Rashmika Mandanna Trolls: ಹಾಡುಗಳ ವಿಷಯವಾಗಿ ಸಾಮಾಜಿಕ ಜಾಲತಾಣದಲ್ಲಿ ಟ್ರೊಲ್ ಆದ ರಶ್ಮಿಕಾ.

Rashmika Mandanna Trolls: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (National Crush Rashmika Mandanna) ಸದಾ ಸುದ್ದಿಯಲ್ಲಿರುತ್ತಾರೆ.

ಇನ್ನು ಬಾಲಿವುಡ್ (Bollywood), ಕಾಲಿವುಡ್ (Kollywood), ಟಾಲಿವುಡ್ (Tollywood) ನಲ್ಲಿ ರಶ್ಮಿಕಾ ಫುಲ್ ಬ್ಯುಸಿ ಆಗಿದ್ದಾರೆ. ಸಾಲು ಸಾಲು ಚಿತ್ರಗಳ ಚಿತ್ರೀಕರಣದಲ್ಲಿ ಮುಳುಗಿದ್ದಾರೆ. ಇದೀಗ ರಶ್ಮಿಕಾ ಮಂದಣ್ಣ ಹೊಸ ವಿಷಯದಲ್ಲಿ ಸುದ್ದಿಯಲ್ಲಿದ್ದಾರೆ.

Rashmika was trolled on social media for the songs.
Image Source: India Today

ಸದಾ ಟ್ರೋಲ್ ಆಗುತ್ತಿರುವ ರಶ್ಮಿಕಾ
ನಟಿ ರಶ್ಮಿಕಾ ಮಂದಣ್ಣ (Rashmika Mandanna) ಬಾಲಿವುಡ್ ಸಿನಿಮಾ ಅಂಗಳಕ್ಕೆ ಬಂದಿದ್ದಾರೆ. ಬಾಲಿವುಡ್ ನಟ ಸಿದ್ದಾರ್ಥ ಮಲ್ಹೋತ್ರ ಜೊತೆ ರಶ್ಮಿಕಾ ಮಂದಣ್ಣ ನಟಿಸಿರುವ ಸಿನಿಮಾ ಮಿಷನ್ ಮಜ್ನು ಇದು ರಶ್ಮಿಕಾ ನಟಿಸಿದ ಮೊದಲ ಬಾಲಿವುಡ್ ಸಿನಿಮಾ. ಆದರೆ ಎರಡನೇ ಸಿನಿಮಾ ಆಗಿ ರಿಲೀಸ್ ಆಗುತ್ತಿದೆ.

ಜನವರಿ 19 , 2023 ರಲ್ಲಿ ಈ ಸಿನಿಮಾ ನೆಟ್ ಫ್ಲಿಕ್ಸ್ ನಲ್ಲಿ ನೇರವಾಗಿ ರಿಲೀಸ್ ಆಗುತ್ತಿದೆ. ಇದೆ ಸಿನಿಮಾ ಹಾಡುಗಳನ್ನು ರಿಲೀಸ್ ಮಾಡುವ ವೇಳೆ ರಶ್ಮಿಕಾ ಮಂದಣ್ಣ ತಮ್ಮ ಮೇಲೆ ಬಾಲಿವುಡ್ ಹಾಡುಗಳು ಹೇಗೆ ಪ್ರಭಾವ ಬೀರಿವೆ ಎಂಬುದನ್ನು ಹೇಳಿದ್ದರು. ಅದೇ ಈಗ ರಶ್ಮಿಕಾ ಉಲ್ಟಾ ಹೊಡೆದಿದೆ. ರಶ್ಮಿಕಾ ಪ್ರತಿನಿತ್ಯ ಯಾವುದಾದರು ಒಂದು ವಿಚಾರದಲ್ಲಾದರೂ ಟ್ರೋಲ್ ಆಗುತ್ತಾ ಇರುತ್ತಾರೆ.

Rashmika was trolled on social media for the songs.
Image Source: India Today

ಬಾಲಿವುಡ್ ಸಿನಿಮಾ ಸಾಂಗ್ ಬಗ್ಗೆ ರಶ್ಮಿಕಾ ಮಾತು
ಬಾಲಿವುಡ್ ಸಿನಿಮಾ ಮಿಷನ್ ಮಜ್ನು ಸಾಂಗ್ ಬಿಡುಗಡೆ ಕಾರ್ಯಕ್ರಮದಲ್ಲಿ ರಶ್ಮಿಕಾ ಬಾಲಿವುಡ್ ಹಾಡುಗಳ ಬಗ್ಗೆ ಮಾತನಾಡಿದ್ದರು. ಬಾಲಿವುಡ್ ಹಾಡುಗಳು ಪ್ರಭಾವ ಅನ್ನೋದನ್ನು ವಿವರಿಸಿದ್ದರು.

Join Nadunudi News WhatsApp Group

 

ಈ ವೇಳೆ ಬಾಲಿವುಡ್ ಹಾಡುಗಳು ತುಂಬಾನೇ ರೊಮ್ಯಾಂಟಿಕ್ ಆಗಿರುತ್ತದೆ. ಅದೇ ದಕ್ಷಿಣ ಭಾರತದ ಸಿನಿಮಾ ಹಾಡುಗಳು ಮಾಸ್ ಹಾಗು ಐಟಂ ಸಾಂಗ್ ಗಳಾಗಿರುತ್ತದೆ ಎಂದು ಹೇಳಿದ್ದಾರೆ. ರಶ್ಮಿಕಾ ಅವರ ಈ ಮಾತುಗಳು ದಕ್ಷಿಣ ಭಾರತದ ಸಿನಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ. ನಟಿ ರಶ್ಮಿಕಾ ಮಂದಣ್ಣನ ಈ ಹೇಳಿಕೆ ವೈರಲ್ ಆಗುತ್ತಿದೆ. ಇದೀಗ ರಶ್ಮಿಕಾ ಮಂದಣ್ಣ ಮತ್ತಷ್ಟು ಟ್ರೋಲ್ ಗೆ ಒಳಗಾಗಿದ್ದಾರೆ.

Rashmika was trolled on social media for the songs.
Image Source: Times Of India

Join Nadunudi News WhatsApp Group