Mudra Loan Apply: ಸ್ವಂತ ಬಿಸಿನೆಸ್ ಮಾಡಲು ಹಣ ಇಲ್ವಾ…? ಕೇಂದ್ರದ ಈ ಯೋಜನೆಯಲ್ಲಿ ಸಿಗಲಿದೆ ಬಡ್ಡಿ ಇಲ್ಲದೆ ಸಾಲ.

ಈ ಯೋಜನೆಯಡಿ ಬಡ್ಡಿ ಇಲ್ಲದೆ 10 ಲಕ್ಷದವರೆಗೆ ಸಾಲ ಸೌಲಭ್ಯ ಪಡೆಯಬಹುದು.

Pradhan Mantri Mudra Loan Scheme: ಸಾಮಾನ್ಯವಾಗಿ ಎಲ್ಲರು ಕೂಡ ಸ್ವಂತ ಉದ್ಯೋಗವನ್ನು ಆರಂಭಿಸಬೇಕು ಎನ್ನುವ ಯೋಜನೆಯನ್ನು ಹಾಕಿಕೊಳ್ಳುತ್ತಾರೆ. ಆದರೆ ಸ್ವಂತ ಉದ್ಯೋಗವನ್ನು ಆರಂಭಿಸುವುದು ಅಷ್ಟು ಸುಲಭದ ಮಾತಲ್ಲ. ಸ್ವಂತ ಉದ್ಯೋಗದ ಕನಸಿಗೆ ಹಣವೇ ಅಡಿಪಾಯವಾಗುತ್ತದೆ.

ಸ್ವಂತ ಉದ್ಯೋಗವನು ಆರಂಭಿಸಲು ಉದ್ಯೋಗದ ಬಗ್ಗೆ ಯೋಜನೆ ಯಾವ ರೀತಿ ಇರಬೇಕಾಗುತ್ತದೆಯೋ ಅದೇ ರೀತಿ ಬಂಡವಾಳವು ಅಗತ್ಯವಾಗುತ್ತದೆ. ಇನ್ನು ನಿಮ್ಮ ಬಳಿ ಉದ್ಯೋಗ ಮಾಡಲು ಆಯ್ಕೆಗಳಿದ್ದು ಹಣದ ಕೊರತೆ ಇದೆ ಎಂದಾದರೆ ನೀವು ಚಿಂತಿಸುವ ಅಗತ್ಯವಿಲ್ಲ. ಹಣದ ಸಮಸ್ಯೆ ನಿವಾರಣೆ ಆಗುವಂತಹ ಮಾಹಿತಿ ನಾವೀಗ ನೀಡಲಿದ್ದೇವೆ.

