Mudra Loan 2024: ಸ್ವಂತ ಬಿಸಿನೆಸ್ ಮಾಡಲು ಕೇಂದ್ರದಿಂದ 10 ಲಕ್ಷ ಪಡೆಯುವುದು ಹೇಗೆ…? ಇಲ್ಲಿದೆ ಡೀಟೇಲ್ಸ್.

ಸ್ವಂತ ಬಿಸಿನೆಸ್ ಮಾಡುವವರಿಗೆ ಕೇಂದ್ರದಿಂದ ಸಿಗಲಿದೆ 10 ಲಕ್ಷ

Pradhan Mantri Mudra Apply: ಕೇಂದ್ರ ಸರ್ಕಾರ ನಿಮ್ಮ ಸ್ವಂತ ಉದ್ಯೋಗದ ಕನಸಿಗೆ ಸಹಾಯ ಮಾಡಲು ಹೊಸ ರೀತಿಯ ಯೋಜನೆಯನ್ನು ಹಾಕಿಕೊಂಡಿದೆ. ಹೆಚ್ಚಿನ ಬಡ್ಡಿ ಪಾವತಿಸದೇ, ಯಾವುದೇ ಗ್ಯಾರಂಟಿಯನ್ನು ನೀಡದೆ ನೀವು ಸರ್ಕಾರದಿಂದ ನಿಮ್ಮ ಸ್ವಂತ ಉದ್ಯೋಗದ ಕನಸಿಗೆ ಹಣದ ಸಹಾಯವನ್ನು ಪಡೆಯಬಹುದು.

ಅಷ್ಟಕ್ಕೂ ಅದು ಯಾವ ಯೋಜನೆ ಎಂದು ಯೋಚಿಸುತ್ತಿದ್ದೀರಾ…? ಸ್ವಂತ ಉದ್ಯೋಗದ ಕನಸಿಗೆ ನೆರವಾಗುವ ಯೋಜನೆಯ ಬಗ್ಗೆ ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ. ನಿಮ್ಮ ಸ್ವಂತ ಉದ್ಯೋಗದ ಕನಸಿಗೆ ಈ ಲೇಖನದಲ್ಲಿನ ಮಾಹಿತಿ ಉಪಯುಕ್ತವಾಗಲಿದೆ.

Pradhan Mantri Mudra Loan
Image Credit: Thestatesman

ಸ್ವಂತ ಬಿಸಿನೆಸ್ ಮಾಡಲು ಕೇಂದ್ರದಿಂದ 10 ಲಕ್ಷ ಪಡೆಯಿರಿ
ಸರ್ಕಾರ 2015 ರಲ್ಲಿ Pradhan Mantri Mudra ಯೋಜನೆಯನ್ನು ಪ್ರಾರಂಭಿಸಿದೆ. ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡಲು ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆಯನ್ನು ಪರಿಚಯಿಸಲಾಗಿದೆ. ಈ ಯೋಜನೆಯನ್ನು ಮೂರು ಹಂತಗಳಾಗಿ ವರ್ಗೀಕರಿಸಲಾಗಿದೆ. ಇದರ ಅಡಿಯಲ್ಲಿ ಅರ್ಹರು ಮುದ್ರಾ ಸಾಲವನ್ನು ತೆಗೆದುಕೊಳ್ಳುವ ಮೂಲಕ ತಮ್ಮ ವ್ಯವಹಾರವನ್ನು ಪ್ರಾರಂಭಿಸಬಹುದು.

ಮೊದಲನೆಯದಾಗಿ ಶಿಶು ಸಾಲದಡಿ 50 ಸಾವಿರ ರೂಪಾಯಿಗಳ ಖಾತರಿ ಸಾಲ ನೀಡಲಾಗುತ್ತಿದೆ. ಕಿಶೋರ್ ಸಾಲದ ಅಡಿಯಲ್ಲಿ 5 ಲಕ್ಷದ ವರೆಗೆ ಮೊತ್ತವನ್ನು ನೀಡಲಾಗುತ್ತಿದೆ. ಇನ್ನು ದೊಡ್ಡ ಕೆಲಸ ಮಾಡಬೇಕೆಂದರೆ ತರುಣ್ ಯೋಜನೆಯಡಿ 10 ಲಕ್ಷ ರೂಪಾಯಿಯ ವರೆಗೆ ಸಾಲವನ್ನು ನೀಡಲಾಗುತ್ತಿದೆ. ಮುದ್ರಾ ಸಾಲ ಯೋಜನೆಗೆ 24 ರಿಂದ 70 ವರ್ಷದ ಭಾರತೀಯರು ಅರ್ಜಿ ಸಲ್ಲಿಸಬಹುದಾಗಿದೆ. ಆಧಾರ್ ಕಾರ್ಡ್, ಪಾನ್ ಕಾರ್ಡ್, ಪಾಸ್ ಪೋರ್ಟ್, ವಿಳಾಸ ಪುರಾವೆ ನೀಡುವ ಮೂಲಕ ನೀವು PMMY ಅರ್ಜಿ ಸಲ್ಲಿಸಿ ಸಾಲವನ್ನು ಪಡೆಯಬಹುದು.

Pradhan Mantri Mudra Yojana Apply
Image Credit: Timesbull

ಸ್ವಂತ ಬಿಸಿನೆಸ್ ಮಾಡಲು ಕೇಂದ್ರದಿಂದ 10 ಲಕ್ಷ ಪಡೆಯುವುದು ಹೇಗೆ…?
•ನೀವು ಮುದ್ರಾ ಯೋಜನೆಯಡಿ ಸಾಲವನ್ನು ಪಡೆಯಲು ಬಯಸಿದರೆ ಬ್ಯಾಂಕ್ ಅಧಿಕಾರಿಗಳಿಗೆ ವ್ಯವಹಾರದ ಮಾದರಿಯನ್ನು ತೋರಿಸಬೇಕಾಗುತ್ತದೆ.

Join Nadunudi News WhatsApp Group

•ವ್ಯವಹಾರದ ಮೂಲ ಮಾದರಿಯ ಆಧಾರದ ಮೇಲೆ ಬ್ಯಾಂಕ್ ನಿಮಗೆ 10 ಲಕ್ಷ ಸಾಲವನ್ನು ನೀಡುತ್ತದೆ.

•ನಿಮ್ಮ ವ್ಯವಹಾರಕ್ಕೆ ನೀವು ಕೇವಲ 25 % ಹಣವನ್ನು ಖರ್ಚು ಮಾಡಿದರೆ ಬ್ಯಾಂಕ್ ನಿಮಗೆ 75 % ಸಾಲವನ್ನು ನೀಡುತ್ತದೆ.

•ಸೂಕ್ಷ ಮತ್ತು ಸಣ್ಣ ಕೈಗಾರಿಕೆಗಳಿಗೆ ಈ ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆ ಸಹಾಯವಾಗುತ್ತದೆ.

•ಇನ್ನು mudra.org.in ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಸಾಲದ ಅರ್ಜಿಯನ್ನು ಭರ್ತಿಮಾಡಿ ಹತ್ತಿರದ ಬ್ಯಾಂಕ್ ಶಾಖೆಗೆ ಅರ್ಜಿಯನ್ನು ಸಲ್ಲಿಸಿದರೆ ಬ್ಯಾಂಕ್ ನಿಮಗೆ ಸಾಲವನ್ನು ನೀಡುತ್ತದೆ.

Pradhan Mantri Mudra Yojana
Image Credit: Goodreturns

Join Nadunudi News WhatsApp Group