Post Office Schemes: ಪೋಸ್ಟ್ ಆಫೀಸ್ ನಲ್ಲಿ 330 ರೂಪಾಯಿ ಹೂಡಿಕೆ ಮಾಡಿದರೆ ಸಿಗಲಿದೆ 16 ಲಕ್ಷ ರೂಪಾಯಿ, ಇದೊಂದು ಲಾಭದಾಯ ಯೋಜನೆ.
ಇತ್ತೀಚಿನ ದಿನಗಳಲ್ಲಿ ಜನರ ಅನುಕೂಲದ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವು ಯೋಜನೆಗಳನ್ನ ಜಾರಿಗೆ ತಂದಿದೆ. ಜನರ ಭವಿಷ್ಯದ ಉದ್ದೇಶದಿಂದ ಕೇಂದ್ರ ಸರ್ಕಾರ ಪೋಸ್ಟ್ ಆಫೀಸ್ ನಲ್ಲಿ ಅನೇಕ ಯೋಜನೆಗಳನ್ನ ಜಾರಿಗೆ ತಂದಿದ್ದು ಈ ಯೋಜನೆಗಳು ಜನರಿಗೆ ಬಹಳ ಅನುಕೂಲಕರಾದ ಯೋಜನೆಗಳು ಅನಿಸಿಕೊಂಡಿದೆ. ಸಣ್ಣ ಮಟ್ಟದ ಹೂಡಿಕೆಯನ್ನ ಮಾಡಿ ಬಹಳ ದೊಡ್ಡ ಮಟ್ಟದ ಲಾಭವನ್ನ ಪಡೆದುಕೊಳ್ಳುವ ಅನೇಕ ಯೋಜನೆಗಳು ಈಗ ಅಂಚೆ ಕಚೇರಿಯಲ್ಲಿ ಲಭ್ಯವಿದೆ. ಹೂಡಿಕೆ ಮಾಡಲು ಒಂದು ಸೂಕ್ತವಾದ ಆಯ್ಕೆ ಅಂದರೆ Post Office Schemes ಎಂದು ಹೇಳಿದರೆ ತಪ್ಪಾಗಲ್ಲ. Indian Post Office ನಲ್ಲಿ ಹಲವು ಯೋಜನೆಗಳು ಜಾರಿಯಲ್ಲಿ ಇದ್ದು ಈ ಯೋಜನೆಗಳ ಬಗ್ಗ ಹೆಚ್ಚಿನ ಜನರಿಗೆ ಇನ್ನೂ ಕೂಡ ತಿಳಿದಿಲ್ಲ.
ಹೌದು ಪೋಸ್ಟ್ ಆಫೀಸ್ ನಲ್ಲಿ ಕೆಲವ 100 ರೂಪಾಯಿಯನ್ನ ಹೂಡಿಕೆಯನ್ನ ಮಾಡಿ RD Account ತೆರೆದು ನಂತರ 330 ರೂಪಾಯಿಯನ್ನ ಹೂಡಿಕೆ ಮಾಡುವುದರ ಮೂಲಕ 16 ಲಕ್ಷ ರೂಪಾಯಿ ಲಾಭವನ್ನ ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಈ ಯೋಜನೆ ಯಾವುದು ಮತ್ತು ಈ ಯೋಜನೆಯ ಲಾಭವನ್ನ ಪಡೆದುಕೊಳ್ಳುವುದು ಹೇಗೆ ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಹೌದು ಪೋಸ್ಟ್ ಆಫೀಸ್ ನಲ್ಲಿ ಮರುಕಳಿಸುವ ಠೇವಣಿ ಅನ್ನುವ ಯೋಜನೆ ಜಾರಿಯಲ್ಲಿ ಇದ್ದು ಈ ಯೋಜನೆಯ ಅಡಿಯಲ್ಲಿ ನಾವು ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿದರೆ ಗರಿಷ್ಠವಾದ ಲಾಭವನ್ನ ಪಡೆದುಕೊಳ್ಳಬಹುದು. ಈ Recurring Deposit ಅಡಿಯಲ್ಲಿ ನೀವು ಹೂಡಿಕೆ ಮಾಡಿದ ಹಣಕ್ಕೆ ಅಂಚೆ ಕಚೇರಿ ಶೇಕಡಾ 5.8 ಬಡ್ಡಿ ನೀಡುತ್ತದೆ.