Pradhan Mantri Mudra Yojana
Image Credit: Probusinsurance

ಸ್ವಂತ ಬಿಸಿನೆಸ್ ಮಾಡಲು ಹಣ ಇಲ್ವಾ…?
ಕೇಂದ್ರ ಸರ್ಕಾರ ನಿಮ್ಮ ಸ್ವಂತ ಉದ್ಯೋಗದ ಕನಸಿಗೆ ಸಹಾಯ ಮಾಡಲು ಹೊಸ ರೀತಿಯ ಯೋಜನೆಯನ್ನು ಹಾಕಿಕೊಂಡಿದೆ. ಹೆಚ್ಚಿನ ಬಡ್ಡಿ ಪಾವತಿಸದೇ, ಯಾವುದೇ ಗ್ಯಾರಂಟಿಯನ್ನು ನೀಡದೆ ನೀವು ಸರ್ಕಾರದಿಂದ ನಿಮ್ಮ ಸ್ವಂತ ಉದ್ಯೋಗದ ಕನಸಿಗೆ ಹಣದ ಸಹಾಯವನ್ನು ಪಡೆಯಬಹುದು. ಅಷ್ಟಕ್ಕೂ ಅದು ಯಾವ ಯೋಜನೆ ಎಂದು ಯೋಚಿಸುತ್ತಿದ್ದೀರಾ…? ಸ್ವಂತ ಉದ್ಯೋಗದ ಕನಸಿಗೆ ನೆರವಾಗುವ ಯೋಜನೆಯ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಕೇಂದ್ರದ ಈ ಯೋಜನೆಯಲ್ಲಿ ಸಿಗಲಿದೆ ಬಡ್ಡಿ ಇಲ್ಲದೆ ಸಾಲ
ಸರ್ಕಾರ 2015 ರಲ್ಲಿ Pradhan Mantri Mudra ಯೋಜನೆಯನ್ನು ಪ್ರಾರಂಭಿಸಿದೆ. ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡಲು ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆಯನ್ನು ಪರಿಚಯಿಸಲಾಗಿದೆ. ಈ ಯೋಜನೆಯನ್ನು ಮೂರು ಹಂತಗಳಾಗಿ ವರ್ಗೀಕರಿಸಲಾಗಿದೆ. ಇದರ ಅಡಿಯಲ್ಲಿ ಅರ್ಹರು ಮುದ್ರಾ ಸಾಲವನ್ನು ತೆಗೆದುಕೊಳ್ಳುವ ಮೂಲಕ ತಮ್ಮ ವ್ಯವಹಾರವನ್ನು ಪ್ರಾರಂಭಿಸಬಹುದು. ಇನ್ನು mudra.org.in ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಸಾಲದ ಅರ್ಜಿಯನ್ನು ಭರ್ತಿಮಾಡಿ ಹತ್ತಿರದ ಬ್ಯಾಂಕ್ ಶಾಖೆಗೆ ಅರ್ಜಿಯನ್ನು ಸಲ್ಲಿಸಿದರೆ ಬ್ಯಾಂಕ್ ನಿಮಗೆ ಸಾಲವನ್ನು ನೀಡುತ್ತದೆ.

Pradhan Mantri Mudra Loan Scheme
Image Credit: Good Returns

ಈ ಯೋಜನೆಯಡಿ 10 ಲಕ್ಷದವರೆಗೆ ಸಾಲ ಸೌಲಭ್ಯ ಪಡೆಯಬಹುದು
ಮೊದಲನೆಯದಾಗಿ ಶಿಶು ಸಾಲದಡಿ 50 ಸಾವಿರ ರೂಪಾಯಿಗಳ ಖಾತರಿ ಸಾಲ ನೀಡಲಾಗುತ್ತಿದೆ. ಕಿಶೋರ್ ಸಾಲದ ಅಡಿಯಲ್ಲಿ 5 ಲಕ್ಷದ ವರೆಗೆ ಮೊತ್ತವನ್ನು ನೀಡಲಾಗುತ್ತಿದೆ. ಇನ್ನು ದೊಡ್ಡ ಕೆಲಸ ಮಾಡಬೇಕೆಂದರೆ ತರುಣ್ ಯೋಜನೆಯಡಿ 10 ಲಕ್ಷ ರೂಪಾಯಿಯ ವರೆಗೆ ಸಾಲವನ್ನು ನೀಡಲಾಗುತ್ತಿದೆ. ಮುದ್ರಾ ಸಾಲ ಯೋಜನೆಗೆ 24 ರಿಂದ 70 ವರ್ಷದ ಭಾರತೀಯರು ಅರ್ಜಿ ಸಲ್ಲಿಸಬಹುದಾಗಿದೆ. ಆಧಾರ್ ಕಾರ್ಡ್, ಪಾನ್ ಕಾರ್ಡ್, ಪಾಸ್ ಪೋರ್ಟ್, ವಿಳಾಸ ಪುರಾವೆ ನೀಡುವ ಮೂಲಕ ನೀವು PMMY ಅರ್ಜಿ ಸಲ್ಲಿಸಿ ಸಾಲವನ್ನು ಪಡೆಯಬಹುದು.

Join Nadunudi News WhatsApp Group

Interest Free Loan Scheme
Image Credit: Paytm

Join Nadunudi News WhatsApp Group