Monthly Scheme: 60 ವರ್ಷದ ನಂತರ ಚಿಂತಿಸುವ ಅಗತ್ಯ ಇಲ್ಲ, ಈ ಯೋಜನೆಯಲ್ಲಿ ಪ್ರತಿ ತಿಂಗಳು 5550 ರೂ ಸಿಗಲಿದೆ.

ಈ ಯೋಜನೆಯಲ್ಲಿ ನೀವು ಒಮ್ಮೆ ಹೂಡಿಕೆಯನ್ನು ಆರಂಭಿಸಿದರೆ ಮಾಸಿಕ 5550 ರೂ ಪಿಂಚಣಿ ಪಡೆಯಬಹುದಾಗಿದೆ.

Post Office Monthly Income Scheme: ಸದ್ಯ ಹೊಸ ವರ್ಷ ಆರಂಭವಾಗಿದೆ. ಹೊಸ ವರ್ಷದ ಆರಂಭದಲ್ಲಿ ಜನರು ಸಾಕಷ್ಟು ಯೋಜನೆಗಳನ್ನು ಹಾಕಿಕೊಳ್ಳುತ್ತಾರೆ. ಅದರಲ್ಲಿ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವುದು ಕೂಡ ಒಂದಾಗಿರಬಹುದು. ನಿಮ್ಮ ಉಳಿತಾಯ ಯೋಜನೆಯ ಹೂಡಿಕೆಯ ಯೋಜನೆಗೆ ಇದೀಗ ನಾವು ಈ ಲೇಖನದಲ್ಲಿ Post Office ನೀಡುತ್ತಿರುವ ಉತ್ತಮ ಉಳಿತಾಯ ಯೋಜನೆಯ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಮಧ್ಯಮ ವರ್ಗದ ಜನರಿಗೆ ಅಂಚೆ ಕಚೇರಿಯಲ್ಲಿನ ಮಾಸಿಕ ಹೂಡಿಕೆಯು ಬಹು ಮೊತ್ತದ ಲಾಭವನ್ನು ನೀಡುವ ಮಾರ್ಗವಾಗಿದೆ. ಅಂಚೆ ಇಲಾಖೆಯ ವಿವಿಧ ಯೋಜನೆಗಳಲ್ಲಿ ಮಾಸಿಕ ಸಣ್ಣ ಮೊತ್ತದ ಹೂಡಿಕೆಯಲ್ಲಿ ದೊಡ್ಡ ಮೊತ್ತದ ಲಾಭ ಪಡೆಯುವ ಅವಕಾಶ ಇರುತ್ತದೆ. ಅದರಲ್ಲಿ Post Office Monthly Income Scheme (POMIS ) ಕೂಡ ಒಂದಾಗಿದೆ. POMIS ನಲ್ಲಿ ನೀವು ಒಮ್ಮೆ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭವನ್ನು ಪಡೆಯಬಹುದು.

Post Office Monthly Income Scheme Profit
Image Credit: Informal News

60 ವರ್ಷದ ನಂತರ ಚಿಂತಿಸುವ ಅಗತ್ಯ ಇಲ್ಲ
ಇನ್ನು Post Office Monthly Income Scheme ಹೂಡಿಕೆದಾರರಿಗೆ ಭದ್ರತೆಯನ್ನು ನೀಡುತ್ತದೆ ಎನ್ನಬಹುದು. ಕಡಿಮೆ ಅಪಾಯದ ಹೂಡಿಕೆಯಲ್ಲಿ ಈ ಯೋಜನೆಯು ಒಂದಾಗಿದೆ. ಪ್ರತಿ ತಿಂಗಳ ಹೂಡಿಕೆಯಲ್ಲಿ ಮೆಚ್ಯುರಿಟಿ ಅವಧಿಯ ನಂತರ ನಿಗದಿತ ಮೊತ್ತವನ್ನು ಪಡೆಯಬಹುದು. ಸ್ಥಿರ ಆದಾಯದ ಯೋಜನೆಗೆ Post Office Monthly Income Scheme ಉತ್ತಮ ಆಯ್ಕೆ ಎಂದರೆ ತಪ್ಪಾಗಲಾರದು. ಇದು ಅಲ್ಪಾವಧಿ ಹಾಗೂ ದೀರ್ಘಾವಧಿಯ ಹೂಡಿಕೆಯಾಗಿದ್ದು ಯೋಜನೆಯ ಅವಧಿಯು 5 ವರ್ಷದ್ದಾಗಿದೆ.

ಈ ಯೋಜನೆಯಲ್ಲಿ ಪ್ರತಿ ತಿಂಗಳು 5550 ರೂ ಸಿಗಲಿದೆ
MIS ನಲ್ಲಿ ಹೂಡಿಕೆಯನ್ನು ಆರಂಭಿಸಿದರೆ ಪ್ರತಿ ತಿಂಗಳು ಉತ್ತಮ ಆದಾಯವನ್ನು ಗಳಿಸಬಹುದು. ನೀವು ಅಂಚೆ ಕಚೇರಿಯ MIS ನಲ್ಲಿ 9 ಲಕ್ಷದವರೆಗೆ ಹೂಡಿಕೆ ಮಾಡಿದರೆ, ನಂತರ 7.4 ಶೇಕಡಾ ವಾರ್ಷಿಕ ಬಡ್ಡಿ ದರದಲ್ಲಿ 5 ವರ್ಷಗಳಲ್ಲಿ ಬಡ್ಡಿ ಆದಾಯವು 3 ಲಕ್ಷ 33 ಸಾವಿರ ರೂಪಾಯಿಗಳಾಗಿರುತ್ತದೆ. ನೀವು ಮಾಸಿಕ 5550 ರೂ ಪಿಂಚಣಿ ಪಡೆಯುತ್ತೀರಿ.

Post Office Monthly Income Scheme 2024
Image Credit: TV9marathi

ಪೋಸ್ಟ್ ಆಫೀಸ್‌ನ ಈ ಯೋಜನೆಯಡಿ, ನೀವು ಸಿಂಗಲ್ ಖಾತೆಯಲ್ಲಿ ರೂ. 9 ಲಕ್ಷ ಮತ್ತು ಜಂಟಿ ಖಾತೆಯಲ್ಲಿ ರೂ 15 ಲಕ್ಷದವರೆಗೆ ಠೇವಣಿ ಮಾಡಬಹುದು. 5 ವರ್ಷಗಳ ಮೆಚುರಿಟಿ ಅವಧಿಯಲ್ಲಿ ಮೂಲ ಮೊತ್ತವನ್ನು ಹಿಂತಿರುಗಿಸಲಾಗುತ್ತದೆ. ಇದನ್ನು 5 ವರ್ಷಗಳವರೆಗೆ ವಿಸ್ತರಿಸಬಹುದು. ಇದರಲ್ಲಿ TDS ಕಡಿತವಾಗುವುದಿಲ್ಲ. ಆದಾಗ್ಯೂ, ಬಡ್ಡಿಯ ಮೇಲೆ ತೆರಿಗೆ ವಿಧಿಸಲಾಗುತ್ತದೆ.

Join Nadunudi News WhatsApp Group

Join Nadunudi News WhatsApp Group