PowerHub 200: ಕರೆಂಟ್ ಅಗತ್ಯವಿಲ್ಲ, ಈ ಸಾಧನದಿಂದ ಟಿವಿ, ಫ್ರಿಡ್ಜ್, ಫ್ಯಾನ್ ಮತ್ತು ಲ್ಯಾಪ್ ಟಾಪ್ ಒಟ್ಟಿಗೆ ರನ್ ಮಾಡಿ.

ಈಗ ಟಿವಿ, ಫ್ಯಾನ್, ಲ್ಯಾಪ್ ಟಾಪ್, ಫ್ರಿಡ್ಜ್ ಸೇರಿದಂತೆ ಎಲ್ಲವೂ ಒಟ್ಟಿಗೆ ರನ್ ಮಾಡಬಹುದು, ಮನೆಗೆ ತನ್ನಿ ಈ ಮಷೀನ್.

PowerHub 200: ಪ್ರಸ್ತುತ ಜಗತ್ತಿನಲ್ಲಿ ತಂತ್ರಜ್ಞಾನಗಳು ಹೆಚ್ಚು ಬೆಳವಣಿಗೆ ಕಾಣುತ್ತಿರುವ ಕಾರಣ Electronic ವಸ್ತುಗಳು ಹೆಚ್ಚು ಹೆಚ್ಚು ಬಳಕೆಯಾಗುತ್ತಿದೆ. ಪ್ರತಿಯೊಬ್ಬರ ಮನೆಯಲ್ಲೂ Electronic ವಸ್ತುಗಳು ಇದ್ದೆ ಇರುತ್ತದೆ.

TV, Fan, Smartphone, Laptop, Fridge, ಸೇರಿದಂತೆ ಇನ್ನಿತರ ಸಾಕಾಷ್ಟು ಇಲೆಕ್ಟ್ರಾನಿಕ್ ವಸ್ತುಗಳು ಬಳಕೆಯಲ್ಲಿವೆ. ಇನ್ನು ಎಲ್ಲಾ ರೀತಿಯ Electronic ವಸ್ತುಗಳನ್ನು ಸಕ್ರಿಯವಾಗಿರಿಸಿಕೊಳ್ಳಲು ಅವುಗಳಿಗೆ ಚಾರ್ಜ್ ಮಾಡುವುದು ಅಗತ್ಯವಾಗಿರುತ್ತದೆ.

Power Hub 200 Price and Availability
Image Credit: Zeebiz

PowerHub 200
ಯಾವುದೇ Electronic ವಸ್ತುಗಳಿಗೆ ಚಾರ್ಜ್ ಹಾಕದೆ ಇದ್ದರೆ ಅವುಗಳನ್ನು ಬಳಸಲು ಸಾಧ್ಯವಾಗುವುದಿಲ್ಲ. ಇನ್ನು ಕೆಲವೊಮ್ಮೆ ಇಡೀ ದಿನ ಪವರ್ ಕಟ್ ಆಗುವ ಸಾಧ್ಯತೆ ಇರುತ್ತದೆ. ಈ ವೇಳೆ Electronic ವಸ್ತುಗಳ ಕೆಲಸ ನಿಲ್ಲುವುದು ಸಾಮಾನ್ಯ. ಇಂತಹ ಪರಿಸ್ಥಿಯಲ್ಲಿ ನೀವು ಅವುಗಳಿಗೆ ಚಾರ್ಜ್ ಹಾಕಲು ಪವರ್ ಬ್ಯಾಂಕ್ ಸಾಧನವನ್ನು ಹುಡುಕುವುದು ಸಾಮಾನ್ಯ. ಇದೀಗ ವಿದ್ಯುತ್ ಇಲ್ಲದಿರುವಾಗ ನಿಮ್ಮ Electronic ವಸ್ತುಗಳನ್ನು ಚಾರ್ಜ್ ಮಾಡಲು ಅಂಬ್ರೇನ್ ತನ್ನ ಹೊಸ ಸಾಧನವಾದ PowerHub 200 ಅನ್ನು ಬಿಡುಗಡೆ ಮಾಡಿದೆ.

