RD Investment: ಪೋಸ್ಟ್ ಆಫೀಸ್ ನಲ್ಲಿ 2000 ಮತ್ತು 3000 ರೂ RD ಇಟ್ಟರೆ ಎಷ್ಟು ಲಾಭ ಬರಲಿದೆ, ಇಲ್ಲಿದೆ ಲೆಕ್ಕಾಚಾರ.

ಪೋಸ್ಟ್ ಆಫೀಸ್ ನಲ್ಲಿ 2000 ಮತ್ತು 3000 ರೂ RD ಇಟ್ಟರೆ ಎಷ್ಟು ಲಾಭ ಸಿಗುತ್ತದೆ...?

Post Office RD Investment: ಭಾರತೀಯ ಅಂಚೆ ಇಲಾಖೆಯು ಜನರಿಗೆ ವಿವಿಧ ರೀತಿಯ ಹೂಡಿಕೆಯ ಆಯ್ಕೆಗಳನ್ನು ನೀಡುತ್ತದೆ. ಜನರು ಪೋಸ್ಟ್ ಆಫೀಸ್ ನಲ್ಲಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆಯನ್ನು ಆರಂಭಿಸುತ್ತಾರೆ. Post office ಜನರಿಗೆ RD ಖಾತೆಯನ್ನು ಹೂಡಿಕೆ ಮಾಡಲು ಆಯ್ಕೆಗೆ ನೀಡುತ್ತದೆ.

Post office RD ಹೂಡಿಕೆಯು ಒಂಡು ರೀತಿಯಲ್ಲಿ ಹೆಚ್ಚಿನ ಆದಾಯವನ್ನು ನೀಡುತ್ತದೆ. ನೀವು ಪೋಸ್ಟ್ ಆಫೀಸ್ ನ RD ಯಲ್ಲಿ ಹೂಡಿಕೆ ಆರಂಭಿಸಿದರೆ ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ರಿಟರ್ನ್ ಅನ್ನು ಪಡೆಯಬಹುದು. ಇದೀಗ ನಾವು Post Office RD ಕುರಿತು ಒಂದಿಷ್ಟು ವಿವರವನ್ನು ತಿಳಿಯೋಣ.

Post Office RD Investment
Image Credit: Samacharjagat

ಆರ್‌ ಡಿ ಬಡ್ಡಿದರ ಹೆಚ್ಚಿಸಿದ ಸರಕಾರ
ನೀವು ಪೋಸ್ಟ್ ಆಫೀಸ್ RD ಯಲ್ಲಿ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ ನಿಮಗೀಗ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಅಂಚೆ ಕಚೇರಿಯ 5 ವರ್ಷಗಳ ಮರುಕಳಿಸುವ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಸರ್ಕಾರ ಹೆಚ್ಚಿಸಿದೆ. ಹೊಸ ದರಗಳು ಅಕ್ಟೋಬರ್ 1 ರಿಂದ ಅನ್ವಯವಾಗಲಿದೆ.

ಇಲ್ಲಿಯವರೆಗೆ ನೀವು 5 ವರ್ಷದ ಆರ್‌ ಡಿಯಲ್ಲಿ 6.5% ದರದಲ್ಲಿ ಬಡ್ಡಿಯನ್ನು ಪಡೆಯುತ್ತಿದ್ದೀರಿ, ಆದರೆ ಅಕ್ಟೋಬರ್ 1 ರಿಂದ ನೀವು 6.7% ದರದಲ್ಲಿ ಬಡ್ಡಿಯನ್ನು ಪಡೆಯಬಹುದು. ಸರ್ಕಾರ ಅದನ್ನು 20 ಬೇಸಿಸ್ ಪಾಯಿಂಟ್‌ ಗಳಷ್ಟು ಹೆಚ್ಚಿಸಿದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಈಗ ರೂ. 2000, ರೂ. 3000 ಅಥವಾ ರೂ. 5000 ರ ಮಾಸಿಕ ಆರ್‌ ಡಿಯನ್ನು ಪ್ರಾರಂಭಿಸಿದರೆ, ಹೊಸ ಬಡ್ಡಿದರಗಳೊಂದಿಗೆ ನಿಮಗೆ ಎಷ್ಟು ಲಾಭ ಸಿಗುತ್ತದೆ ಎನ್ನುವ ಬಗ್ಗೆ ಲೆಕ್ಕಾಚಾರ ನೋಡೋಣ.

