Loco Pilot Jobs: ಭಾರತೀಯ ರೈಲ್ವೆಯಲ್ಲಿ ಟ್ರೈನ್ ಡ್ರೈವರ್ ಉದ್ಯೋಗಿಗಳ ಭರ್ಜರಿ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿ.

ಭಾರತೀಯ ರೈಲ್ವೆಯಲ್ಲಿ ಟ್ರೈನ್ ಡ್ರೈವರ್ ಹುದ್ದೆಗೆ ನೇರ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿ

Railway Job Recruitment 2024: ಸದ್ಯ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಉದ್ಯೋಗಕ್ಕೆ ಸಂಬಂಧಿಸಿದಂತೆ ಮಾಹಿತಿಗಳು ಹರಡುತ್ತಿದೆ. ಸಾಕಷ್ಟು ಹುದ್ದೆಗಳು ಖಾಲಿ ಇದ್ದರು ಕೊಡ ಅರ್ಜಿ ಆಹ್ವಾನದ ಬಗ್ಗೆ ಮಾಹಿತಿ ಇಲ್ಲದೆ ಅವಕಾಶವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದರೆ ತಪ್ಪಾಗಲಾರದು.

ಇದೀಗ ರೈಲ್ವೆ ನಿಮ್ಮ ಉದ್ಯೋಗದ ಕನಸನ್ನು ನನಸು ಮಾಡಲಿದೆ. ರೈಲ್ವೆ ಇಲಾಖೆಯಲ್ಲಿ ನೇರ ನೇಮಕಾತಿ ಕರೆಯಲಾಗಿದ್ದು ನಿರುದ್ಯೋಗಿಗಳು ಮತ್ತು ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ. ರೈಲ್ವೆ ಇಲಾಖೆಯ ಹುದ್ದೆಯ ವಿವರ, ಅರ್ಜಿ ಸಲ್ಲಿಕೆಗೆ, ಅರ್ಜಿ ಸಲ್ಲಿಕೆಯ ಅರ್ಹತೆ ಎಲ್ಲ ವಿಷಯಗಳ ಮಾಹಿತಿ ಇಲ್ಲಿದೆ.

Railway Job Recruitment
Image Credit: Aajtak

ಭಾರತೀಯ ರೈಲ್ವೆಯಲ್ಲಿ ಟ್ರೈನ್ ಡ್ರೈವರ್ ಉದ್ಯೋಗಿಗಳ ಭರ್ಜರಿ ನೇಮಕಾತಿ
ಭಾರತೀಯ ರೈಲ್ವೆ ನೇಮಕಾತಿ ಮಂಡಳಿಯು RRB ALP ನೇಮಕಾತಿ 2024 ಗಾಗಿ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಇಲ್ಲಿ 5,696 ಅಸಿಸ್ಟಂಟ್ ಲೋಕೋ ಪೈಲಟ್ ಪೋಸ್ಟ್‌ ಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು RRB ಅಧಿಕೃತ ವೆಬ್‌ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಅಭಿಯಾನದ ಮೂಲಕ ಸಂಸ್ಥೆಯಲ್ಲಿ 5696 ಹುದ್ದೆಗಳಿಗೆ ಅರ್ಹ ಮತ್ತು ಆಯ್ಕೆಯಾದ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 19, 2024 ಆಗಿದೆ.

Indian Railway Job Recruitment 2024
Image Credit: Placementindia

ಅರ್ಜಿ ಸಲ್ಲಿಕೆಗೆ ಯಾರು ಅರ್ಹರು…?
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಫಿಟ್ಟರ್, ಎಲೆಕ್ಟ್ರಿಷಿಯನ್, ಇನ್ಸ್ಟ್ರುಮೆಂಟ್ ಮೆಕ್ಯಾನಿಕ್, ಮಿಲ್ ರೈಟ್ / ಎಲೆಕ್ಟ್ರಿಕಲ್ ಮೆಕ್ಯಾನಿಕ್ ಆಗಿರಬೇಕು. ಮೆಕ್ಯಾನಿಕ್ ಟ್ರೇಡ್ ಗಳಲ್ಲಿ ನಿರ್ವಹಣೆ ಮೆಕ್ಯಾನಿಕ್, NCVT / PGDM SCVT ಮಾನ್ಯತೆ ಪಡೆದ ಸಂಸ್ಥೆಗಳಿಂದ ಮೆಟ್ರಿಕ್ಯುಲೇಷನ್ / ಡಿಪ್ಲೊಮಾ, SSLC ಮತ್ತು ITI ಪ್ರಮಾಣಪತ್ರವನ್ನು ಹೊಂದಿರಬೇಕು. ಇನ್ನು 18 ರಿಂದ 30 ವರ್ಷದ ಒಳಗಿನ ವಯೋಮಿತಿಯವರು ಅರ್ಜಿ ಸಲ್ಲಿಸಬಹುದು.

Join Nadunudi News WhatsApp Group

Join Nadunudi News WhatsApp Group