ಪವರ್ ಹಬ್ 200 ಬೆಲೆ ಮತ್ತು ಲಭ್ಯತೆ
PowerHub 200 ಅನ್ನು ನೀವು ಫ್ಲಿಪ್‌ಕಾರ್ಟ್, ಅಮೆಜಾನ್ ಮತ್ತು ಕಂಪನಿಯ ವೆಬ್‌ ಸೈಟ್‌ನಲ್ಲಿ ಖರೀದಿಸಬಹುದಾಗಿದೆ. ಈ PowerHub 200 ರ ಬೆಲೆ ರೂ. 14,999 ಆಗಿದೆ. ಇದು 60000 mAh ಬ್ಯಾಟರಿಯನ್ನು ಹೊಂದಿದ್ದು, 200W ಪವರ್ಔಟ್ ನೊಂದಿಗೆ ದೀರ್ಘಕಾಲದ ಬಾಳಿಕೆಯನ್ನು ನೀಡಲಿದೆ. PowerHub 200 ಮೂಲಕ ನೀವು ನಿಮ್ಮ ಫೋನ್, ಲ್ಯಾಪ್‌ಟಾಪ್ ಮತ್ತು ಕ್ಯಾಮೆರಾಗಳನ್ನು ಚಾರ್ಜ್ ಮಾಡಬಹುದು. ನಿಮ್ಮ ಮಿನಿ ಫ್ರಿಜ್ ಅನ್ನು ಸಹ ನೀವು ಚಾರ್ಜ್ ಮಾಡಬಹುದು.

Ambrane launches Power Hub 200
Image Credit: Livehindustan

ಈ ಎಲ್ಲ Electronic ವಸ್ತುಗಳನ್ನು ಒಟ್ಟಿಗೆ ರನ್ ಮಾಡಬಹುದು
ಈ ಸಾಧನವು 9 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ. ಪೂರ್ಣ ಚಾರ್ಜ್ ಮಾಡಿದ ನಂತರ ಮಿನಿ ಫ್ರಿಜ್ ಅನ್ನು 2 ಗಂಟೆಗಳಿಗಿಂತ ಹೆಚ್ಚು ಕಾಲ ಬಳಸಬಹುದು. ಮಿನಿ ಫ್ಯಾನ್ 4 ಗಂಟೆಗಳಿಗಿಂತ ಹೆಚ್ಚು ಕಾಲ ಓಡಬಹುದು. ಒಂದು ಗಂಟೆ ಟಿವಿ ಪ್ಲೇ ಮಾಡಬಹುದು. ಲ್ಯಾಪ್‌ಟಾಪ್ ಅನ್ನು ಎರಡು ಬಾರಿ, ಕ್ಯಾಮೆರಾ 11 ಕ್ಕಿಂತ ಹೆಚ್ಚು ಮತ್ತು ಐಪ್ಯಾಡ್ 5 ಕ್ಕಿಂತ ಹೆಚ್ಚು ಬಾರಿ ಚಾರ್ಜ್ ಮಾಡಬಹುದು.

Join Nadunudi News WhatsApp Group

ಇನ್ನು 4 ಗಂಟೆಗಳಿಂದ ಈ ಪವರ್‌ಹಬ್ 200 365 ದಿನಗಳ ವಾರಂಟಿಯೊಂದಿಗೆ ಬರುತ್ತದೆ. ಇದರಲ್ಲಿ ನೀವು ಚಾರ್ಜ್ ಮಾಡಲು USB A, QC 3.0, DC ಮತ್ತು AC ಪೋರ್ಟ್ ಇತ್ಯಾದಿ ಆಯ್ಕೆಯನ್ನು ಪಡೆಯುತ್ತೀರಿ. ಇದು ಡಿಜಿಟಲ್ ಬ್ಯಾಟರಿ ಸೂಚಕವನ್ನು ಹೊಂದಿದ್ದು, LED ಮತ್ತು SOS ಟಾರ್ಚ್ ಅನ್ನು ಸಹ ಹೊಂದಿದೆ.

Join Nadunudi News WhatsApp Group