Kisan Maandhan: ಕೇಂದ್ರದ ಈ ಯೋಜನೆಯಲ್ಲಿ ಕೇವಲ 55 ರೂ ಹೂಡಿಕೆ ಮಾಡಿದರೆ ಸಿಗಲಿದೆ ಪ್ರತಿ ತಿಗಳು 3000 ರೂ.

ಕೇಂದ್ರದ ಈ ಯೋಜನೆಯಲ್ಲಿ ಕೇವಲ 55 ರೂ. ಹೂಡಿಕೆ ಮಾಡಿದರೆ ಸಿಗಲಿದೆ ಪ್ರತಿ ತಿಂಗಳು 3000 ರೂ.

Pradhan Mantri Kisan Maandhan Yojana 2024: ದೇಶದಲ್ಲಿನ ಬಡ ರೈತರಿಗೆ ಆರ್ಥಿಕ ನೆರವಾಗಲು Pradhan Mantri Kisan Maandhan Yojana (PM -KMY ) ಯನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿದೆ. ಈ ಯೋಜನೆಯ ಅಡಿಯಲ್ಲಿ ರೈತರಿಗೆ ನಿಗದಿತ ಪಿಂಚಣಿಯ ಮೊತ್ತವನ್ನು ನೀಡಲಾಗುತ್ತದೆ.

ಕೇಂದ್ರದ ಈ ಯೋಜನೆಯಿಂದ ರೈತರು ಮಾಸಿಕ ಪಿಂಚಣಿಯನ್ನು (Monthly Pension) ಪಡೆಯುವ ಮೂಲಕ ತಮ್ಮ ವೃದ್ದಾಪ್ಯವನ್ನು ಯಾವುದೇ ಚಿಂತೆ ಇಲ್ಲದೆ ಕಳೆಯಬಹುದಾಗಿದೆ. ಹಾಗಾದರೆ ಕೇಂದ್ರದ ಈ ಯೋಜನೆ ಯಾವುದು ಮತ್ತು ಈ ಯೋಜನೆಯ ಲಾಭ ಯಾರು ಯಾರಿಗೆ ಸಿಗಲಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ.

PM Kisan Maandhan Yojana
Image Credit: Gstsuvidhakendra

ಮಾಸಿಕ ಪಿಂಚಣಿ ಪಡೆಯಲು ಕೇಂದ್ರದ ಹೊಸ ಯೋಜನೆ
ಇನ್ನು 18 ರಿಂದ 40 ವರ್ಷ ವಯಸ್ಸಿನವರು ಈ ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನೆಯ ಲಾಭವನ್ನು ಪಡೆಯಬಹುದು. ನೀವು ಈ ಯೋಜನೆಯ ಲಾಭ ಪಡೆಯಲು ಪ್ರದಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ನೋಂದಣಿ ಮಾಡಿಕೊಂಡಿರುವುದು ಅಗತ್ಯವಾಗಿದೆ. ಈ ಯೋಜನೆಯಲ್ಲಿ ವಯಸ್ಸಿಗೆ ಅನುಗುಣವಾಗಿ ಹೂಡಿಕೆ ಅನ್ವಯಾಗುತ್ತದೆ.

ಇನ್ನು 18 ರಿಂದ 40 ವರ್ಷದವರು ಮಾತ್ರ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ನೀವು 18 ವರ್ಷದಲ್ಲಿ ಹೂಡಿಕೆ ಪ್ರಾರಂಭಿಸಿದೆ ತಿಂಗಳಿಗೆ 55 ರೂ., 30 ವರ್ಷದಲ್ಲಿ ಹೂಡಿಕೆ ಮಾಡಿದರೆ ತಿಂಗಳಿಗೆ 110 ರೂ. ಹೂಡಿಕೆ ಮಾಡಬೇಕಾಗುತ್ತದೆ. ಇನ್ನು 40 ವಯಸ್ಸಿನಲ್ಲಿ ಯೋಜನೆಗೆ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 220 ರೂ. ಹೂಡಿಕೆ ಮಾಡಬೇಕು. ನಿಮ್ಮ ವಯಸ್ಸು 60 ವರ್ಷ ದಾಟಿದ ಮೇಲೆ ಪ್ರತಿ ತಿಂಗಳು ಪಿಂಚಣಿಯ ಲಾಭ ಪಡೆಯಬಹುದು.

Pradhan Mantri Kisan Maandhan Yojana Investment
Image Credit: Informal News

ಕೇಂದ್ರದ ಈ ಯೋಜನೆಯಲ್ಲಿ ಕೇವಲ 55 ರೂ. ಹೂಡಿಕೆ ಮಾಡಿದರೆ ಸಿಗಲಿದೆ ಪ್ರತಿ ತಿಂಗಳು 3000 ರೂ.
ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನೆಯಡಿಯಲ್ಲಿ ರೈತರಿಗೆ ಮಾಸಿಕ 3,000 ರೂಪಾಯಿ ಪಿಂಚಣಿ ನೀಡಲಾಗುತ್ತದೆ. ಅಂದರೆ ವಾರ್ಷಿಕವಾಗಿ ರೂ. 36,000 ಮೊತ್ತವನ್ನು ಪಡೆಯುತ್ತಾರೆ. ಇನ್ನು ಮನ್ ಧನ್ ಯೋಜನೆಯ ಮಾಸಿಕ ಕೊಡುಗೆಯು ರೂ. 55 ರಿಂದ ರೂ. 200 ರ ವರೆಗೆ ಇರುತ್ತದೆ. ಅಂದರೆ ವರ್ಷಕ್ಕೆ ಕನಿಷ್ಠ 660 ಮತ್ತು ಗರಿಷ್ಠ 24,00 ರೂ. ಆಗಿದೆ. ಈ ಹಣವನ್ನು ಕಡಿತಗೊಳಿಸಿದ ನಂತರ PM Kisan ಹಣ ನಿಮ್ಮ ಖಾತೆಗೆ ಬರುತ್ತದೆ. 60 ವರ್ಷಗಳ ನಂತರ PM Kisan ನ ಕಂತಿನಲ್ಲಿ ಯಾವುದೇ ಹಣವನ್ನು ಕಡಿತಗೊಳಿಸಲಾಗುವುದಿಲ್ಲ.

Join Nadunudi News WhatsApp Group

Join Nadunudi News WhatsApp Group