Ticket Rule: ರೈಲು ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್, ರೈಲ್ವೆ ಟಿಕೆಟ್ ನಿಯಮದಲ್ಲಿ ಬಹುದೊಡ್ಡ ಬದಲಾವಣೆ.

ರೈಲ್ವೆ ಟಿಕೆಟ್ ನಿಯಮದಲ್ಲಿ ಬಹುದೊಡ್ಡ ಬದಲಾವಣೆ

RAC new Ticket Rule: ಭಾರತೀಯ ರೈಲ್ವೆಯು ಇತ್ತೀಚಿಗೆ ಪ್ರಯಾಣಿಕರಿಗಾಗಿ ಹೆಚ್ಚಿನ ಸೌಲಭ್ಯವನ್ನು ನೀಡುತ್ತಿದೆ. ಅದರಲ್ಲೂ ರೈಲ್ವೆ ಟಿಕೆಟ್ ಗೆ ಸಂಬಂಧಿಸಿದಂತೆ ರೈಲ್ವೆ ಇಲಾಖೆಯು ಅನೇಕ ಸೌಲಭ್ಯವನ್ನು ನೀಡಿದೆ. ಇದೀಗ ರೈಲ್ವೆ ಇಲಾಖೆಯು ರೈಲು ಪ್ರಯಾಣಿಕರಿಗೆ ಟಿಕೆಟ್ ರದ್ದತಿಗೆ ಸಂಬಂಧಿಸಿದಂತೆ ಗುಡ್ ನ್ಯೂಸ್ ನೀಡಿದೆ. IRCTC ಈ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಿದೆ. ಇನ್ನುಮುಂದೆ ರೈಲು ಪ್ರಯಾಣಿಕರು ರದ್ದು ಪಡಿಸಿದ ಟಿಕೆಟ್ ಗಳ ಹಣದ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ.

RAC new Ticket Rule
Image Credit: News9live

ರೈಲು ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್
ಐಆರ್‌ಟಿಸಿ (Indian Railway Catering and Tourism Corporation) ವೆಬ್‌ಸೈಟ್ ನಿಂದ ಮೂಲಕ ಬುಕ್ ಮಾಡಲಾದ ಆರ್‌ಎಸಿ (Reservation Against Cancellation) ಟಿಕೆಟ್‌ ಗಳನ್ನು ರದ್ದುಗೊಳಿಸಲು ಕನಿಷ್ಠ ಶುಲ್ಕವನ್ನು ವಿಧಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಇನ್ನು ಮುಂದೆ ಟಿಕೆಟ್ ರದ್ದುಪಡಿಸಿದರೆ ಪ್ರತಿ ಪ್ರಯಾಣಿಕರಿಂದ ಕೇವಲ 60 ರೂ. ಕಡಿತಗೊಳಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಗಿರಿದಿಹ್‌ ನ ಸಾಮಾಜಿಕ ಮತ್ತು ಆರ್‌ಟಿಐ ಕಾರ್ಯಕರ್ತ ಸುನಿಲ್ ಕುಮಾರ್ ಖಂಡೇಲ್‌ ವಾಲ್ ಅವರು ಸಲ್ಲಿಸಿದ ದೂರಿನ ಮೇರೆಗೆ ರೈಲ್ವೆ ಈ ನಿರ್ಧಾರವನ್ನು ಪ್ರಕಟಿಸಿದೆ. ಟಿಕೆಟ್ ರದ್ದುಪಡಿಸುವಾಗ ಅನಿಯಂತ್ರಿತ ಶುಲ್ಕ ವಿಧಿಸಿರುವ ಬಗ್ಗೆ ಖಂಡೇಲ್ವಾಲ್ ಅವರು ಏಪ್ರಿಲ್ 12 ರಂದು ರೈಲ್ವೆ ಆಡಳಿತಕ್ಕೆ ಪತ್ರ ಬರೆದಿದ್ದರು. ಐಆರ್‌ಟಿಸಿ ವೆಬ್‌ಸೈಟ್ ಮೂಲಕ ಕಾಯ್ದಿರಿಸುವ ವೇಟಿಂಗ್ ಟಿಕೆಟ್‌ ಗೆ ಖಾತರಿ ಇಲ್ಲದಿದ್ದರೆ ರೈಲ್ವೆ ಇಲಾಖೆಯೇ ಅದನ್ನು ರದ್ದುಗೊಳಿಸುತ್ತದೆ. ಈ ವೇಳೆ ಅತೀ ದೊಡ್ಡ ಮೊತ್ತದ ಪಾವತಿಯನ್ನು ಕಡಿತಗೊಳಿಸಲಾಗುವುದು ಎಂದು ಸುನೀಲ್ ಕುಮಾರ್ ತಮ್ಮ ಪತ್ರದಲ್ಲಿ ವಿವರಿಸಿದ್ದರು.