ಇದೊಂದು RD ಖಾತೆ ಆಗಿದ್ದು ಈ ಖಾತೆಯನ್ನ 100 ರೂಪಾಯಿಯಿಂದ ತೆರೆದು ನಂತರ 10000 ರೂಪಾಯಿ ಠೇವಣಿ ಇಡಬೇಕಾಗುತ್ತದೆ, ಅಂದರೆ ದಿನಕ್ಕೆ 330 ರೂಪಾಯಿ ಹೂಡಿಕೆ ಮಾಡಬೇಕು. ಈ ಯೋಜನೆಯ ಅವಧಿ ಐದು ವರ್ಷಗಳು ಆಗಿದ್ದು ಯೋಜನೆ ಮುಕ್ತಾಯದ ಸಮಯದಲ್ಲಿ ನಿಮಗೆ ಬರೋಬ್ಬರಿ 16 ಲಕ್ಷ ರೂಪಾಯಿ ಸಿಗಲಿದೆ. ನೀವು ಹತ್ತಿರದ ಅಂಚೆ ಕಚೇರಿಯಲ್ಲಿ ಈ ಖಾತೆಯನ್ನ ತೆರೆದು ಪ್ರತಿನಿತ್ಯ ಅಥವಾ ತಿಂಗಳಿಗೆ ಒಮ್ಮೆ ಹೂಡಿಕೆಯನ್ನ ಮಾಡಬೇಕಾಗುತ್ತದೆ. ನೀವು ಪ್ರತಿನಿತ್ಯ 330 ರೂಪಾಯಿ ಅಥವಾ ತಿಂಗಳಿಗೆ ಒಮ್ಮೆ ಹಣವನ್ನ ಐದು ವರ್ಷಗಳ ಕಾಲ ಹೂಡಿಕೆ ಮಾಡಿದರೆ ನೀವು ಕೊನೆಯಲ್ಲಿ ಬಹಳ ದೊಡ್ಡ ಮೊತ್ತದ ಲಾಭವನ್ನ ಪಡೆದುಕೊಳ್ಳಬಹುದಾಗಿದೆ.
ಈ ಯೋಜನೆಯಲ್ಲಿ ಪ್ರತಿ ಮೂರೂ ತಿಂಗಳಿಗೆ ಒಮ್ಮೆ ನಿಮ್ಮ ಖಾತೆಗೆ ಬಡ್ಡಿಯನ್ನ ಹಣವನ್ನ ಹಾಕಲಾಗುತ್ತದೆ. ಇನ್ನು ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಿದರೆ ನಿಮಗೆ ಅಂಚೆ ಕಚೇರಿ ಸಾಲದ ರೂಪದಲ್ಲಿ ಹಣವನ್ನ ಕೂಡ ನೀಡುತ್ತದೆ. ನೀವು ಹೂಡಿಕೆ ಮಾಡಿದ ಅರ್ಧದಷ್ಟು ಹಣವನ್ನ ಅಂಚೆ ಕಚೇರಿ ನಿಮಗೆ ಸಾಲದ ರೂಪದಲ್ಲಿ ನೀಡುತ್ತದೆ. ಇದೊಂದು ಲಾಂಗ್ ಟರ್ಮ್ ಯೋಜನೆಯಾಗಿದ್ದು ಲಾಭ ಬರುವುದು ಕೊಂಚ ತಡವಾದರೂ ಕೂಡ ಈ ಯೋಜನೆಯಲ್ಲಿ ಯಾವುದೇ ಅಪಾಯ ಇಲ್ಲ ಎಂದು ಅಂಚೆ ಕಚೇರಿ ತನ್ನ ಸ್ಪಷ್ಟನೆಯಲ್ಲಿ ಹೇಳಿದೆ. ಈ ಯೋಜನೆಯ ಲಾಭ ನಿಮ್ಮ ಹೂಡಿಕೆಯ ಮೇಲೆ ಸೀಮಿತವಾಗಿದ್ದು ಅಂಚೆ ಕಚೇರಿಯಲ್ಲಿ ಸರಿಯಾದ ಮಾಹಿತಿಯನ್ನ ಪಡೆದು ನಂತರ ಹೂಡಿಕೆ ಮಾಡಬೇಕಾಗಿದೆ.