Rajdoot Bike: ವಿದ್ಯಾರ್ಥಿಗಳಿಗಾಗಿ ಬಂತು 175cc ಬೈಕ್, ಕಡಿಮೆ ಬೆಲೆ ಮತ್ತು ಆಕರ್ಷಕ ಮೈಲೇಜ್.

ವಿದ್ಯಾರ್ಥಿಗಳಿಗಾಗಿ ಬಂತು 175cc ಬೈಕ್, ಕಡಿಮೆ ಬೆಲೆಗೆ

Rajdoot Bike Launch In India: ಸದ್ಯ ಮಾರುಕಟ್ಟೆಯಲ್ಲಿ ಎಣಿಕೆಗೆ ಸಿಗದಷ್ಟು ವಾಹನಗಳಿವೆ. ಮಾರುಕಟ್ಟೆಯಲ್ಲಿ ಅದೆಷ್ಟೋ ಮಾದರಿಯ ಬೈಕ್ ಗಳು ಕೂಡ ಇವೆ. ಇನ್ನು ಬೈಕ್ ನಲ್ಲಿ ಯುವಕರು ಹೆಚ್ಚಾಗಿ ಬುಲೆಟ್ ಬೈಕ್ ಗಳನ್ನೂ ಇಷ್ಟಪಡುತ್ತಾರೆ. ಮಾರುಕಟ್ಟೆಯಲ್ಲಿ ಬುಲೆಟ್ ಬೈಕ್ ಗಳು ಹೆಚ್ಚಿನ ಬೇಡಿಕೆ ಪಡೆದುಕೊಂಡಿವೆ. ಸದ್ಯ ಬುಲೆಟ್ ಬೈಕ್ ಗಳಿಗೆ ಪೈಪೋಟಿ ನೀಡಲು ಮಾರುಕಟ್ಟೆಯಲ್ಲಿ ಹೊಸ ಮಾದರಿಯ ಬೈಕ್ ಲಾಂಚ್ ಆಗಿದೆ.

ಈ ಹಿಂದೆ ಅಂಬಾಸಿಡರ್ ಬುಲೆಟ್ ಭಾರತದಲ್ಲಿ ಬಹಳ ಜನಪ್ರಿಯವಾಗಿತ್ತು. ಇದೀಗ ಮತ್ತೊಮ್ಮೆ ಈ ಬೈಕ್ ಭಾರತದಲ್ಲಿ ಸಂಚಲನ ಮೂಡಿಸುತ್ತಿದೆ. ಹೌದು ಸ್ನೇಹಿತರೇ, ಈ ಬಾರಿ ಹೊಸ ಯುಗದ ಶಕ್ತಿಶಾಲಿ ಎಂಜಿನ್ ಮತ್ತು ವೈಶಿಷ್ಟ್ಯಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಸದ್ದು ಮಾಡಲು ಅಂಬಾಸಿಡರ್ ಸಿದ್ಧವಾಗಿದೆ. ಈ ಹೊಸ ಬೈಕ್ ನ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

Rajdoot Bike Price
Image Credit: News 18

ವಿದ್ಯಾರ್ಥಿಗಳಿಗಾಗಿ ಬಂತು 175cc ಬೈಕ್
ನಾವೀಗ ಅಂಬಾಸಿಡರ್ ಹೆಸರಿನ ಬೈಕ್ ಬೈಕ್ ಬಗ್ಗೆ ಮಾಹಿತಿ ಹೇಳಲಿದ್ದೇವೆ. Rajdoot ಹೆಸರಿನ ಟಾಪ್ ಮಾಡೆಲ್ ಬೈಕ್ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ. ಇದರ ವೈಶಿಷ್ಟ್ಯಗಳು ತುಂಬಾ ಚೆನ್ನಾಗಿದ್ದು ಎಲ್ಲರನ್ನು ಆಕರ್ಷಿಸಲಿದೆ. ಇನ್ನು ಕಂಪನಿಯು ತನ್ನ ರಾಜ್‌ ದೂತ್ ಬೈಕ್‌ ನಲ್ಲಿ ಹೊಸ ಅವತಾರ್ ಮತ್ತು ಹಲವು ಸುಧಾರಿತ ವೈಶಿಷ್ಟ್ಯಗಳನ್ನು ಸೇರಿಸಲಿದೆ ಎಂದು ಹೇಳಾಗುತ್ತಿದೆ.

