Prashanth Neel: ಈ ಕಾರಣಕ್ಕೆ ಅಪ್ಪುವನ್ನು ದ್ವೇಷಿಸಿದ ಪ್ರಶಾಂತ್ ನೀಲ್, ಅಪ್ಪು ಮೇಲಿನ ಕೋಪ ಹೇಳಿದ ಪ್ರಶಾಂತ್ ನೀಲ್.

ಅಪ್ಪು ಮೇಲೆ ದ್ವೇಷ ಹುಟ್ಟಿತ್ತು ಎಂದ ಪ್ರಶಾಂತ್ ನೀಲ್, ಪುನೀತ್ ರಾಜ್ ಕುಮಾರ್ ಬಗ್ಗೆ ಮಾತನಾಡಿದ ನಿರ್ದೇಶಕ ಪ್ರಶಾಂತ್ ನೀಲ್.

Prashanth Neel About Puneeth Rajakumar: ನಟ ಪುನೀತ್ ರಾಜ್ ಕುಮಾರ್ (Puneeth Rajakumar) ವಿಧಿವಶರಾಗಿದ್ದರು ಸಹ ಕನ್ನಡಿಗರ ಮನದಲ್ಲಿ ಎಂದಿಗೂ ಚಿರಋಣಿ. ಪುನೀತ್ ರಾಜ್ ಕುಮಾರ್ ಅವರನ್ನು ಇಷ್ಟ ಪಡೆದೆ ಇರುವವರು ಯಾರು ಇಲ್ಲ ಎಂದು ಹೇಳಬಹುದು. ಆದರೆ ಇದೀಗ ಖ್ಯಾತ ನಿರ್ದೇಶಕಾರಾದ ಪ್ರಶಾಂತ್ ನೀಲ್ ಅವರು ಪುನೀತ್ ರಾಜಕುಮಾರ್ ಅವರು ಎಂದರೆ ನನಗೆ ಇಷ್ಟವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ. 

Director Prashant Neel spoke about Puneeth Rajkumar
Image Credit: timesofindia

ಪ್ರಶಾಂತ್ ನೀಲ್ ಹಾಗು ಪುನೀತ್ ರಾಜ್ ಕುಮಾರ್
ಪ್ರಶಾಂತ್ ನೀಲ್ ಹಾಗು ಪುನೀತ್ ರಾಜ್ ಕುಮಾರ್ ಕನ್ನಡ ಚಿತ್ರರಂಗ ಕಂಡ ಖ್ಯಾತ ನಿರ್ದೇಶಕ ಹಾಗು ನಟ. ಈ ಇಬ್ಬರು ಕನ್ನಡ ಚಿತ್ರರಂಗದ ಕಲಾವಿದರಾಗಿ ಮಾತ್ರವಲ್ಲದೇ ಸಂಬಧಿಕರು ಸಹ ಆಗಿದ್ದರಂತೆ. ನಿರ್ದೇಶಕ ಪ್ರಶಾಂತ್ ನೀಲ್ ಅವರು ಉಗ್ರಂ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ್ದಾರೆ ಮತ್ತು ಇನ್ನು ಪುನೀತ್ ರಾಜ್ ಕುಮಾರ್ 6 ತಿಂಗಳಿರುವಾಗಲೇ ಚಿತ್ರರಂಗದ ಪ್ರವೇಶ ಮಾಡಿದ್ದಾರೆ.

ಪುನೀತ್ ರಾಜ್ ಕುಮಾರ್ ಬಗ್ಗೆ ಮಾತನಾಡಿದ ನಿರ್ದೇಶಕ ಪ್ರಶಾಂತ್ ನೀಲ್
ನಿರ್ದೇಶಕ ಪ್ರಶಾಂತ್ ನೀಲ್ ಹಿಂದಿನ ವರ್ಷ ನಡೆದ ಸಂದರ್ಶನ ಒಂದರಲ್ಲಿ ಪುನೀತ್ ರಾಜ್ ಕುಮಾರ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಆಂಕರ್ ಅನುಶ್ರೀ ಜೊತೆ ಮಾತನಾಡಿದ್ದ ಪ್ರಶಾಂತ್ ನೀಲ್ ಭಾನುವಾರ ಕ್ರಿಕೆಟ್ ಆಡುವುದಕ್ಕೆ ಅಂತ ಕ್ರೀಡಾಂಗಣಕ್ಕೆ ಬಂದಿದ್ದೆವು, ಆದರೆ ಅಲ್ಲಿ ಚಿತ್ರವೊಂದರ ಶೂಟಿಂಗ್ ನಡೆಯುತ್ತಿತ್ತು.

