Ujjwala Scheme Gas: BPL ಕಾರ್ಡ್ ಇದ್ದವರಿಗೆ ಕೇವಲ 603 ರೂಪಾಯಿಗೆ ಸಿಗಲಿದೆ ಗ್ಯಾಸ್, ಸಭೆಯಲ್ಲಿ ಮಹತ್ವದ ನಿರ್ಧಾರ

BPL ಕಾರ್ಡ್ ಇದ್ದವರಿಗೆ ಕಡಿಮೆ ದರದಲ್ಲಿ ಸಿಗಲಿದೆ ಗ್ಯಾಸ್ ಸಿಲಿಂಡರ್

Pradhan Mantri Ujjwala Yojana: ಕೇಂದ್ರ ಸರ್ಕಾರ ಉಜ್ವಲ ಯೋಜನೆಯಡಿ ಬಿಪಿಎಲ್ ಪಡಿತರ ಚೀಟಿ ಇರುವ ಕುಟುಂಬಕ್ಕೆ ಬಹಳ ಕಡಿಮೆ ದರದಲ್ಲಿ ಗ್ಯಾಸ್ ಸಿಲಿಂಡರ್ ನೀಡುವುದಾಗಿ ಭರವಸೆ ನೀಡಿದ್ದು, ಈ ಯೋಜನೆಯು ಬಹಳ ಬಡ ಕುಟುಂಬಗಳಿಗೆ ಅನುಕೂಲಕರ ಆಗಲಿದೆ.

ಈ ಯೋಜನೆಯಡಿ ಲಕ್ಷಾಂತರ ಕುಟುಂಬವು ಗ್ಯಾಸ್ ಸೌಲಭ್ಯವನ್ನು ಹೊಂದಲಿದ್ದು, ಅರ್ಹರು ಈ ಯೋಜನೆಯ ಫಲಾನುಭವಿಗಳಾಗಬಹುದು. ಅಷ್ಟೇ ಅಲ್ಲದೆ ಹತ್ತಿರದ ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಬಹಳ ಅಗ್ಗದ ದರದಲ್ಲಿ ಈ ಯೋಜನೆ ಜನಸಾಮಾನ್ಯರಿಗೆ ದೊರೆಯಲಿದೆ.

Pradhan Mantri Ujjwala Yojana
Image Credit: Firstbharatiya

ಉಜ್ವಲ ಯೋಜನೆಯಡಿ ಎಲ್.ಪಿ.ಜಿ. ಸಿಲಿಂಡರ್ ನೀಡಲಾಗುವುದು

ದೇಶದಲ್ಲಿನ ಬಿಪಿಎಲ್ ಸಮುದಾಯದವರು ಈ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಪಡೆಯುವ ಕುರಿತು ಕೇಂದ್ರ ಸರ್ಕಾರ ಮಾಹಿತಿ ಹೊರಹಾಕಿದ್ದು, ಕೇಂದ್ರ ಸರ್ಕಾರದ ಉಜ್ವಲ ಯೋಜನೆಯಡಿ ಬಿಪಿಎಲ್ ಸಮುದಾಯದವರಿಗೆ ನೀಡುತ್ತಿರುವ ಅಡುಗೆ ಅನಿಲ ಸಿಲಿಂಡರ್ ದರ ನೆರೆಹೊರೆ ದೇಶಗಳಿಗಿಂತ ಭಾರಿ ಕಡಿಮೆ ಇದೆ ಎಂದು ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ದೇಶದಲ್ಲಿ ಕೇವಲ 603 ರೂಪಾಯಿಗೆ ಗ್ಯಾಸ್ ಸಿಲಿಂಡರ್ ಖರೀದಿ ಮಾಡಬಹುದು ಎನ್ನಲಾಗಿದೆ.

Pradhan Mantri Ujjwala Yojana Latest
Image Credit: Times Now Hindi

ಉಜ್ವಲ ಯೋಜನೆಯಡಿ ಕಡಿಮೆ ದರದಲ್ಲಿ ಗ್ಯಾಸ್ ಸಿಲಿಂಡರ್ ಖರೀದಿಸಿ

Join Nadunudi News WhatsApp Group

ಈ ಯೋಜನೆಯ ಕುರಿತು ಮಾತನಾಡಿದ ಕೇಂದ್ರ ಸಚಿವ ಹರದೀಪ್ ಸಿಂಗ್ ಪುರಿ ಈ ಬಗ್ಗೆ ಮಾಹಿತಿ ನೀಡಿ, ಶ್ರೀಲಂಕಾದಲ್ಲಿ ಪ್ರತಿ ಸಿಲಿಂಡರ್ ದರ 1033 ರೂ., ನೇಪಾಳದಲ್ಲಿ 1,198 ರೂ., ಪಾಕಿಸ್ತಾನದಲ್ಲಿ ಪ್ರತಿ ಸಿಲಿಂಡರ್ ದರ 1059 ರೂ.ಇದೆ. ಭಾರತದಲ್ಲಿ ಉಜ್ವಲ ಯೋಜನೆ ಅಡಿಯಲ್ಲಿ 14.2 ಕೆಜಿ ಸಿಲಿಂಡರ್ ಅನ್ನು ಕೇವಲ 603 ರೂಪಾಯಿಗೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ದೇಶದಲ್ಲಿ ಈ ಯೋಜನೆಯನ್ನು ಅಭಿವೃದ್ಧಿ ಗೊಳಿಸುವ ನಿಟ್ಟಿನಲ್ಲಿ ಹಲವು ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

Join Nadunudi News WhatsApp Group