Ram Mandir: ಉದ್ಘಾಟನೆಯಾದ ಮೊದಲ ದಿನವೇ ರಾಮ ಮಂದಿರಕ್ಕೆ ಬಂದ ದೇಣಿಗೆ ಎಷ್ಟು ಗೊತ್ತಾ…? ಇದು ರಾಮನ ಪವಾಡ

ಉದ್ಘಾಟನೆಗೊಂಡ ಮರುದಿನ ಅಯೋದ್ಯೆಗೆ ಎಷ್ಟು ದೇಣಿಗೆ ಬಂದಿದೆ..?

Ram Mandir Donation Collectionಉತ್ತರ ಪ್ರದೇಶದಲ್ಲಿ ಅಯೋಧ್ಯ ರಾಮ ಮಂದಿರ ಅದ್ದೂರಿಯಾಗಿ ಉದ್ಘಾಟನೆಗೊಂಡಿದೆ. ಶ್ರೀರಾಮನ ದರ್ಶನ ಪಡೆಯಲು ಕೋಟ್ಯಂತರ ಮಂದಿ ಭಕ್ತರು ಕಾಯುತ್ತಿದ್ದಾರೆ. ಜನವರಿ 23 ರಂದು ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ನೆರವೇರಿದೆ. ಪ್ರಸ್ತುತ ಅಯೋದ್ಯೆಯಲ್ಲಿ ಶ್ರೀರಾಮ ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾನೆ. ಜನವರಿ 23 ರಿಂದ ಶ್ರೀ ರಾಮಜನ್ಮಭೂಮಿ ಟ್ರಸ್ಟ್ ಸಾರ್ವಜನಿಕರಿಗೆ ದರ್ಶನವನ್ನು ಕಲ್ಪಿಸಿಕೊಟ್ಟಿದೆ.

Ram Mandir Donation Total Collection
Image Credit: News 9 Live

ಅಯೋದ್ಯೆಗೆ ಬಂದಿರುವ ದೇಣಿಗೆಯ ಕುರಿತು ನಿಮಗೆಷ್ಟು ಗೊತ್ತು
ಜನವರಿ 23 ರಿಂದ ಸಾರ್ವಜನಿಕರು ರಾಮನ ದರ್ಶನವನ್ನು ಪಡೆಯಬಹುದು. ಇನ್ನು ಅಯೋಧ್ಯ ರಾಮ ಮಂದಿರಕ್ಕೆ ಸಾಕಷ್ಟು ಕಡೆಯಿಂದ ದೇಣಿಗೆಯ ರೂಪದಲ್ಲಿ ಕೋಟಿ ಕೋಟಿ ಮೊತ್ತದ ಉಡುಗೊರೆಗಳು ಹರಿದುಬಂದಿವೆ. ಇದೀಗ ಶ್ರೀ ರಾಮಜನ್ಮಭೂಮಿ ಟ್ರಸ್ಟ್ ಅಯೋದ್ಯೆಗೆ ನೀಡಲಾದ ದೇಣಿಗೆಯ ಬಗ್ಗೆ ಮಾಹಿತಿ ನೀಡಿದೆ. ಇದೀಗ ನಾವು ಈ ಲೇಖನದಲ್ಲಿ ಉದ್ಘಾಟನೆಗೊಂಡ ಮರುದಿನ ಅಯೋದ್ಯೆಗೆ ಎಷ್ಟು ದೇಣಿಗೆ ಬಂದಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

ಉದ್ಘಾಟನೆಗೊಂಡ ಮರುದಿನ ಅಯೋದ್ಯೆಗೆ ಎಷ್ಟು ದೇಣಿಗೆ ಬಂದಿದೆ..?
ದೇಶದ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಇದೀಗ ಅಯೋಧ್ಯ ರಾಮ ಮಂದಿರ ಕೂಡ ಸೇರಿಕೊಂಡಿದೆ. ಶ್ರೀ ರಾಮಜನ್ಮಭೂಮಿ ಟ್ರಸ್ಟ್ ನಗದು ಮತ್ತು ಸರಕು ರೂಪದಲ್ಲಿ ದೇಣಿಗೆ ಪಡೆಯುತ್ತಿದೆ. ಅಯೋಧ್ಯ ರಾಮ ಮಂದಿರ ನಿರ್ಮಾಣಕ್ಕೆ ಈಗಾಗಲೇ 5000 ಕೋಟಿಗೂ ಹೆಚ್ಚು ದೇಣಿಗೆ ಬಂದಿದೆ ಎಂದು ಟ್ರಸ್ಟ್ ಹೇಳಿಕೊಂಡಿದೆ.

Ram Mandir Donation Amount
Image Credit: Siasat

ವ್ಯಾಪಾರೋದ್ಯಮಿಗಳು, ರಾಜಕೀಯ ಮುಖಂಡರು, ಸಿನಿಮಾ ತಾರೇರು ಅಯೋದ್ಯೆಗೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ. ಇನ್ನು ದೇಶದ ಶ್ರೀಮಂತ ವ್ಯಕಿಯಾಗಿರುವ ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬದವರು ರಾಮ ಮಂದಿರ ನಿರ್ಮಾಣಕ್ಕೆ ಸುಮಾರು 2 .51 ಕೋಟಿ ಹಣವನ್ನು ದೇಣಿಗೆ ನೀಡಿದ್ದಾರೆ. ರಾಮ ಮಂದಿರ ಉದ್ಘಾಟನೆಯಿಂದ ಸದ್ಯದಲ್ಲಿಯೇ ಸುಮಾರು 1 ಲಕ್ಷ ಕೋಟಿ ರೂಪಾಯಿ ವಹಿವಾಟು ನಡೆಯಲಿದೆ ಎಂದು ಭಾರತೀಯ ವ್ಯಾಪಾರಿಗಳ ಒಕ್ಕೂಟ ಹೇಳಿದೆ.

Join Nadunudi News WhatsApp Group

Join Nadunudi News WhatsApp Group