Post Office Life Insurance: ವರ್ಷಕ್ಕೆ 399 ರೂ ಕಟ್ಟಿದರೆ ಸಿಗಲಿದೆ 10 ಲಕ್ಷ, ಅಂಚೆ ಇಲಾಖೆಯ ಹೊಸ ಯೋಜನೆ.
Post Office Life Insurance: ಜನಸಾಮಾನ್ಯರಿಗೆ ನೆರವಾಗಲು ಅಂಚೆ ಕಚೇರಿ (Post Office) ಯಿಂದ ಹಲವಾರು ಯೋಜನೆಗಳು ಬಿಡುಗಡೆಯಾಗುತ್ತಲೇ ಇವೆ.
ಅಂಚೆ ಕಚೇರಿಯ ಅದೆಷ್ಟೋ ಜನಪ್ರಿಯ ಯೋಜನೆಗಳಿಂದ ಸಾಕಷ್ಟು ಬಡಜನರು ಯೋಜನೆಯ ಪ್ರಯೋಜನವನ್ನು ಪಡೆದಿದ್ದಾರೆ. ಇದೀಗ ಅಂಚೆ ಇಲಾಖೆ ಜನಸಾಮಾನ್ಯರಿಗಾಗಿ ಹೊಸ ಯೋಜನೆಗನ್ನು ಜಾರಿಗೊಳಿಸಿದೆ.
![Post office has introduced a new insurance scheme for the safety of people](https://nadunudi.in/wp-content/uploads/2023/01/Post-office-insurance.jpg)
ಅಪಘಾತ ವಿಮೆ ಯೋಜನೆ (Accident Insurance)
ಇದೀಗ ಭಾರತೀಯ ಅಂಚೆ ಇಲಾಖೆ ಜನಸಾಮಾನ್ಯರಿಗಾಗಿ ಕಡಿಮೆ ಮೊತ್ತದಲ್ಲಿ ಬಾರಿ ಮೊತ್ತದ ಅಪಘಾತ ವಿಮೆಯನ್ನು ಬಿಡುಗಡೆಗೊಳಿಸಿದೆ. ಇದರಿಂದಾಗಿ ಜನಸಾಮಾನ್ಯರು ಕಡಿಮೆ ಹಣವನ್ನು ಪಾವತಿಸಿ ಅಧಿಕ ಮೊತ್ತದ ಅಪಘಾತ ವಿಮೆಯನ್ನು ಪಡೆಯಬಹುದಾಗಿದೆ.
18 ರಿಂದ 65 ವರ್ಷದ ಒಳಗಿನವರು ಅಂಚೆ ಇಲಾಖೆಯ ಈ ಹೊಸ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ.
ಆಕಸ್ಮಿಕವಾಗಿ ಅಪಘಾತವಾದರೆ ಅಂಚೆ ಇಲಾಖೆಯ ಈ ಯೋಜನೆ ನಿಮಗೆ ಸಹಾಯವಾಗಲಿದೆ. ನೀವು ವಾರ್ಷಿಕವಾಗಿ 399 ರೂ ಪಾವತಿಸುದರಿಂದ 10 ಲಕ್ಷ ಹಣವನ್ನು ಅಪಘಾತ ವಿಮೆ ನೀಡುತ್ತದೆ. ಜನಸಾಮಾನ್ಯರಿಗಾಗಿ ಭಾರತದ ಅಂಚೆ ಇಲಾಖೆ ಈ ಯೋಜನೆಯನ್ನು ಜಾರಿಗೆ ತಂದಿದೆ.
![Post office introduced new accidental insurance scheme for people](https://nadunudi.in/wp-content/uploads/2023/01/Post-office-schemes.jpg)
ಅಪಘಾತ ವಿಮೆ ಯೋಜನೆಗೆ ಯಾರು ಅರ್ಹರು
ಅಂಚೆ ಇಲಾಖೆಯಲ್ಲಿ ಇಂಡಿಯಾ ಪೇಮೆಂಟ್ ಪೋಸ್ಟ್ ಅಕೌಂಟ್ (India Payment Post Account) ಹೊಂದಿದವರು ಈ ಅಪಘಾತ ವಿಮೆಗೆ ಅರ್ಹರಾಗಿರುತ್ತಾರೆ.
