Rama Mandir News: ಒಂದೇ ತಿಂಗಳಲ್ಲಿ ಅಯೋಧ್ಯಾ ರಾಮನಿಗೆ ಎಷ್ಟು KG ಚಿನ್ನ ಮತ್ತು ಎಷ್ಟು ಬೆಳ್ಳಿ ಕಾಣಿಕೆ ಬಂದಿದೆ ಗೊತ್ತಾ…? ನಿಜಕ್ಕೂ ಗ್ರೇಟ್.

ಒಂದೇ ತಿಂಗಳಲ್ಲಿ ಅಯೋಧ್ಯಾ ರಾಮನಿಗೆ ಹರಿದುಬಂತು ಕೆಜಿ ಕೆಜಿ ಚಿನ್ನ ಮತ್ತು ಬೆಳ್ಳಿ

Rama Mandir Gold And Silver: ಹಿಂದೂಗಳ ಹಲವು ವರ್ಷದ ಕನಸು 2024 ರ ಜನವರಿ 22 ರಂದು ನೆರವೇರಿದೆ. ಜನವರಿ 22 ರಂದು ಭಗವಾನ್ ಶ್ರೀ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆಯಾಗಿದೆ. ಅಂದಿನಿಂದ ಇಲ್ಲಿಯವರೆಗೂ ಲಕ್ಷಾಂತರ ಭಕ್ತರು ದೇವರ ದರ್ಶನವನ್ನು ಪಡೆಯುತ್ತಿದ್ದಾರೆ. ಇನ್ನು ಜನವರಿ 22 ರಂದು ಅಯೋಧ್ಯ ರಾಮ ಮಂದಿರಕ್ಕೆ ಆಹ್ವಾನಿತರು ಮಾತ್ರ ಭೇಟಿ ನೀಡಿದ್ದು, ರಾಮನ ದರ್ಶನ ಪಡೆದಿದ್ದರು.

ಜನವರಿ 23 ರಿಂದ ಸಾರ್ವಜನಿಕರಿಗೆ ಶ್ರೀರಾಮನ್ ದರ್ಶನ ಭಾಗ್ಯವನ್ನು ಕಲ್ಪಿಸಿಕೊಡಲಾಗಿತ್ತು. ಜನವರಿ 23 ರಿಂದ ರಾಮನ ದರ್ಶನಕ್ಕೆ ಜನರ ದಂಡೇ ಹರಿದುಬಂದಿತ್ತು. ಒಂದೇ ದಿನದಲ್ಲಿ ಅತಿ ಹೆಚ್ಚು ದರ್ಶನ ಪಡೆದ ದೇವಾಲಯದ ಪಟ್ಟಿಯಲ್ಲಿ ಸೇರಿಕೊಂಡಿದೆ. ಸದ್ಯ ಒಂದೇ ತಿಂಗಳಲ್ಲಿ ಅಯೋಧ್ಯಾ ರಾಮನಿಗೆ ಬಂದಂತಹ ಕಾಣಿಕೆಯ ಬಗ್ಗೆ ಮಾಹಿತಿ ಲಭಿಸಿದೆ. 

Rama Mandir Gold And Silver
Image Credit: Jansatta

ಒಂದೇ ತಿಂಗಳಲ್ಲಿ ಅಯೋಧ್ಯಾ ರಾಮನಿಗೆ ಎಷ್ಟು KG ಚಿನ್ನ ಮತ್ತು ಎಷ್ಟು ಬೆಳ್ಳಿ ಕಾಣಿಕೆ ಬಂದಿದೆ ಗೊತ್ತಾ…?
ಅಯೋಧ್ಯೆ ರಾಮನಿಗೆ ಒಂದೇ ತಿಂಗಳಲ್ಲಿ ಒಟ್ಟು 25 ಕೋಟಿ ರೂ. ದೇಣಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕಚೇರಿಯ ಪ್ರಕಾರ, ಈ ಮೊತ್ತವು ರಾಮ ಭಕ್ತರು ನೀಡುವ ಚೆಕ್, ಡ್ರಾಫ್ಟ್ ಮತ್ತು ನಗದು ಒಳಗೊಂಡಿದೆ. ಆದರೆ ಇದು ವಿದೇಶಿ ರಾಮ ಭಕ್ತರು ನೀಡುವ ದೇಣಿಗೆ ಮತ್ತು ರಾಮ ಭಕ್ತರು ನೇರವಾಗಿ ಬ್ಯಾಂಕ್‌ ಗಳ ಮೂಲಕ ನೀಡುವ ದೇಣಿಗೆಯನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಈ ವಿವಿಧ ಮೂಲಗಳಿಂದ ಮೀಸಲಾದ ಒಟ್ಟು ಮೊತ್ತವನ್ನು ಲೆಕ್ಕ ಹಾಕಿದರೆ 25 ಕೋಟಿ ರೂ. ಆಗಿದೆ.

