POMIS: ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಗಂಡ ಹೆಂಡತಿಗೆ ಪ್ರತಿ ತಿಂಗಳು ಸಿಗಲಿದೆ 9250 ರೂ, ಕೇಂದ್ರದ ಯೋಜನೆ.

ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಗಂಡ ಹೆಂಡತಿಗೆ ಪ್ರತಿ ತಿಂಗಳು ಸಿಗಲಿದೆ 9250 ರೂ

Post Office Monthly Income Scheme: ಸದ್ಯ ಭಾರತೀಯ ಅಂಚೆ ಇಲಾಖೆಯು ಜನಸಾಮಾನ್ಯರಿಗಾಗಿ ವಿವಿಧ ಹೂಡಿಕೆಯ ಯೋಜನೆಯನ್ನು ನೀಡುತ್ತಿದೆ. ಜನರು ಹೂಡಿಕೆ ಮಾಡಲು ಸುರಕ್ಷಿತ ಹಾಗೂ ಹೆಚ್ಚಿನ ರಿಟರ್ನ್ ಪಡೆಯುವ ಯೋಜನೆಯನ್ನು ಹುಡುಕುತ್ತಿದ್ದರೆ ಆ ಯೋಜನೆಗಳು ಪೋಸ್ಟ್ ಆಫೀಸ್ ನಲ್ಲಿದೆ. ಇನ್ನು Post Office ದಂಪತಿಗಳಿಗಾಗಿಯೇ ವಿಶೇಷ ಯೋಜನೆಯನ್ನು ಪರಿಚಯಿಸಿದೆ. ಈ ಯೋಜಮನೆಯಲ್ಲಿ ದಂಪತಿಗಳು Invest ಮಾಡುವುದರಿಂದ ಮಾಸಿಕ ಹಣವನ್ನು ಪಡೆಯಬಹುದಾಗಿದೆ.

Post Office Monthly Income Scheme
Image Credit: Wealthcareindia

ಗಂಡ ಹೆಂಡತಿಗಾಗಿ Post Office ನಲ್ಲಿ ಬಂಪರ್ ಯೋಜನೆ
Post Office Monthly Income Scheme ಗಂಡ ಹಾಗು ಹೆಂಡತಿ ಅಂಚೆ ಕಚೇರಿಯಲ್ಲಿ ಜಂಟಿ ಖಾತೆಯನ್ನು ತೆರೆಯಬೇಕಾಗುತ್ತದೆ (Post Office Joint Account). ಖಾತೆಯನ್ನು ತೆರೆದ ನಂತರ ನೀವು ಬಡ್ಡಿಯಿಂದ ಮಾತ್ರ ಪ್ರತಿ ತಿಂಗಳು ಉತ್ತಮ ಆದಾಯವನ್ನು ಪಡೆಯುತ್ತೀರಿ. ಪೋಸ್ಟ್ ಆಫೀಸ್ ಈ ಯೋಜನೆಯು ಪತಿ ಪತ್ನಿಯರಿಗೆ ಮಾಸಿಕ ಹಣವನ್ನ ಪಿಂಚಣಿ ರೂಪದಲ್ಲಿ ನೀಡುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ. ಇದರಲ್ಲಿ ಒಟ್ಟು ಹೂಡಿಕೆಯ ಮೊತ್ತದ ಮೇಲೆ  ಪ್ರತಿ ತಿಂಗಳು 9,250 ರೂಪಾಯಿ ಮೊತ್ತವನ್ನು ಪತಿ ಮತ್ತು ಪತ್ನಿ ಪ್ರತ್ಯೇಕವಾಗಿ ಪಡೆಯುತ್ತಾರೆ. ಈ ಯೋಜನೆಯಲ್ಲಿ ನೀವು ಏಕ ಮತ್ತು ಜಂಟಿ ಖಾತೆಗಳನ್ನು ತೆರೆಯಬಹುದು.

ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಗಂಡ ಹೆಂಡತಿಗೆ ಪ್ರತಿ ತಿಂಗಳು ಸಿಗಲಿದೆ 9250 ರೂ
POMIS ಯೋಜನೆಯಡಿ ಗಂಡ ಹಾಗು ಹೆಂಡತಿ ಇಬ್ಬರೂ  ಜಂಟಿ ಖಾತೆಯನ್ನು ತೆರೆದು ಅದರಲ್ಲಿ ರೂ. 15 ಲಕ್ಷವನ್ನು ಠೇವಣಿ ಮಾಡಿದರೆ ನೀವು ಮಾಡಿದ ಈ ಹೂಡಿಕೆಯ ಮೇಲೆ 7.4 ಪ್ರತಿಶತದ ದರದಲ್ಲಿ ರೂ. 1,11,000 ವಾರ್ಷಿಕ ಬಡ್ಡಿಯನ್ನು ಪಡೆಯಬಹುದು. ಇನ್ನು ಬಡ್ಡಿಯ ಹಣ ನೀವು ಹೂಡಿಕೆ ಮಾಡಿದ ಹಣದ ಮೇಲೆ ನಿರ್ಧಾರ ಆಗಿರುತ್ತದೆ.

ಈಗ ನೀವು ಅದನ್ನು 12 ತಿಂಗಳುಗಳಲ್ಲಿ ವಿತರಿಸಿದರೆ ನೀವು ಪ್ರತಿ ತಿಂಗಳು 9250 ರೂ. ಬಡ್ಡಿಯನ್ನು ಪಡೆಯುತ್ತೀರಿ. ಈ ಯೋಜನೆಯಲ್ಲಿ ಮೂರು ಜನರೊಂದಿಗೆ ಖಾತೆಯನ್ನು ತೆರೆಯಬಹುದು ಮತ್ತು ಖಾತೆಯಲ್ಲಿ ಪಡೆದ ಬಡ್ಡಿಯನ್ನು ಪ್ರತಿಯೊಬ್ಬ ಸದಸ್ಯರಿಗೂ ಸಮಾನವಾಗಿ ನೀಡಲಾಗುತ್ತದೆ.

Post Office Monthly Income Scheme Investment Profit
Image Credit: Digitalindiagov

POMIS ನ ಹಣ ಹಿಂಪಡೆಯುವಿಕೆಯ ನಿಯಮವೇನೂ….?  
ಈ ಯೋಜನೆಯಡಿ ಠೇವಣಿ ಮಾಡಿದ ದಿನಾಂಕದಿಂದ ಒಂದು ವರ್ಷದ ನಂತರ ನೀವು ಹಣವನ್ನು ಹಿಂಪಡೆಯಬಹುದು. ಆದರೆ ನೀವು ಒಂದು ವರ್ಷದಿಂದ ಮೂರು ವರ್ಷಗಳ ನಡುವೆ ಹಣವನ್ನು ಹಿಂಪಡೆದರೆ ಠೇವಣಿ ಮೊತ್ತದಿಂದ 2 ಪ್ರತಿಶತವನ್ನು ಕಡಿತಗೊಳಿಸಿದ ನಂತರ ನೀವು ಹಣವನ್ನು ಮರಳಿ ಪಡೆಯುತ್ತೀರಿ. ಅದೇ ಸಮಯದಲ್ಲಿ ನೀವು 3 ವರ್ಷಗಳ ನಂತರ ಹಣವನ್ನು ಹಿಂಪಡೆದರೆ 1 ಪ್ರತಿಶತವನ್ನು ಕಡಿತಗೊಳಿಸಿದ ನಂತರ ನೀವು ಹಣವನ್ನು ಪಡೆಯುತ್ತೀರಿ. ಅಂಚೆ ಕಛೇರಿಯ MIS ಯೋಜನೆಯ ಮುಕ್ತಾಯವು 5 ವರ್ಷಗಳ ನಂತರ ಆಗಿರುತ್ತದೆ.

Join Nadunudi News WhatsApp Group

Join Nadunudi News WhatsApp Group