Post Office PPF: ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ 10 ರೂ ಹೂಡಿಕೆ ಮಾಡಿದರೆ ಸಿಗಲಿದೆ 4.4 ಲಕ್ಷ ರೂ, ಇಂದೇ ಅರ್ಜಿ ಹಾಕಿ
ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ10 ಸಾವಿರ ಹೂಡಿಕೆ ಮಾಡಿ 4.4 ಲಕ್ಷ ರೂ. ಲಾಭ ಪಡೆದುಕೊಳ್ಳಿ
Post Office PPF Investment Profit: ಸದ್ಯ ದೇಶದಲ್ಲಿ ಪೋಸ್ಟ್ ಆಫೀಸ್ ಜನಸಾಮಾನ್ಯರಿಗೆ ಸಾಕಷ್ಟು ಹೂಡಿಕೆಯ ಯೋಜನೆಯನ್ನು ಪರಿಚಯಿಸಿದೆ. ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭ ಗಳಿಸುವಂತಹ ಸಾಕಷ್ಟು ಯೋಜನೆಯಲ್ಲೂ ಪೋಸ್ಟ್ ಆಫೀಸ್ ನಲ್ಲಿ ಲಭ್ಯವಿರುತ್ತದೆ. ಇನ್ನು ಪೋಸ್ಟ್ ಆಫೀಸ್ ನೀಡಿರುವ ವಿವಿಧ ಉಳಿತಾಯ ಆಯೋಜನೆಯಲ್ಲಿ Public Provident Fund ಕೂಡ ಒಂದಾಗಿದೆ.
ಪೋಸ್ಟ್ ಆಫೀಸ್ ನಿಮಗಾಗಿ ಪರಿಚಯಿಸಿದೆ ಈ ಭರ್ಜರಿ ಸ್ಕೀಮ್
ಪೋಸ್ಟ್ ಆಫೀಸ್ ನಲ್ಲಿ ನೀವು PPF ಖಾತೆಯನ್ನು ತೆರೆಯುವ ಮೂಲಕ ಹೂಡಿಕೆಯನ್ನು ಆರಂಭಿಸಿದರೆ ಹೆಚ್ಚಿನ ಲಾಭವನ್ನು ಗಳಿಸಬಹುದು. ಈ ಹೂಡಿಕೆಯು ಮಾರುಕಟ್ಟೆಯ ಅಪಾಯಗಳಿಂದ ಮುಕ್ತವಾಗಿದೆ ಎಂದರೆ ತಪ್ಪಾಗಲಾರದು. ಅತ್ಯಂತ ಸುರಕ್ಷಿತಾ ಯೋಜನೆಗಳಲ್ಲಿ ಒಂದಾಗಿರುವ PPF ಇನ್ವೆಸ್ಟ್ಮೆಂಟ್ ನ ಬಗ್ಗೆ ನಾವೀಗ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.
10 ಸಾವಿರ ಹೂಡಿಕೆಯಲ್ಲಿ ಪಡೆಯಿರಿ 4.4 ಲಕ್ಷ ರೂ.
ನೀವು ಅಂಚೆ ಕಚೇರಿಯಲ್ಲಿ ಸುರಕ್ಷಿತ ಮತ್ತು ಖಾತರಿ ಆದಾಯವನ್ನು ನೀಡುವ ಯೋಜನೆಯನ್ನು ಹುಕುತ್ತಿದ್ದರೆ, ನಾವೀಗ ಈ ಲೇಖನದಲ್ಲಿ ಅಂತಹ ಯೋಜನೆಯ ಬಗ್ಗೆ ಹೇಳಲಿದ್ದೇವೆ. ಹೌದು, ನೀವು ಪೋಸ್ಟ್ ಆಫೀಸ್ ನ PPF ನಲ್ಲಿ ಹೂಡಿಕೆಯನ್ನು ಆರಂಭಿಸಿದರೆ ವಾರ್ಷಿಕ ಪ್ರೀಮಿಯಂ ನಲ್ಲಿ ಲಕ್ಷಕ್ಕೂ ಹೆಚ್ಚಿನ ಲಾಭವನ್ನು ಪಡೆಯಬಹುದು. ನೀವು ಪ್ರತಿ ವರ್ಷ 10,000 ರೂ. ಗಳನ್ನೂ 20 ವರ್ಷಗಳವರೆಗೆ ಹೂಡಿಕೆ ಮಾಡಿದರೆ ಮೆಚುರಿಟಿ ಅವಧಿಯ ನಂತರ ಬಾರಿ ಮೊತ್ತದ ಲಾಭವನ್ನು ಪಡೆಯಬಹುದು.
ಈ ಹೂಡಿಕೆಯಲ್ಲಿ ಯಾವ ರೀತಿಯ ಲಾಭ ಸಿಗಲಿದೆ ಎನ್ನುವ ಬಗ್ಗೆ ಲೆಕ್ಕಾಚಾರ ನೋಡೋಣ. ನೀವು 10 ಸಾವಿರ ರೂ. 20 ವರ್ಷಗಳವರೆಗೆ ಹೂಡಿಕೆ ಮಾಡುತ್ತಾ ಬಂದರೆ ಪೋಸ್ಟ್ ಆಫೀಸ್ ನಿಮ್ಮ ಈ ಹೂಡಿಕೆಗೆ ಶೇ. 7 .1 ರಷ್ಟು ಬಡ್ಡಿಯನ್ನು ನೀಡುತ್ತದೆ. ಇದರಿಂದಾಗಿ ನಿಮ್ಮ ಒಟ್ಟು ಹೂಡಿಕೆಯ ಮೊತ್ತ 2 ಲಕ್ಷ ರೂ. ಆಗುತ್ತದೆ. ಇನ್ನು ನೀವು 2,43,886 ಲಕ್ಷ ರೂ. ಹಣವನ್ನು ಬಡ್ಡಿಯಿಂದ ಪಡೆಯಬಹುದು. ಹೂಡಿಕೆ ಮತ್ತು ಬಡ್ಡಿಯನ್ನು ಒಟ್ಟಾಗಿ ಸೇರಿಸಿದರೆ ನೀವು 20 ವರ್ಷಗಳ ಹೂಡಿಕೆಯಲ್ಲಿ ಬರೋಬ್ಬರಿ 4,43,886 ರೂ. ಗಳ ಲಾಭವನ್ನು ಪಡೆಯಬಹುದು.