Post Office Investment: ಪೋಸ್ಟ್ ಆಫೀಸ್ ನಲ್ಲಿ ಪ್ರತಿ ತಿಂಗಳು ಸಿಗಲಿದೆ 8,875 ರೂ, ಹೊಸ ಯೋಜನೆ ಜಾರಿಗೆ.

Post Office Investment: ಇದೀಗ ರಾಜ್ಯ ಸರ್ಕಾರದಿಂದ ಹೊಸದೊಂದು ಸುದ್ದಿ ಹೊರ ಬಿದ್ದಿದೆ. ಅಂಚೆ ಕಚೇರಿಯು (Post Office) ಪ್ರತಿ ತಿಂಗಳು ಆದಾಯವನ್ನು ಒದಗಿಸುವ ಯೋಜನೆಯನ್ನು ಹೊಂದಿದೆ. ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಆದಾಯ ಸಿಗಲಿದೆ.

ಈ ಯೋಜನೆಯಲ್ಲಿ ಹೂಡಿಕೆ ಮಿತಿಯನ್ನು ಹೆಚ್ಚಿಸಲಾಗಿದೆ 2023 ರ ಬಜೆಟ್ ನಲ್ಲಿ ಮಧ್ಯಮ ವರ್ಗದ ಜನತೆಗೆ ಕೇಂದ್ರ ಸರ್ಕಾರ ಇದೆ ಶುಭ ಸುದ್ದಿ ನೀಡಿದೆ. ಮಹಿಳೆಯರಿಗಾಗಿ ಹೊಸ ಯೋಜನೆ ಜಾರಿಗೆ ತರಲಾಗಿದೆ.

8,875 will be received every month at the post office, the new scheme has been implemented.
Image Credit: justdial

ಪೋಸ್ಟ್ ಆಫೀಸ್ ಯೋಜನೆಯಿಂದ ಹೊಸ ಸುದ್ದಿ
ಪೋಸ್ಟ್ ಆಫೀಸ್ ನಿಂದ ಹಲವು ಯೋಜನೆಗಳಲ್ಲಿ ಹೂಡಿಕೆ ಮಿತಿಯನ್ನು ಹೆಚ್ಚಿಸಲಾಗಿದೆ. ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಹೂಡಿಕೆ ಮಿತಿಯನ್ನು ಹೆಚ್ಚಿಸಿದ ಯೋಜನೆಯಲ್ಲಿ ಒಂದಾಗಿದೆ.  ಕೇಂದ್ರ ಸರ್ಕಾರದ 2023 ರ ಪ್ರಸ್ತಾವನೆ ಪ್ರಕಾರ ಈ ಯೋಜನೆಗೆ ಸೇರಿದವರು ಪ್ರಯೋಜನವನ್ನು ಪಡೆಯುತ್ತಾರೆ.

If you invest money in post office, you will get a lot of profit
Image Credit: india

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆ ಮಿತಿ ರೂ 4.5 ಲಕ್ಷದಿಂದ ರೂ 9 ಲಕ್ಷ ಹೆಚ್ಚಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಘೋಷಣೆ ಮಾಡಿದ್ದಾರೆ. ಜಂಟಿ ಖಾತೆಯಲ್ಲಿ ಹೂಡಿಕೆ ಮಾಡುವ ಮಿತಿ 15 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ.

ಪೋಸ್ಟ್ ಆಫೀಸ್ ಯೋಜನೆ
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯನ್ನು ಹೆಚ್ಚಾಗಿ ಹಿರಿಯ ನಾಗರಿಕರು ಬಳಸುತ್ತಾರೆ. ಏಕೆಂದರೆ ನೀವು ಯಾವುದೇ ಅಪಾಯವಿಲ್ಲದೆ ಪತಿ ತಿಂಗಳು ಆದಾಯವನ್ನು ಪಡೆಯಬಹುದು.

Join Nadunudi News WhatsApp Group

Finance Minister Nirmala Sitharaman has announced that the investment limit in the Post Office Monthly Income Scheme has been increased from Rs 4.5 lakh to Rs 9 lakh.
Image Credit: indianexpress

ಪ್ರಸ್ತುತ ಈ ಯೋಜನೆಯ ಬಡ್ಡಿಯು ಶೇಕಡಾ 7.1 ರಷ್ಟಿದೆ. ಪ್ರತಿ ತಿಂಗಳು ಬಡ್ಡಿ ಪಾವತಿಸಲಾಗುತ್ತದೆ. ಈ ಬಡ್ಡಿ ಮೊತ್ತವನ್ನು ಹಿಂಪಡೆಯದಿದ್ದರೆ, ಆ ಹಣಕ್ಕೆ ಯಾವುದೇ ಬಡ್ಡಿ ಸಿಗುವುದಿಲ್ಲ.

ಹಾಗಾಗಿ ಪ್ರತಿ ತಿಂಗಳು ಹಣವನ್ನು ಹಿಂಪಡೆಯುವುದು ಉತ್ತಮ. ಹತ್ತು ವರ್ಷ ಮೇಲ್ಪಟ್ಟ ಯಾರಾದರೂ ಈ ಯೋಜನೆಗೆ ಸೇರಬಹುದು. ಈ ಯೋಜನೆಯಲ್ಲಿ ನೀವು ಒಂದು ಲಕ್ಷ ಹೂಡಿಕೆ ಮಾಡಿದ್ದೀರಿ ಎಂದು ನೀವು ಭಾವಿಸಿದರೆ ಪ್ರತಿ ತಿಂಗಳು ನಿಮಗೆ 592 ರೂಪಾಯಿ ಬರಲಿದೆ.

Join Nadunudi News WhatsApp Group