Confirmed Ticket: ರೈಲ್ವೆ ಇಲಾಖೆಯ ಬಹುದೊಡ್ಡ ಘೋಷಣೆ, ಇನ್ಮುಂದೆ ಯಾರಿಗೂ ಸಿಗಲಿದೆ ವೈಟಿಂಗ್ ಲಿಸ್ಟ್ ಟಿಕೆಟ್

ಮೋದಿ ಸರ್ಕಾರದಿಂದ ರೈಲ್ವೆ ಟಿಕೆಟ್ ಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆ

Railway Confirmed Ticket: ಸದ್ಯ ಲೋಕಸಭಾ ಚುನಾವಣೆ ನಡೆಯುತ್ತಿರುವ ಕಾರಣ ರಾಜಕೀಯ ಪಕ್ಷಗಳಿಂದ ದೇಶದ ಜನತೆಗಾಗಿ ವಿವಿಧ ಗ್ಯಾರಂಟಿ ಯೋಜನೆಗಳು ಘೋಷಣೆಯಾಗುತ್ತಿದೆ. ಕೇಂದ್ರದ ಮೋದಿ ಸರ್ಕಾರ ಈಗಾಗಲೇ ಸಾಕಷ್ಟು ಘೋಷಣೆ ಹೊರಡಿಸಿದೆ. ದೇಶದ ಜನತೆಗೆ ಅಗತ್ಯವಿರುವ ಸಾಕಷ್ಟು ಯೋಜನೆಗಳ ಘೋಷಣೆಯಾಗಿದೆ ಎನ್ನಬಹುದು. ಸದ್ಯ ದೇಶದ ಜನತೆಗಾಗಿ ಮೋದಿ ಸರ್ಕಾರ ರೈಲ್ವೆ ಟಿಕೆಟ್ ಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಹೊರಡಿಸಿದೆ. ಸರ್ಕಾರ ಈ ಘೋಷಣೆ ರೈಲು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ.

Railway Confirmed Ticket
Image Credit: Zeenews

ಕೇಂದ್ರದ ಮಹತ್ವದ ಘೋಷಣೆ
ಈಗಾಗಲೇ ದೇಶದಲ್ಲಿ ರೈಲ್ವೆ ವ್ಯವಸ್ಥೆಯನ್ನು ಸಾಕಷ್ಟು ಆಧುನಿಕರಣಗೊಳಿಸಲಾಗಿದೆ. ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲಾಗಿದ್ದು, ರೈಲು ಪ್ರಯಾಣಿಕರಿಗೆ ಸಾಕಷ್ಟು ಸೌಲಭ್ಯವನ್ನು ಕೂಡ ನೀಡಲಾಗಿದೆ. ವಂದೇ ಭಾರತ್ ನ ಅತ್ಯಾಧುನಿಕ ರೈಲುಗಳನ್ನು ಕೂಡ ದೇಶದಲ್ಲಿ ಪರಿಚಯಿಸಲಾಗಿದೆ. ರೈಲು ವ್ಯವಸ್ಥೆಯಲ್ಲಿ ಇಷ್ಟೆಲ್ಲ ಸೌಲಭ್ಯಗಳನ್ನು ನೀಡಿರುವುದುದರ ಜೊತೆಗೆ ಇದೀಗ ಹೊಸ ಸೌಲಭ್ಯವನ್ನು ಪರಿಚಯಿಸಲು ಕೇಂದ್ರ ಮುಂದಾಗಿದೆ. ಈ ಕುರಿತು ರೈಲ್ವೆ ಸಚಿವರಾದ ಅಶ್ವಿನ್ ವೈಷ್ಣವ್ ಅವರು ಮಹತ್ವದ ಘೋಷಣೆ ಹೊರಡಿಸಿದ್ದಾರೆ.

