POMIS: ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಗಂಡ ಮತ್ತು ಹೆಂಡತಿಗೆ ಪ್ರತಿ ತಿಂಗಳು 10 ಸಾವಿರ ಸಿಗಲಿದೆ

ಈ ಯೋಜನೆಯಲ್ಲಿ ಗಂಡ ಮತ್ತು ಹೆಂಡತಿಗೆ ಪ್ರತಿ ತಿಂಗಳು 10 ಸಾವಿರ ಸಿಗಲಿದೆ

Post Office Monthly Income Scheme Details: ಅಂಚೆ ಇಲಾಖೆಯ ವಿವಿಧ ಯೋಜನೆಗಳಲ್ಲಿ ಮಾಸಿಕ ಸಣ್ಣ ಮೊತ್ತದ ಹೂಡಿಕೆಯಲ್ಲಿ ದೊಡ್ಡ ಮೊತ್ತದ ಲಾಭ ಪಡೆಯುವ ಅವಕಾಶ ನೀಡುತ್ತಿದೆ. ಮಧ್ಯಮ ವರ್ಗದ ಜನರಿಗೆ ಅಂಚೆ ಕಚೇರಿಯಲ್ಲಿನ ಮಾಸಿಕ ಹೂಡಿಕೆಯು ಬಹು ಮೊತ್ತದ ಲಾಭವನ್ನು ನೀಡುವ ಮಾರ್ಗವಾಗಿದೆ. ಅಂಚೆ ಇಲಾಖೆಯು ನೀಡುತ್ತಿರುವ ಸಣ್ಣ ಉಳಿತಾಯ ಯೋಜನೆಗಳಲ್ಲಿ Post Office Monthly Income Scheme (POMIS) ಕೂಡ ಒಂದಾಗಿದೆ.

POMIS ನಲ್ಲಿ ನೀವು ಒಮ್ಮೆ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭವನ್ನು ಪಡೆಯಬಹುದು. ಪೋಸ್ಟ್ ಆಫೀಸ್ ನ ಈ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು ಸಿಗಲಿದೆ 10 ಸಾವಿರ ರೂ. ಪಿಂಚಣಿಯನ್ನು ಪಡೆಯಬಹುದು. ಮಾಸಿಕ ಆದಾಯ ನೀಡುವ ಈ ಯೋಜನೆಯ ಬಗ್ಗೆ ನೀವು ಮಾಹಿತಿ ತಿಳಿಯುವ ಮೂಲಕ ಇಂದೇ ಯೋಜನೆಯಲ್ಲಿ ಹೂಡಿಕೆ ಆರಂಭಿಸಿದರೆ ಹೆಚ್ಚು ಲಾಭವನ್ನು ಪಡೆಯಬಹುದು.

Post Office Monthly Income Scheme Investment
Image Credit: Informalnewz

ಈ ಯೋಜನೆಯಲ್ಲಿ ಗಂಡ ಮತ್ತು ಹೆಂಡತಿಗೆ ಪ್ರತಿ ತಿಂಗಳು 10 ಸಾವಿರ ಸಿಗಲಿದೆ
Post Office ಮಾಸಿಕ ಯೋಜನೆಯಡಿ ಗಂಡ ಹಾಗು ಹೆಂಡತಿ ಅಂಚೆ ಕಚೇರಿಯಲ್ಲಿ ಜಂಟಿ ಖಾತೆಯನ್ನು ತೆರೆಯಬೇಕಾಗುತ್ತದೆ (Post Office Joint Account). ಖಾತೆಯನ್ನು ತೆರೆದ ನಂತರ, ನೀವು ಬಡ್ಡಿಯಿಂದ ಮಾತ್ರ ಪ್ರತಿ ತಿಂಗಳು ಉತ್ತಮ ಆದಾಯವನ್ನು ಪಡೆಯುತ್ತೀರಿ. ಈ ಯೋಜನೆಯಡಿ ಏಕ ಮತ್ತು ಜಂಟಿ ಖಾತೆಯನ್ನು ತೆರೆಯಲು ಅವಕಾಶವಿದೆ. ಇನ್ನು ಏಕ ಖಾತೆಯಲ್ಲಿ 9 ಲಕ್ಷ ರೂ. ಗಳ ಹೂಡಿಕೆಯನ್ನು ಮಾಡಿದರೆ ಪ್ರತಿ ತಿಂಗಳು 5,550 ರೂ. ಆದಾಯವನ್ನು ಪಡೆಯಬಹುದು.

ಇನ್ನು ಎರಡು ಪಟ್ಟು ಹೆಚ್ಚು ಹೂಡಿಕೆಯನ್ನು ಮಾಡಿದ್ರೆ ನೀವು ತಿಂಗಳಿಗೆ 10,000 ಆದಾಯವನ್ನು ಗಳಿಸುವ ಅವಕಾಶ ಕೂಡ ಈ ಯೋಜನೆಯಲ್ಲಿದೆ. ಈ ಯೋಜನೆಯಡಿ ಗಂಡ ಹಾಗು ಹೆಂಡತಿ ಇಬ್ಬರೂ  ಜಂಟಿ ಖಾತೆಯನ್ನು ತೆರೆದು ಅದರಲ್ಲಿ ರೂ. 15 ಲಕ್ಷವನ್ನು ಠೇವಣಿ ಮಾಡಿದರೆ ನೀವು ಮಾಡಿದ ಈ ಹೂಡಿಕೆಯ ಮೇಲೆ 7.4 ಪ್ರತಿಶತದ ದರದಲ್ಲಿ ರೂ. 1,11,000 ವಾರ್ಷಿಕ ಬಡ್ಡಿಯನ್ನು ಪಡೆಯಬಹುದು.

Post Office Monthly Income Scheme Details
Image Credit: Informalnewz

Join Nadunudi News WhatsApp Group

Join Nadunudi News WhatsApp Group