Railway Job: ಭಾರತೀಯ ರೈಲ್ವೆಯಲ್ಲಿ 1202 ಹುದ್ದೆಗಳಿಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸಲು ಜೂನ್ 12 ಕೊನೆಯ ದಿನ.

ಭಾರತೀಯ ರೈಲ್ವೆಯಲ್ಲಿ 1202 ಹುದ್ದೆಗಳಿಗೆ ಅರ್ಜಿ ಆಹ್ವಾನ

Railway Job Recruitment 2024: ಸದ್ಯ 2024 ರಲ್ಲಿ Indian Railway ಈಗಾಗಲೇ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ. ದೇಶದಲ್ಲಿ ಸಾಕಷ್ಟು ಜನ ನಿರುದ್ಯೋಗಿಗಳು ರೈಲ್ವೆ ಇಲಾಖೆಯಲ್ಲಿ ಉದ್ಯೋಗವನ್ನು ಪಡೆದುಕೊಂಡಿದ್ದಾರೆ. ಇದೀಗ ಭಾರತೀಯ ರೈಲ್ವೆ ಇಲಾಖೆಯು ನೀರುದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದೆ.

ರೈಲ್ವೆ ನೇಮಕಾತಿ ಮಂಡಳಿ ಹೆಚ್ಚಿನ ಖಾಲಿ ಇರುವ ಭರ್ತಿಮಾಡಿದೆ. ನಿರುದ್ಯೋಗಿಗಳು ಈ ಬಾರಿ ರೈಲ್ವೆ ಇಲಾಖೆ ನೀಡುತ್ತಿರುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಹುದ್ದೆಯ ವಿವರ, ಅರ್ಜಿ ಸಲ್ಲಿಕೆ, ವಯೋಮಿತಿ ಸೇರಿದಂತೆ ಹುದ್ದೆಗೆ ಆಯ್ಕೆಯಾದರೆ ಎಷ್ಟು ವೇತನ ಸಿಗಲಿದೆ ಎನ್ನುವ ಬಗ್ಗೆ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ.

indian railway job recruitment 2024
Image Credit: Live Mint

ಭಾರತೀಯ ರೈಲ್ವೆಯಲ್ಲಿ 1202 ಹುದ್ದೆಗಳಿಗೆ ಅರ್ಜಿ ಆಹ್ವಾನ
ಆಗ್ನೇಯ ರೈಲ್ವೆ ನೇಮಕಾತಿ 2024 ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 12 ನಿಗದಿಪಡಿಸಿದೆ. ರೈಲ್ವೆ ವಲಯದಲ್ಲಿ ಅಸಿಸ್ಟೆನ್ ಲೋಕೋ ಪೈಲಟ್ ಮತ್ತು ರೈಲು ವ್ಯವಸ್ಥಾಪಕರ 1202 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆ, ಆಪ್ಟಿಟ್ಯೂಡ್ ಪರೀಕ್ಷೆ, ದಾಖಲೆ ಪರಿಶೀಲನೆ, ವೈದ್ಯಕೀಯ ಪರೀಕ್ಷೆಯ ಮೂಲಕ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಕೋಲ್ಕತ್ತಾ, ಪಶ್ಚಿಮ ಬಂಗಾಳದಲ್ಲಿ ಉದ್ಯೋಗ ಸಿಗಲಿದೆ.

Indian Railway Recruitment Latest News
Image Credit: Navbharatlive

ಅರ್ಜಿ ಸಲ್ಲಿಸಲು ಜೂನ್ 12 ಕೊನೆಯ ದಿನ
ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ ಸೈಟ್ rrcser.co.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಇನ್ನು ಸಹಾಯಕ ಲೋಕೋ ಪೈಲಟ್ 827 ಹುದ್ದೆಗಳು ಹಾಗೂ ರೈಲುಗಳ ನಿರ್ವಾಹಕ 375 ಹುದ್ದೆಗಳು ಒಟ್ಟು 1202 ಪೋಸ್ಟ್‌ ಗಳು ಖಾಲಿ ಇದ್ದು ಅರ್ಜಿ ಸಲ್ಲಿಕೆಗೆ ಅವಕಾಶವಿದೆ. ಮುಖ್ಯವಾಗಿ ಆಗ್ನೇಯ ರೈಲ್ವೆ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಕನಿಷ್ಠ 18 ವರ್ಷ ಮತ್ತು 42 ವರ್ಷ ವಯಸ್ಸಿನವರಾಗಿರಬೇಕು. ಈ ಹುದ್ದೆಯ ಅರ್ಜಿ ಸಲ್ಲಿಕೆಗೆ ಜೂನ್ 12 ಕೊನೆಯ ದಿನಾನಕವಾಗಿದ್ದು, ಇನ್ನು 6 ದಿನದೊಳಗೆ ಅರ್ಜಿ ಸಲ್ಲಿಸಿ ಉದ್ಯೋಗವನ್ನು ಪಡೆದುಕೊಳ್ಳಬಹುದು.

Railway job recruitment 2024
Image Credit: India TV News

Join Nadunudi News WhatsApp Group

Join Nadunudi News WhatsApp Group