ನೀವು ಅಂಚೆ ಇಲಾಖೆಯಲ್ಲಿ ಇಂಡಿಯಾ ಪೇಮೆಂಟ್ ಪೋಸ್ಟ್ ಅಕೌಂಟ್ ಹೊಂದಿಲ್ಲದೆ ಇದ್ದಲಿ ತಕ್ಷಣ ಕೇವಲ 100 ರೂ ಕೊಡುವ ಮೂಲಕ ಇಂಡಿಯಾ ಪೇಮೆಂಟ್ ಪೋಸ್ಟ್ ಅಕೌಂಟ್ ಖಾತೆಯನ್ನು ತೆರೆಯಬಹುದಾಗಿದೆ.
![Post office introduced new accident insurance policy for people](https://nadunudi.in/wp-content/uploads/2023/01/Post-office-new-insurance.jpg)
ಅಪಘಾತ ವಿಮೆ ಯೋಜನೆಯ ಉಪಯೋಗ
ಅಪಘಾತ ವಿಮೆ ಯೋಜನೆಯ ಫಲಾನುಭವಿಗಳು ಆಕಸ್ಮಿಕವಾಗಿ ಮೃತಪಟ್ಟಿದ್ದಲ್ಲಿ, ಮರಣ ಹೊಂದಿದ ಕುಟುಂಬದವರಿಗೆ 10 ಲಕ್ಷ ರೂಪಾಯಿ ನೀಡಲಾಗುತ್ತದೆ. ಒಂದು ವೇಳೆ ಫಲಾನುಭವಿಗಳು ಶಾಶ್ವತವಾಗಿ ಅಂಗವೈಕಲ್ಯವಾದರೆ 10 ಲಕ್ಷ ಸಿಗುತ್ತದೆ.
![10 lakhs if accidental insurance is taken at the post office](https://nadunudi.in/wp-content/uploads/2023/01/post-office-latest-insurance.jpg)
ಆಸ್ಪತ್ರೆ ವೆಚ್ಚಕ್ಕಾಗಿ ಪ್ರತಿ ಫಲಾನುಭವಿಗೆ ಒಂದು ಲಕ್ಷದವರೆಗೆ ಸಹಾಯ ಸಿಗಲಿದೆ. ಹಾಗೆಯೆ ಓಪಿಡಿ ವೆಚ್ಚಕ್ಕಾಗಿ 30 ಸಾವಿರ ಹಾಗೂ ಅಪಘಾತದ ವೇಳೆಯಲ್ಲಿ ಪಾರ್ಶ್ವವಾಯು ಉಂಟಾದರೆ 10 ಲಕ್ಷ ಸಿಗುತ್ತದೆ.
ನೀಮ್ಮ ಬಳಿ ಅಂಚೆ ಇಲಾಖೆಯ ಇಂಡಿಯಾ ಪೇಮೆಂಟ್ ಪೋಸ್ಟ್ ಅಕೌಂಟ್ ಇಲ್ಲವಾದರೆ ತಕ್ಷಣ ನೀವು ಕೇವಲ 100 ರೂ ಪಾವತಿಸುವ ಮೂಲಕ ಇಂಡಿಯಾ ಪೇಮೆಂಟ್ ಪೋಸ್ಟ್ ಅಕೌಂಟ್ ಖಾತೆಯನ್ನು ತೆರೆಯಬಹುದಾಗಿದೆ. ಇದರಿಂದಾಗಿ ನೀವು ಅಪಘಾತ ವಿಮೆ ಯೋಜನೆಯ ಉಪಯೋಗವನ್ನು ಪಡೆಯಬಹುದು.