RAC Ticket Rules
Image Credit: Thebegusarai

ರೈಲ್ವೆ ಟಿಕೆಟ್ ನಿಯಮದಲ್ಲಿ ಬಹುದೊಡ್ಡ ಬದಲಾವಣೆ
ಪ್ರತಿ ಪ್ರಯಾಣಿಕರಿಗೆ 190 ರೂ. ನೀವು ವೈಟಿಂಗ್ ಟಿಕೆಟ್ ಅನ್ನು ಪಾವತಿಸಿ ಬುಕ್ ಮಾಡಿದ್ದೀರಿ ಎಂದು ಭಾವಿಸೋಣ. ಈ ಟಿಕೆಟ್ ಗ್ಯಾರಂಟಿ ಇಲ್ಲದಿದ್ದರೆ ರೈಲ್ವೇ ಕೇವಲ ರೂ.95 ಮರುಪಾವತಿ ಮಾಡುತ್ತದೆ. ಅಂದರೆ ಸುಮಾರು 100 ರೂ. ಕಡಿತಗೊಳಿಸಲಿದೆ ಎಂದು ಸುನೀಲ್ ಕುಮಾರ್ ವಿವರಿಸಿದರು. ಈ ಹಿನ್ನಲೆಯಲ್ಲಿ ಇದೀಗ ಐಆರ್ ಟಿಸಿ ಈ ಮಹತ್ವದ ಹೆಜ್ಜೆ ಇಟ್ಟಿದೆ.

ಏಪ್ರಿಲ್ 18 ರಂದು ಐಆರ್‌ಟಿಸಿಯ ವ್ಯವಸ್ಥಾಪಕ ನಿರ್ದೇಶಕ ಸುನಿಲ್ ಕುಮಾರ್ ಅವರಿಗೆ ಈ ಹೊಸ ಕ್ರಮದ ಕುರಿತು ತಿಳಿಸಲಾಯಿತು. ರೈಲ್ವೇ ನಿಗದಿಪಡಿಸಿದ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಲು ಐಆರ್‌ಟಿಸಿ ಬದ್ಧವಾಗಿದೆ ಎಂದು ಅವರು ಹೇಳಿದರು. ಭಾರತೀಯ ರೈಲ್ವೆಯ ಸೂಚನೆಗಳ ಪ್ರಕಾರ, ಈಗ ಕಾಯುವ ಟಿಕೆಟ್ ರದ್ದುಗೊಳಿಸಿದಾಗ ಕೇವಲ 60 ರೂ. ಸೇವಾ ಶುಲ್ಕ ವಿಧಿಸಲಾಗುವುದು, ಎಂದು ವಿವರಿಸಿದರು. ಇನ್ನುಮುಂದೆ RAC ಟಿಕೆಟ್ ರದ್ದುಪಡಿಸಿದರೆ ಕೇವಲ 60 ರೂ. ಕಡಿತಗೊಳ್ಳಲಿದೆ.

Join Nadunudi News WhatsApp Group

Indian Railway Latest Update
Image Credit: Informalnewz

Join Nadunudi News WhatsApp Group