್ಕಾರದ ಒಂದು ವರ್ಷದ ಅಪಘಾತ ವಿಮಾ ಯೋಜನೆಯಾಗಿದೆ. ಅಪಘಾತದಿಂದ ಉಂಟಾಗುವ ಸಾವು ಅಥವಾ ಅಂಗವೈಕಲ್ಯವನ್ನು ಇದು ಒಳಗೊಂಡಿರುತ್ತದೆ. ವೈಯಕ್ತಿಕ ಬ್ಯಾಂಕ್ ಅಥವಾ ಅಂಚೆ ಕಚೇರಿ ಖಾತೆಯನ್ನು ಹೊಂದಿರುವ 18 ರಿಂದ 65 ವರ್ಷ ವಯಸ್ಸಿನ ವ್ಯಕ್ತಿಗಳು ಈ ಯೋಜನೆಯಡಿ ನೋಂದಾಯಿಸಲು ಅರ್ಹರಾಗಿರುತ್ತಾರೆ. ಈ ಅಪಘಾತ ವಿಮಾ ಯೋಜನೆ ಅಡಿಯಲ್ಲಿ ನೀವು ವರ್ಷಕ್ಕೆ 12 ರೂ. ಹೂಡಿಕೆ ಮಾಡಿದರೆ 2 ಲಕ್ಷ ಹಣವನ್ನು ಪಡೆಯಬಹುದು. ಅಪಘಾತದಲ್ಲಿ ಜೀವಹಾನಿ ಅಥವಾ ದೈಹಿಕ ಅಸಾಮರ್ಥ್ಯವನ್ನು ಅನುಭವಿಸುವ ವ್ಯಕ್ತಿಗಳಿಗೆ ರೂ. 2 ಲಕ್ಷಗಳ ವಿಮೆಯನ್ನು ನೀಡಲಾಗುತ್ತದೆ.

Post Office Accident Insurance
Image Credit: Mahamoney

Join Nadunudi News WhatsApp Group

Join Nadunudi News WhatsApp Group