ಪುನೀತ್ ಅಗಲಿಕೆಯ ನಂತರ ಅವರ ಬಾಡಿ ಗಾರ್ಡ್ ಯಾವ ಕೆಲಸ ಮಾಡುತ್ತಿದ್ದಾರೆ ಗೊತ್ತಾ, ಮಿಸ್ ಯು ಅಪ್ಪು.

ನಟ ಪುನೀತ್ ರಾಜಕುಮಾರ್ ನಮ್ಮನ್ನ ಅಗಲಿ ಎಂಟು ತಿಂಗಳು ಕಳೆಯುತ್ತಾ ಬಂದಿದೆ. ಹೌದು ಬರಿ ಸಿನಿಮಾಗಳಲ್ಲಿ ಮಾತ್ರ ಹೀರೋ ಆಗಿರದೆ ಅದೆಷ್ಟೋ ಜನರ ಪಾಲಿಗ ರಿಯಲ್ ಹೀರೋ ಆಗಿದ್ದ ನಟ ಪುನೀತ್ ರಾಜಕುಮಾರ್ ಅವರು ಇಂದು ನಮ್ಮಜೊತೆ ಇಲ್ಲ ಅನ್ನುವುದನ್ನ ಊಹೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಹಲವು ಅನಾಥ ಆಶ್ರಮ, ಹಲವು ಗೋಶಾಲೆ ಮತ್ತು ಅದೆಷ್ಟೋ ಮಕ್ಕಳ ವಿಧ್ಯಾಭ್ಯಾಸವನ್ನ ನೋಡಿಕೊಳ್ಳುತ್ತಿದ್ದ ನಟ ಪುನೀತ್ ರಾಜಕುಮಾರ್ ಅವರು ನಮ್ಮ ನಿಮ್ಮ ಮನದಲ್ಲಿ ಯಾವತ್ತೂ ಜೀವಂತ. ಇನ್ನು ನಟ ಪುನೀತ್ ರಾಜಕುಮಾರ್ ಅವರು ಎಲ್ಲೇ ಹೋದರು ಅವರ ಜೊತೆ ಅವರ ಅಂಗರಕ್ಷಕರಾದ ಚಲಪತಿ ಇದ್ದೆ ಇರುತ್ತಿದ್ದರು.

ಪುನೀತ್ ರಾಜಕುಮಾರ್ ಅವರು ತಮ್ಮ ಬಾಡಿ ಗಾರ್ಡ್ ಚಲಪತಿಯನ್ನ ಸ್ವತಃ ತಮ್ಮ ಮನಯೆವರ ಹಾಗೆ ನೋಡಿಕೊಳ್ಳುತ್ತಿದ್ದರು. ಹಲವು ವರ್ಷಗಳಿಂದ ಪುನೀತ್ ರಾಜಕುಮಾರ್ ಅವರ ಜೊತೆ ಕೆಲಸವನ್ನ ಮಾಡಿದ ಚಲಪತಿ ಅವರು ಈಗ ಏನು ಮಾಡುತ್ತಿದ್ದಾರೆ ಅನ್ನುವ ಪ್ರಶ್ನೆ ಹಲವು ಜನರ ಮನದಲ್ಲಿ ಇದೆ ಎಂದು ಹೇಳಬಹುದು. ಹಾಗಾದರೆ ಪುನೀತ್ ರಾಜಕುಮಾರ್ ಅವರ ಬಾಡಿ ಗಾರ್ಡ್ ಚಲಪತಿ ಅವರು ಈಗ ಎಲ್ಲಿದ್ದಾರೆ ಮತ್ತು ಯಾವ ಕೆಲಸವನ್ನ ಮಾಡುತ್ತಿದ್ದಾರೆ ಎಂದು ತಿಳಿಯೋಣ ಬನ್ನಿ. ಹೌದು ಸ್ನೇಹಿತರೆ ನಟ ಪುನೀತ್ ರಾಜಕುಮಾರ್ ಅವರು ಅಗಲಿದ ನಂತರ ಚಲಪತಿ ಅವರು ನೋವಿನಲ್ಲಿಯೇ ಜೀವನವನ್ನ ಕಳೆಯುತ್ತಿದ್ದಾರೆ.