ಇನ್ನುಮುಂದೆ ಎಲ್ಲರಿಗು Confirmed Ticket ಲಭ್ಯ
ಮುಂದಿನ 5 ವರ್ಷಗಳಲ್ಲಿ, ದೇಶದ ಪ್ರತಿಯೊಬ್ಬ ಪ್ರಯಾಣಿಕರಿಗೂ Confirmed Tickets ಸಿಗಲಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಗ್ಯಾರಂಟಿ.“ಕಳೆದ 10 ವರ್ಷಗಳಲ್ಲಿ ಭಾರತೀಯ ರೈಲ್ವೆಯನ್ನು ನರೇಂದ್ರ ಮೋದಿಯವರು ಮಾರ್ಪಡಿಸಿದ್ದಾರೆ, ಮುಂದಿನ 5 ವರ್ಷಗಳಲ್ಲಿ ದೇಶದ ರೈಲ್ವೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸುವುದು ನರೇಂದ್ರ ಮೋದಿಯವರ ಗ್ಯಾರಂಟಿ. ದೇಶಾದ್ಯಂತ ರೈಲುಗಳನ್ನು ಹೆಚ್ಚಿಸಲಾಗುವುದು ಮತ್ತು ಪ್ರತಿ ಪ್ರಯಾಣಿಕರಿಗೆ Confirmed Ticket ಒದಗಿಸಲಾಗುವುದು. ಇದು ಪ್ರಯಾಣಿಕರನ್ನು Waiting List ನಿಂದ ಕಾಯುವುದರಿಂದ ಉಳಿಸುತ್ತದೆ. ಪ್ರತಿಯೊಬ್ಬರೂ ಸುಲಭವಾಗಿ ರೈಲು ಟಿಕೆಟ್‌ ಗಳನ್ನು ಪಡೆಯುವುದು ನಮ್ಮ ಆದ್ಯತೆಯಾಗಿದೆ ಎಂದು ಅಶ್ವಿನಿ ವೈಷ್ಣವ್ ಸಂದರ್ಶನದಲ್ಲಿ ತಿಳಿಸಿದ್ದಾರೆ.

Railway Ticket New Update
Image Credit: Herzindagi

“ಮುಂದಿನ ಐದು ವರ್ಷಗಳಲ್ಲಿ, ಭಾರತದ ಆರ್ಥಿಕ ವ್ಯವಸ್ಥೆಯು ಬಲಗೊಳ್ಳಲಿದೆ. ಇದು ದೇಶದಾದ್ಯಂತ ರೈಲ್ವೆ ಪ್ರಯಾಣಿಕರಿಗೆ ಹೊಸ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳನ್ನು ಒದಗಿಸಲು ಸಹಾಯ ಮಾಡುತ್ತದೆ. ಅದೇ ರೀತಿ, ಪ್ರಯಾಣಿಕರಿಗೆ ರೈಲು ಟಿಕೆಟ್‌ ಗಳನ್ನು ಸುಲಭವಾಗಿ ಮತ್ತು ತ್ವರಿತವಾಗಿ ಪಡೆಯುವುದು ಪ್ರಮುಖ ಆದ್ಯತೆಯಾಗಿದೆ. , ಹೆಚ್ಚು ರೈಲುಗಳನ್ನು ಓಡಿಸುವುದು, ದೇಶದಾದ್ಯಂತ ರೈಲನ್ನು ವಿಸ್ತರಿಸುವುದು ಮತ್ತು ರೈಲ್ವೆ ಮಾರ್ಗಗಳನ್ನು ವಿಸ್ತರಿಸುವುದು ಕೇಂದ್ರ ಸರ್ಕಾರದ ಗುರಿಯಾಗಿದೆ ಎಂದು ಸಚಿವರು ಹೇಳಿದ್ದಾರೆ.

Railway Confirmed Ticket For Passengers
Image Credit: Thenewsminute

Join Nadunudi News WhatsApp Group

Join Nadunudi News WhatsApp Group