Post Office RD Investment Profit
Image Credit: TV9 Marathi

ಪೋಸ್ಟ್ ಆಫೀಸ್ ನಲ್ಲಿ 2000 ಮತ್ತು 3000 ರೂ RD ಇಟ್ಟರೆ ಎಷ್ಟು ಲಾಭ ಬರಲಿದೆ
•ನೀವು 5 ವರ್ಷಗಳವರೆಗೆ ತಿಂಗಳಿಗೆ 2,000 ರೂ.ಗಳ RD ಯನ್ನು ಪ್ರಾರಂಭಿಸಿದರೆ ನೀವು ಒಂದು ವರ್ಷದಲ್ಲಿ ರೂ. 24,000 ಮತ್ತು 5 ವರ್ಷಗಳಲ್ಲಿ ರೂ. 1,20,000 ಹೂಡಿಕೆ ಮಾಡುತ್ತೀರಿ. ನೀವು ಹೊಸ ಬಡ್ಡಿ ದರ ಅಂದರೆ 6.7% ಬಡ್ಡಿಯೊಂದಿಗೆ ರೂ. 22,732 ಬಡ್ಡಿಯನ್ನು ಪಡೆಯುತ್ತೀರಿ. ಇನ್ನು 5 ವರ್ಷಗಳ ನಂತರ, ನೀವು ಹೂಡಿಕೆ ಮಾಡಿದ ಮೊತ್ತ ಮತ್ತು ಬಡ್ಡಿ ಮೊತ್ತವನ್ನು ಸೇರಿಸಿದರೆ ಒಟ್ಟು 1,42,732 ರೂ. ಲಾಭವನ್ನು ಪಡೆಯಬಹುದು.

Join Nadunudi News WhatsApp Group

•ನೀವು ತಿಂಗಳಿಗೆ 3,000 ರೂ.ಗಳ ಆರ್‌ ಡಿಯನ್ನು ಪ್ರಾರಂಭಿಸಿದರೆ ನೀವು ಒಂದು ವರ್ಷದಲ್ಲಿ 36,000 ರೂಗಳನ್ನು ಹೂಡಿಕೆ ಮಾಡುತ್ತೀರಿ ಮತ್ತು 5 ವರ್ಷಗಳಲ್ಲಿ ನೀವು ಒಟ್ಟು ರೂ. 1,80,000 ಹೂಡಿಕೆ ಮಾಡುತ್ತೀರಿ. ಪೋಸ್ಟ್ ಆಫೀಸ್ ಆರ್‌ ಡಿ ಕ್ಯಾಲ್ಕುಲೇಟರ್ ಪ್ರಕಾರ ಹೊಸ ಬಡ್ಡಿದರಗಳ ಪ್ರಕಾರ, ನೀವು ರೂ. 34,097 ಬಡ್ಡಿಯನ್ನು ಪಡೆಯುತ್ತೀರಿ ಮತ್ತು ಮೆಚ್ಯೂರಿಟಿಯಲ್ಲಿ ನೀವು ಒಟ್ಟು ರೂ. 2,14,097 ಪಡೆಯುತ್ತೀರಿ.

•ನೀವು ಪ್ರತಿ ತಿಂಗಳು 5,000 ರೂ.ಗಳ RD ಅನ್ನು ಪ್ರಾರಂಭಿಸಿದರೆ, ನೀವು 5 ವರ್ಷಗಳಲ್ಲಿ ಒಟ್ಟು 3,00,000 ರೂ. ಹೂಡಿಕೆ ಮಾಡುತ್ತೀರಿ. ಪೋಸ್ಟ್ ಆಫೀಸ್ RD ಕ್ಯಾಲ್ಕುಲೇಟರ್ ಪ್ರಕಾರ ನೀವು 6.7% ದರದಲ್ಲಿ 56,830 ರೂಪಾಯಿಗಳನ್ನು ಬಡ್ಡಿಯಾಗಿ ಪಡೆಯುತ್ತೀರಿ. ಈ ಹೂಡಿಕೆಯಲ್ಲಿ ನೀವು ಮುಕ್ತಾಯದ ಮೇಲೆ 3,56,830 ರೂ. ಗಳ ಲಾಭವನ್ನು ಪಡೆಯುತ್ತೀರಿ.

Join Nadunudi News WhatsApp Group