ಆಭರಣಗಳು ಮತ್ತು ರತ್ನಗಳ ಬಗ್ಗೆ ಹೇಳುವುದಾದರೆ, ರಾಮಮಂದಿರ ಟ್ರಸ್ಟ್ ಚಿನ್ನ ಮತ್ತು ಬೆಳ್ಳಿ ಆಭರಣಗಳು, ಪಾತ್ರೆಗಳು ಮತ್ತು ವಸ್ತುಗಳನ್ನು ಸ್ವೀಕರಿಸುತ್ತಿದೆ. ಚಿನ್ನ ಮತ್ತು ಬೆಳ್ಳಿಯಿಂದ ಮಾಡಿದ ಕಿರೀಟ, ಮಾಲೆ, ಛತ್ರಿ, ರಥ, ಬಳೆಗಳು, ಆಟಿಕೆಗಳು, ಕಾಲುಂಗುರಗಳು, ದೀಪ ಮತ್ತು ಧೂಪ ಸ್ಟ್ಯಾಂಡ್, ಬಿಲ್ಲು ಮತ್ತು ಬಾಣಗಳು, ವಿವಿಧ ರೀತಿಯ ಪಾತ್ರೆಗಳು ಸೇರಿದಂತೆ ಬಹಳಷ್ಟು ವಸ್ತುಗಳನ್ನು ಒಳಗೊಂಡಿದೆ.

Rama Mandir Latest News Update
Image Credit: India Tv News

ಇನ್ನು ಬೆಳ್ಳಿಯ ಕಾಣಿಕೆಯ ಬಗ್ಗೆ ಹೇಳುವುದಾದರೆ, ರಾಮ ಭಕ್ತರು ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಮೂಲಕ ಇದುವರೆಗೆ 25 ಕೆ.ಜಿ.ಗೂ ಹೆಚ್ಚು ಬೆಳ್ಳಿಯನ್ನು ನೀಡಿದ್ದಾರೆ. ಹಾಗೆಯೆ ಕಿರೀಟಗಳು ಸೇರಿದಂತೆ ಸಮರ್ಪಿಸಲಾದ ಒಟ್ಟು ಚಿನ್ನದ ತೂಕ ಸುಮಾರು 10 ಕೆ.ಜಿ. ಆಗಿದೆ. ಇನ್ನು ಚಿನ್ನದ ಬಗ್ಗೆ ನಿಖರ ಮಾಹಿತಿ ಇಲ್ಲವಾದರೂ ಟ್ರಸ್ಟ್ ನ ಮೂಲಗಳಿಂದ ಈ ಮಾಹಿತಿ ಲಭಿಸಿದೆ. ಮುಂದಿನ ದಿನಗಲ್ಲಿ ಅಯೋಧ್ಯಾ ರಾಮ ಮಂದಿರಕ್ಕೆ ಇನ್ನಷ್ಟು ಚಿನ್ನ ಮತ್ತು ಬೆಳ್ಳಿಗೆ ಕಾಣಿಕೆಯ ರೂಪದಲ್ಲಿ ಬರಲಿದೆ ಎಂದು ಹೇಳಬಹುದು.

Join Nadunudi News WhatsApp Group

Join Nadunudi News WhatsApp Group