Punit Rajakumar bodyguard chalapati

ಇನ್ನು ಇದರ ಮದ್ಯೆ ಪುನೀತ್ ರಾಜಕುಮಾರ್ ಅವರ ಬಾಡಿ ಗಾರ್ಡ್ ಅವರು ದಿಡೀರನೆ ಮನೆ ಬಿಟ್ಟಿದ್ದು ಅವರ ಊರಿನಲ್ಲಿ ಬಂದು ನೆಲೆಸಿದ್ದಾರೆ ಎಂದು ತಿಳಿದುಬಂದಿದೆ. ಸದಾ ಪುನೀತ್ ರಾಜಕುಮಾರ್ ಅವರ ಜೊತೆ ಬಾಡಿ ಗಾರ್ಡ್ ಆಗಿ ಇರುತ್ತಿದ್ದ ಚಲಪತಿ ಅವರು ಎದ ತನಗೆ ಕೆಲಸ ಕೊಟ್ಟ ನೋವಿನಲ್ಲೇ ಪುನೀತ್ ರಾಜಕುಮಾರ್ ಅವರ ಮನೆಯನ್ನ ತೊರೆದು ತಮ್ಮ ಊರಿನ ಮನೆಯಲ್ಲಿ ಇದ್ದಾರೆ. ಅಪ್ಪು ಅಗಲಿದ ನಂತರ ಆರು ತಿಂಗಳು ಪುನೀತ್ ಮನೆಯಲ್ಲಿಯೇ ಕೆಲಸವನ್ನ ಮಾಡಿದ್ದ ಚಲಪತಿ ಅವರು ನಂತರ ಬಹಳ ನೋವಿನಿಂದ ಅವರ ಮನೆಯನ್ನ ತೊರೆದು ತಮ್ಮ ಮನೆಗೆ ಬಂದಿದ್ದಾರೆ ಮತ್ತು ಮುಂದೆ ಯಾವುದೇ ಹೀರೋ ಜೊತೆ ನಾನು ಕೆಲಸ ಮಾಡುವುದಿಲ್ಲ ಎಂದು ಚಲಪತಿ ಹೇಳಿದ್ದಾರೆ.

ಪುನೀತ್ ನಂತರ ಅವರ ಪತ್ನಿ ಅಶ್ವಿನಿ ಅವರ ಬಾಡಿ ಗಾರ್ಡ್ ಆಗಿ ಕೆಲವು ಸಮಯ ಕೆಲಸವನ್ನ ಮಾಡಿದ ಚಲಪತಿ ಅವರು ಒಂದು ತಿಂಗಳ ಹಿಂದೆ ಕೆಲಸವನ್ನ ಬಿಟ್ಟು ನೋವಿನಲ್ಲಿಯೇ ಊರನ್ನ ಸೇರಿದ್ದಾರೆ. ಅಪ್ಪು ಇಲ್ಲದ ನೋವಿನ ಬಗ್ಗೆ ಮಾತನಾಡಿದ ಚಲಪತಿ ಅವರು, ಸರ್ ಅಗಲಿದ ನಂತರ ನನಗೆ ಅಲ್ಲಿ ಏನು ಕೆಲಸ ಇರಲಿಲ್ಲ ಪ್ರತಿದಿನ ಕೂತು ಎದ್ದು ಬರಬೇಕಿತ್ತು, ಈ ಕಾರಣಕ್ಕೆ ನಾನು ಕೆಲಸ ಬಿಟ್ಟೆ. ನಾನು ಮುಂದೆ ಯಾವುದೇ ಹೀರೋ ಜೊತೆ ಕೆಲಸವನ್ನ ಮಾಡುವುದಿಲ್ಲ, ಅಪ್ಪು ಸರ್ ನೆನಪು ನನ್ನಲ್ಲಿ ಜಿವಂತ್ ಉಳಿಯಬೇಕು ಎಂದು ಚಲಪತಿ ಅವರು ಹೇಳಿದ್ದಾರೆ. ಸದ್ಯ ಮನೆಯಲ್ಲಿಯೇ ಇರುವ ಚಲಪತಿ ಅವರು ಬೇರೆ ಕೆಲಸದ ಕಡೆ ಯೋಚನೆಯನ್ನ ಮಾಡುತ್ತಿದ್ದರಂತೆ.

Join Nadunudi News WhatsApp Group

Punit Rajakumar bodyguard chalapati

Join Nadunudi News WhatsApp Group