Ram Mandir Donations: ಒಂದೇ ತಿಂಗಳಲ್ಲಿ ರಾಮ ಮಂದಿರಕ್ಕೆ ಬಂದ ದೇಣಿಗೆ ಹಣ ಎಷ್ಟು ಗೊತ್ತಾ…? ಇದು ಶ್ರೀರಾಮನ ಮಹಿಮೆ

ರಾಮ ಮಂದಿರ ದೇಣಿಗೆಯ ಬಗ್ಗೆ ಮಾಹಿತಿ ನೀಡಿದ ಶ್ರೀ ರಾಮ ಜನ್ಮಭೂಮಿ ತೀರ್ಥ ಟ್ರಸ್ಟ್

Ram Mandir Donations Details: ಸದ್ಯ ದೇಶದ ಪ್ರಸಿದ್ಧ ದೇವಾಲಯಗಳ ಪಟ್ಟಿಯಲ್ಲಿ ಇದೀಗ ಅಯೋಧ್ಯ ರಾಮ ಮಂದಿರ ಕೂಡ ಸೇರಿಕೊಂಡಿದೆ. ಹಿಂದೂಗಳು ಈ ವರ್ಷದಿಂದ ಶ್ರೀರಾಮನ ದರ್ಶನವನ್ನು ಪಡೆಯಬಹುದಾಗಿದೆ. ಜನವರಿ 22 ರಂದು ಅಯೋದ್ಯೆಯಲ್ಲಿ ಶ್ರೀ ಬಾಲ ರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯ ಮುಗಿದಿದೆ. ಪ್ರತಿನಿತ್ಯ ಸಾಕಷ್ಟು ಜನರು ರಾಮನ ದರ್ಶನ ಮಾಡುತ್ತಿದ್ದಾರೆ.

ಜನವರಿ 23 ರಿಂದ ಸಾರ್ವಜನಿಕರು ಶ್ರೀ ರಾಮನ ದರ್ಶನವನ್ನು ಲಕ್ಷಾಂತರ ಸಂಖ್ಯೆಯಲ್ಲಿ ಪಡೆದುಕ್ಕೊಳ್ಳುತ್ತಿದ್ದಾರೆ. ಇನ್ನು ಜನವರಿ 22 ರಿಂದ ಇಂದಿನವರೆಗೆ ಸರಿಸುಮಾರು 60 ಲಕ್ಷಕ್ಕೂ ಅಧಿಕ ಮಂದಿ ಭಕ್ತರು ಶ್ರೀರಾಮನ ದರ್ಶನವನ್ನು ಪಡೆದಿದ್ದಾರೆ ಎನ್ನಬಹುದು. ದಿನ ನಿತ್ಯ ಸರತಿ ಸಾಲಿನಲ್ಲಿ ನಿಂತು ಲಕ್ಷಾಂತರ ಭಕ್ತರು ಶ್ರೀರಾಮನ ದರ್ಶನವನ್ನು ಪಡೆಯುತ್ತಿದ್ದಾರೆ. ಸದ್ಯ ಶ್ರೀ ರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ ಇದೀಗ ರಾಮ ಮಂದಿರ ದೇಣಿಗೆಯ ಬಗ್ಗೆ ಮಾಹಿತಿ ನೀಡಿದೆ.

Ram Mandir New Updates
Image Credit: Oneindia

ಒಂದೇ ತಿಂಗಳಿನಲ್ಲಿ ರಾಮ ಮಂದಿರಕ್ಕೆ ತಲುಪಿದೆ 25 ಕೋಟಿ ದೇಣಿಗೆ
ಅಯೋಧ್ಯೆ ರಾಮನಿಗೆ ಒಂದೇ ತಿಂಗಳಲ್ಲಿ ಒಟ್ಟು 25 ಕೋಟಿ ರೂ. ದೇಣಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕಚೇರಿಯ ಪ್ರಕಾರ, ಈ ಮೊತ್ತವು ರಾಮ ಭಕ್ತರು ನೀಡುವ ಚೆಕ್, ಡ್ರಾಫ್ಟ್ ಮತ್ತು ನಗದು ಒಳಗೊಂಡಿದೆ. ಆದರೆ ಇದು ವಿದೇಶಿ ರಾಮ ಭಕ್ತರು ನೀಡುವ ದೇಣಿಗೆ ಮತ್ತು ರಾಮ ಭಕ್ತರು ನೇರವಾಗಿ ಬ್ಯಾಂಕ್‌ ಗಳ ಮೂಲಕ ನೀಡುವ ದೇಣಿಗೆಯನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಈ ವಿವಿಧ ಮೂಲಗಳಿಂದ ಮೀಸಲಾದ ಒಟ್ಟು ಮೊತ್ತವನ್ನು ಲೆಕ್ಕ ಹಾಕಿದರೆ 25 ಕೋಟಿ ರೂ. ಆಗಿದೆ.