Director Prashant Neel spoke about Puneeth Rajkumar
Image Credit: superrlife

ಎಷ್ಟೋ ಬೈಕೊಂಡೆ ಅಂದರೆ ನಾನು ಯಾರು ಗುರು ಶೂಟಿಂಗ್ ಅದು ಇದು ಅಂದ್ರೆ, ಅಣ್ಣಾವ್ರ ಕೊನೆ ಮಗನ ಫಸ್ಟ್ ಸಿನಿಮಾ ಅಪ್ಪು ಶೂಟಿಂಗ್ ನಡೆಯುತ್ತಿದೆ ಅಂತ ಗೊತ್ತಾಯಿತು. ಯಾಕೆ ಅವರು ಹೊರಗೆ ಹೋಗಿ ಶೂಟಿಂಗ್ ಮಾಡಬಾರದು, ಇದು ನಮ್ಮ ಜಾಗ ಎಂದು ಬೈದುಕೊಂಡಿದ್ದೆ.

ಅಪ್ಪು ಮೇಲೆ ದ್ವೇಷ ಹುಟ್ಟಿತ್ತು ಎಂದ ಪ್ರಶಾಂತ್ ನೀಲ್
ಅಲ್ಲದೆ ಶೂಟಿಂಗ್ ಸ್ಥಳದಲ್ಲಿ ನಟಿ ರಕ್ಷಿತಾ, ಅಪ್ಪು ಸರ್ ಇದ್ದಿದ್ದರು. ಅಲ್ಲೇ ನಿಂತುಕೊಂಡು ಶೂಟಿಂಗ್ ನೋಡುತ್ತಾ ಇದ್ದಿದ್ದೇ. ಅಲ್ಲೇ ಒಂದು ದ್ವೇಷ ಶುರುವಾಯಿತು. ಅದು ನನ್ನ ತಲೆಯಲ್ಲಿ ಬಹಳ ದಿನಗಳ ಕಾಲ ಉಳಿದುಬಿಟ್ಟಿತು. ಅಪ್ಪು ಸಿನಿಮಾ ರಿಲೀಸ್ ಆಗಿ ಐವತ್ತು ದಿನಗಳಾದರೂ ನಾನು ಆ ಚಿತ್ರ ನೋಡಿರಲಿಲ್ಲ. ಅವರು ಬಂದು ನಮ್ಮ ಕ್ರಿಕೆಟ್ ಹಾಳು ಮಾಡಿಬಿಟ್ಟಿದ್ದರು ಎಂಬ ಕಾರಣದಿಂದಲೇ ಹೋಗಿರಲಿಲ್ಲ.

Join Nadunudi News WhatsApp Group

Director Prashant Neel spoke about Puneeth Rajkumar
Image Credit: metrosaga

ನಮ್ಮ ತಾಯಿಯ ಮನೆ ಶಿವಮೊಗ್ಗಕ್ಕೆ ಹೊಂದಿದ್ದಿವಿ. ಮದುವೆ ಇತ್ತು, ಮದುವೆ ಮುಗಿದು ಆರತಕ್ಷತೆಗೆ ಸಂಜೆವರೆಗೂ ಟೈಮ್ ಇತ್ತು. ಎಲ್ಲರೂ ಅಪ್ಪು ಚಿತ್ರಕ್ಕೆ ಹೋಗೋಣ ಅಂದಿದ್ದರು. ನಾನು ಬರಲ್ಲ ಹೋಗಿ ಎಂದಿದ್ದೆ. ಆದರೂ ಬಲವಂತವಾಗಿ ಕರೆದುಕೊಂಡು ಹೋದರು. ಆ ಸಮಯದಲ್ಲಿ ಅವರ ಫ್ಯಾನ್ ಆದ ನಾನು ನನ್ನ ಜೀವನಪೂರ್ತಿ ಫ್ಯಾನ್ ಆಗಿಬಿಟ್ಟೆ ಎಂದು ಹೇಳಿಕೊಂಡಿದ್ದರು.

Join Nadunudi News WhatsApp Group