ರಾಜ್‌ ದೂತ್ ಬೈಕ್ ತನ್ನ ಶಕ್ತಿಶಾಲಿ ಎಂಜಿನ್‌ ನೊಂದಿಗೆ ಗ್ರಾಹಕರಿಗೆ ನೀಡಲಿದೆ. ನೀವು ಬೈಕ್‌ ನಲ್ಲಿ ಬಲವಾದ ಎಂಜಿನ್ ಅನ್ನು ಪಡೆಯುತ್ತೀರಿ. ಕಂಪನಿಯು ಅಂಬಾಸಿಡರ್‌ ನಲ್ಲಿ 175 ಸಿಸಿ 2 ಸ್ಟ್ರೋಕ್ ಎಂಜಿನ್ ಅನ್ನು ಒದಗಿಸಿದೆ. 13 ಲೀಟರ್ ಇಂಧನ ಟ್ಯಾಂಕ್ ಒದಗಿಸಲಾಗಿದ್ದು, ಫುಲ್ ಟ್ಯಾಂಕ್ ಇದ್ದರೆ 700 ಕಿಲೋಮೀಟರ್ ಪ್ರಯಾಣಿಸಬಹುದಾಗಿದೆ. ನಿಮ್ಮ ಸವಾರಿಯ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸಲು ಅನೇಕ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಬೈಕ್‌ ನಲ್ಲಿ ಸವಾರರಿಗೆ ಬಲವಾದ ಬ್ರೇಕಿಂಗ್ ವ್ಯವಸ್ಥೆಯನ್ನು ಒದಗಿಸಲಾಗುವುದು.

Rajdoot Bike Mileage
Image Credit: Team-bhp

ಕಡಿಮೆ ಬೆಲೆ ಮತ್ತು ಆಕರ್ಷಕ ಮೈಲೇಜ್
ಈ ಬಾರಿ ಬೈಕು ಹಿಂಭಾಗ ಮತ್ತು ಮುಂಭಾಗದ ಎರಡೂ ಬದಿಗಳಲ್ಲಿ ಡಿಸ್ಕ್ ಬ್ರೇಕ್ ವ್ಯವಸ್ಥೆಯನ್ನು ಸಹ ಒಳಗೊಂಡಿದೆ. ಇದು ಮುಂಭಾಗ ಮತ್ತು ಹಿಂಭಾಗದಲ್ಲಿ ಆಧುನಿಕ ಸಸ್ಪೆನ್ಷನ್ ಸಿಸ್ಟಮ್ ಜೊತೆಗೆ ಆಂಟಿ-ಲಾಕ್ ಬ್ರೇಕಿಂಗ್ ವ್ಯವಸ್ಥೆಯನ್ನು ಹೊಂದಿರುತ್ತದೆ. ಕಂಪನಿಯು ಅಧಿಕೃತವಾಗಿ ಬೈಕ್‌ ನ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸಿಲ್ಲ.

Join Nadunudi News WhatsApp Group

ಇನ್ನು ಮಾರುಕಟ್ಟೆಯಲ್ಲಿ ನೂತನ ರಾಜ್ ದೂತ್ ಬೈಕ್ ಸರಿಸುಮಾರು 1.70 ಲಕ್ಷದಿಂದ 1.80 ಲಕ್ಷ ಬೆಲೆಯಲ್ಲಿ ಲಾಂಚ್ ಆಗಲಿದೆ ಎಂದು ಅಂದಾಜಿಸಲಾಗಿದೆ. ನೀವು ಈ ಬೈಕ್ ನಲ್ಲಿ ನ್ಯಾವಿಗೇಷನ್, ಡಿಜಿಟಲ್ ಡಿಸ್ಪ್ಲೇ, ಡ್ರೈವ್ ಅನಾಲಿಟಿಕ್ಸ್, ಮೊಬೈಲ್ ಚಾರ್ಜಿಂಗ್, ಸ್ಲಿಪ್ಪರ್ ಕ್ಲಚ್, ಎಲ್ಇಡಿ ಲೈಟ್ಸ್, ಲಾಂಗ್ ಸೀಟ್, ಡಿಸ್ಕ್ ಬ್ರೇಕ್ ಸೇರಿದಂತೆ ಅನೇಕ ವೈಶಿಷ್ಟ್ಯಗಳನ್ನು ನೋಡುತ್ತಿರಿ. ಮಾಧ್ಯಮ ವರದಿಗಳ ಪ್ರಕಾರ, ಈ ಬೈಕ್ ಅನ್ನು 2024 ರ ಅಂತ್ಯದ ವೇಳೆಗೆ ಅಥವಾ 2025 ರ ಆರಂಭದಲ್ಲಿ ಬಿಡುಗಡೆ ಮಾಡಬಹುದು.

Rajdoot Bike Launch In India
Image Credit: Khabarpanel

Join Nadunudi News WhatsApp Group