Rashmika Mandanna: ಪ್ರಧಾನಿ ಮೋದಿಯನ್ನು ಹೊಗಳಿದ ರಶ್ಮಿಕಾ, ಅಷ್ಟಕ್ಕೂ ಪ್ರಧಾನಿ ಬಗ್ಗೆ ರಶ್ಮಿಕಾ ಹೇಳಿದ್ದೇನು

ಪ್ರಧಾನಿ ಮೋದಿ ಅವರನ್ನು ಹೊಗಳಿದ ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ

Rashmika Mandanna About Modi: ದೇಶದಲ್ಲಿ ಪ್ರಧಾನಿ ಮೋದಿ ಅವರು ಕಳೆದ 10 ವರ್ಷಗಳಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ. ದೇಶದ ಜನತೆಗಾಗಿ ವಿವಿಧ ಸೌಕರ್ಯಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಸದ್ಯ ಲೋಕಸಭಾ ಚುನಾವಣೆ ನಡೆಯುತ್ತಿರುವ ಕಾರಣ ಸಾಕಷ್ಟು ಜನರು ಮತ್ತೆ ದೇಶಕ್ಕೆ ಪ್ರಧಾನಿ ಆಗಬೇಕು ಎನ್ನುತ್ತಿದ್ದಾರೆ. ದೇಶಕಾಗಿ 10 ವರ್ಷಗಳ ಕಾಲ ಮೋದಿ ಅವರು ಅದ್ಬುತ ಸೇವೆಯನ್ನು ನೀಡಿದ್ದಾರೆ. ಸದ್ಯ ಚಿತ್ರರಂಗದ ಸ್ಟಾರ್ ನಟಿಯಾದ Rashmika Mandanna ಪ್ರಧಾನಿ ಮೋದಿ ಅವರ ಅಭಿವೃದ್ಧಿ ಕೆಲಸಗಳನ್ನು ಹೊಗಳಿದ್ದಾರೆ.

Rashmika Mandanna About Modi
Image Credit: Oneindia

ಪ್ರಧಾನಿ ಮೋದಿ ಅವರನ್ನು ಹೊಗಳಿದ ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ
ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ಅಟಲ್ ಬಿಹಾರಿ ವಾಜಪೇಯಿ ಸೇವಾರಿ-ನವ ಶೇವಾ ಅಟಲ್ ಸೇತು ಕುರಿತು ನಟಿ ರಶ್ಮಿಕಾ ಮಂದಣ್ಣ ಮಾತನಾಡಿದ್ದಾರೆ. ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ, ಇದು ಮುಂಬೈನ ಸಾರಿಗೆ ಜಾಲಕ್ಕೆ ಗೇಮ್ ಚೇಂಜರ್ ಆಗಿದೆ ಎಂದು ಹೇಳಿದರು. ಪ್ರಧಾನಿಯನ್ನು ಹೊಗಳಿದ ಅವರು ‘ಭಾರತ ಎಲ್ಲೂ ನಿಲ್ಲುವುದಿಲ್ಲ’ ಎಂದರು.

ಅಟಲ್ ಸೇತು ಬಗ್ಗೆ ಮಾತನಾಡಿದ ರಶ್ಮಿಕಾ, “ಎರಡು ಗಂಟೆಗಳ ಪ್ರಯಾಣವನ್ನು 20 ನಿಮಿಷಗಳಲ್ಲಿ ಮಾಡಬಹುದು, ಇದು ನನಗೆ ಹೆಮ್ಮೆ ತಂದಿದೆ ಎಂದು ನಟಿ ರಶ್ಮಿಕಾ ಮಂದಣ್ಣ ತಮ್ಮ ಅಭಿಪ್ರಾಯ ಹೇಳಿಕೊಂಡಿದ್ದಾರೆ. ಇದು ಆಗುವುದಿಲ್ಲ ಎಂದು ಬಹಳಷ್ಟು ಜನರು ಭಾವಿಸಿದ್ದರು. ಆದರೆ ಈಗ ಸಾಧ್ಯವಾಗಿದೆ. ಆಜ್ ನವಿ ಮುಂಬೈ ಸೆ ಮುಂಬೈ ತಕ್, ಗೋವಾ ಸೆ ಮುಂಬೈ ತಕ್ ಮತ್ತು ಬೆಂಗಳೂರು ಸೆ ಮುಂಬೈ ತಕ್ (ಹೊಸ ಮುಂಬೈನಿಂದ ಮುಂಬೈ ಮತ್ತು ಗೋವಾದಿಂದ ಮುಂಬೈ ಮತ್ತು ಬೆಂಗಳೂರಿನಿಂದ ಮುಂಬೈ) ಪ್ರಯಾಣ ಈಗ ಸುಲಭವಾಗಿದೆ. ಇಂತಹ ಮೂಲಸೌಕರ್ಯ ನಮಗೆ ಹೆಮ್ಮೆ ತಂದಿದೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

“ಈಗ ಭಾರತವು ನಾನ್ ಸ್ಟಾಪ್, ಇದು ಎಲ್ಲಿಯೂ ನಿಲ್ಲುವುದಿಲ್ಲ. ಈಗ ದೇಶದ ಪ್ರಗತಿ ಮತ್ತು ಬೆಳವಣಿಗೆಯನ್ನು ನೋಡಿ. ಕಳೆದ ಹತ್ತು ವರ್ಷಗಳಲ್ಲಿ ಭಾರತ ಬೆಳೆದ ಮಾರ್ಗ ಅದ್ಭುತವಾಗಿದೆ. ಮೂಲಸೌಕರ್ಯ ಅಭಿವೃದ್ಧಿ, ದೇಶದಲ್ಲಿ ವಿವಿಧ ಯೋಜನೆಗಳು, ರಸ್ತೆ ಯೋಜನೆ ಈ ಏಳು ವರ್ಷಗಳಲ್ಲಿ ಈ ರಸ್ತೆಯ ಅಭಿವೃದ್ಧಿಯು ಅತ್ಯಂತ ಅದ್ಭುತವಾಗಿದೆ, ಭಾರತ ಅತ್ಯಂತ ಬುದ್ದಿವಂತ ದೇಶ ಎಂದು ಹೇಳಲು ಹೆಮೆಯಾಗುತ್ತಿದೆ”ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

Rashmika Mandanna Latest News
Image Credit: Filmibeat

Join Nadunudi News WhatsApp Group

Join Nadunudi News WhatsApp Group