ಚಿನ್ನ, ಬೆಳ್ಳಿ, ಚೆಕ್ ನಗದು ಬಗ್ಗೆ ವಿವರ ಇಲ್ಲಿದೆ
ಆಭರಣಗಳು ಮತ್ತು ರತ್ನಗಳ ಬಗ್ಗೆ ಹೇಳುವುದಾದರೆ, ರಾಮಮಂದಿರ ಟ್ರಸ್ಟ್ ಚಿನ್ನ ಮತ್ತು ಬೆಳ್ಳಿ ಆಭರಣಗಳು, ಪಾತ್ರೆಗಳು ಮತ್ತು ವಸ್ತುಗಳನ್ನು ಸ್ವೀಕರಿಸುತ್ತಿದೆ. ಚಿನ್ನ ಮತ್ತು ಬೆಳ್ಳಿಯಿಂದ ಮಾಡಿದ ಕಿರೀಟ, ಮಾಲೆ, ಛತ್ರಿ, ರಥ, ಬಳೆಗಳು, ಆಟಿಕೆಗಳು, ಕಾಲುಂಗುರಗಳು, ದೀಪ ಮತ್ತು ಧೂಪ ಸ್ಟ್ಯಾಂಡ್, ಬಿಲ್ಲು ಮತ್ತು ಬಾಣಗಳು, ವಿವಿಧ ರೀತಿಯ ಪಾತ್ರೆಗಳು ಸೇರಿದಂತೆ ಬಹಳಷ್ಟು ವಸ್ತುಗಳನ್ನು ಒಳಗೊಂಡಿದೆ. ಇನ್ನು ಬೆಳ್ಳಿಯ ಕಾಣಿಕೆಯ ಬಗ್ಗೆ ಹೇಳುವುದಾದರೆ, ರಾಮ ಭಕ್ತರು ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಮೂಲಕ ಇದುವರೆಗೆ 25 ಕೆ.ಜಿ.ಗೂ ಹೆಚ್ಚು ಬೆಳ್ಳಿಯನ್ನು ನೀಡಿದ್ದಾರೆ.

Ram Mandir Donations Details
Image Credit: TV9 Hindi

ಹಾಗೆಯೆ ಕಿರೀಟಗಳು ಸೇರಿದಂತೆ ಸಮರ್ಪಿಸಲಾದ ಒಟ್ಟು ಚಿನ್ನದ ತೂಕ ಸುಮಾರು 10 ಕೆ.ಜಿ. ಆಗಿದೆ. ಇನ್ನು ಚಿನ್ನದ ಬಗ್ಗೆ ನಿಖರ ಮಾಹಿತಿ ಇಲ್ಲವಾದರೂ ಟ್ರಸ್ಟ್ ನ ಮೂಲಗಳಿಂದ ಈ ಮಾಹಿತಿ ಲಭಿಸಿದೆ. ಮುಂದಿನ ದಿನಗಲ್ಲಿ ಅಯೋಧ್ಯಾ ರಾಮ ಮಂದಿರಕ್ಕೆ ಇನ್ನಷ್ಟು ಚಿನ್ನ ಮತ್ತು ಬೆಳ್ಳಿಗೆ ಕಾಣಿಕೆಯ ರೂಪದಲ್ಲಿ ಬರಲಿದೆ ಎಂದು ಹೇಳಬಹುದು. ಇನ್ನು ರಾಮ ನವಮಿಯ ಸಮಯದಲ್ಲಿ ದೇಣಿಗೆ ಇನ್ನಷ್ಟು ಹೆಚ್ಚು ಬರಲಿದೆ ಎಂದು ಟ್ರಸ್ಟ್ ನಿರೀಕ್ಷಿಸಿದೆ. ಈ ಹಿನ್ನಲೆ ಹೆಚ್ಚಿನ ನಗದು ಮತ್ತು ಕಾಣಿಕೆಯನ್ನು ನಿಯಂತ್ರಿಸಲು State Bank Of India ರಾಮ ಜನ್ಮಭೂಮಿಯಲ್ಲಿ ನಾಲ್ಕು ಸ್ವಯಂ ಚಾಲಿತ ಹೈಟೆಕ್ ಯಂತ್ರಗಳನ್ನು ಸ್ಥಾಪಿಸಿದೆ.

Join Nadunudi News WhatsApp Group

Join Nadunudi News WhatsApp Group