Post Office Investment: ಪೋಸ್ಟ್ ಆಫೀಸ್ 1000 ಅಥವಾ 5000 ರೂ ಇಟ್ಟರೆ 5 ವರ್ಷದ ನಂತರ ಎಷ್ಟು ಸಿಗಲಿದೆ, ಇಲ್ಲಿದೆ ಲೆಕ್ಕಾಚಾರ.

ಪೋಸ್ಟ್ ಆಫೀಸ್ ನಲ್ಲಿ ಎಷ್ಟು ಹಣ ಇಟ್ಟರೆ ಎಷ್ಟು ಲಾಭ ಬರಲಿದೆ ನೋಡಿ

Post Office Investment Profit: Post office RD ಹೂಡಿಕೆಯು ಒಂದು ರೀತಿಯಲ್ಲಿ ಹೆಚ್ಚಿನ ಆದಾಯವನ್ನು ನೀಡುತ್ತದೆ. ನೀವು Post Office ನ RD ಯಲ್ಲಿ ಹೂಡಿಕೆ ಆರಂಭಿಸಿದರೆ ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ರಿಟರ್ನ್ ಅನ್ನು ಪಡೆಯಬಹುದು.

ಹಣದ ಉಳಿತಾಯಕ್ಕೆ ಸಾಕಷ್ಟು ಆಯ್ಕೆಗಳು ಇದ್ದರು ಕೂಡ ಪೋಸ್ಟ್ ಆಫೀಸ್ RD Investment ಉತ್ತಮ ಆಯ್ಕೆ ಎನ್ನಬಹುದು. ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭವನ್ನು ಪಡೆಯಲು ಇದು ಏಕೈಕ ಮಾರ್ಗವಾಗಿದೆ. ಇದೀಗ ನಾವು ಈ ಲೇಖನದಲ್ಲಿ ಪೋಸ್ಟ್ ಆಫೀಸ್ ನಲ್ಲಿ ಎಷ್ಟು ಹಣ ಹೂಡಿಕೆ ಮಾಡಿದರೆ ಎಷ್ಟು ಲಾಭ ಸಿಗುತ್ತದೆ ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

Post Office RD Investment
Image Credit: Samacharjagat

ಪೋಸ್ಟ್ ಆಫೀಸ್ RD ಹೂಡಿಕೆಯ ಬಗ್ಗೆ ಇಲ್ಲಿದೆ ವಿವರ
ನೀವು ಪೋಸ್ಟ್ ಆಫೀಸ್ RD ಯಲ್ಲಿ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ ನಿಮಗೀಗ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಅಂಚೆ ಕಚೇರಿಯ 5 ವರ್ಷಗಳ ಮರುಕಳಿಸುವ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಸರ್ಕಾರ ಹೆಚ್ಚಿಸಿದೆ. ಹೊಸ ದರಗಳು ಅಕ್ಟೋಬರ್ 1 ರಿಂದ ಅನ್ವಯವಾಗಲಿದೆ. ಇಲ್ಲಿಯವರೆಗೆ ನೀವು 5 ವರ್ಷದ ಆರ್‌ ಡಿಯಲ್ಲಿ 6.5% ದರದಲ್ಲಿ ಬಡ್ಡಿಯನ್ನು ಪಡೆಯುತ್ತಿದ್ದೀರಿ, ಆದರೆ ಅಕ್ಟೋಬರ್ 1 ರಿಂದ ನೀವು 6.7% ದರದಲ್ಲಿ ಬಡ್ಡಿಯನ್ನು ಪಡೆಯಬಹುದು.

ಸರ್ಕಾರ ಅದನ್ನು 20 ಬೇಸಿಸ್ ಪಾಯಿಂಟ್‌ ಗಳಷ್ಟು ಹೆಚ್ಚಿಸಿದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಈಗ ರೂ. 1000, ರೂ. 2000 ಅಥವಾ ರೂ. 5000 ರ ಮಾಸಿಕ RD ಯನ್ನು ಪ್ರಾರಂಭಿಸಿದರೆ, ಹೊಸ ಬಡ್ಡಿದರಗಳೊಂದಿಗೆ ನಿಮಗೆ ಎಷ್ಟು ಲಾಭ ಸಿಗುತ್ತದೆ ಎನ್ನುವ ಬಗ್ಗೆ ಲೆಕ್ಕಾಚಾರ ನೋಡೋಣ.

Post Office Bal Jeevan Bima Yojana Profit
Image Credit: Online38media

ಪೋಸ್ಟ್ ಆಫೀಸ್ 1000 ಅಥವಾ 5000 ರೂ ಇಟ್ಟರೆ 5 ವರ್ಷದ ನಂತರ ಎಷ್ಟು ಸಿಗಲಿದೆ
•ಅಂಚೆ ಕಚೇರಿಯ ಉಳಿತಾಯ ಖಾತೆಯಲ್ಲಿ ನೀವು ರೂ. 1,000 ಠೇವಣಿ ಇಟ್ಟರೆ 5 ವರ್ಷಗಳ ನಂತರ ರೂ. 1,217 ಆಗುತ್ತದೆ. ಇದು ರೂ.1,000 ಒಂದು ಬಾರಿ ಠೇವಣಿ ಮೊತ್ತವಾಗಿದೆ. ಆದರೆ ನೀವು ಪ್ರತಿ ವರ್ಷ ರೂ. 1000 ಠೇವಣಿ ಇಡುತ್ತ 5 ವರ್ಷಗಳ ವರೆಗೆ ಹೂಡಿಕೆ ಮಾಡಿದರೆ 5 ವರ್ಷಗಳ ನಂತರ ನಿಮ್ಮ ಖಾತೆಯಲ್ಲಿ ರೂ. 5,633 ಇರುತ್ತದೆ.

Join Nadunudi News WhatsApp Group

•ಅಂಚೆ ಕಚೇರಿಯ ಉಳಿತಾಯ ಖಾತೆಯಲ್ಲಿ ನೀವು ರೂ. 2,000 ಠೇವಣಿ ಇಟ್ಟರೆ 5 ವರ್ಷಗಳ ನಂತರ ರೂ. 2433 ಆಗುತ್ತದೆ. ನೀವು ಪ್ರತಿ ವರ್ಷ ರೂ. 2000 ಠೇವಣಿ ಇಡುತ್ತ 5 ವರ್ಷಗಳವರೆಗೆ ಹೂಡಿಕೆ ಮಾಡಿದರೆ, 5 ವರ್ಷಗಳ ನಂತರ ನಿಮ್ಮ ಖಾತೆಯಲ್ಲಿ ರೂ. 11,266 ಇರುತ್ತದೆ.

•ಅಂಚೆ ಕಚೇರಿಯ ಉಳಿತಾಯ ಖಾತೆಯಲ್ಲಿ ನೀವು ರೂ. 5,000 ಠೇವಣಿ ಇಟ್ಟರೆ 5 ವರ್ಷಗಳ ನಂತರ ರೂ. 6,083 ಆಗುತ್ತದೆ. ನೀವು ಪ್ರತಿ ವರ್ಷ ರೂ. 5,00 ಠೇವಣಿ ಇಡುತ್ತ 5 ವರ್ಷಗಳವರೆಗೆ ಹೂಡಿಕೆ ಮಾಡಿದರೆ, 5 ವರ್ಷಗಳ ನಂತರ ನಿಮ್ಮ ಖಾತೆಯಲ್ಲಿ ರೂ. 28,165 ಇರುತ್ತದೆ.

Join Nadunudi News WhatsApp Group