Ration Card Apply: ಹೊಸ BPL ಮತ್ತು APL ಕಾರ್ಡ್ ಮಾಡಿಸುವವರಿಗೆ ಮತ್ತೊಂದು ಅವಕಾಶ, ಮಿಸ್ ಮಾಡಿದರೆ ಮತ್ತೆ ಸಿಗಲ್ಲ.

BPL Card ನಿರೀಕ್ಷೆಯಲ್ಲಿದ್ದವರಿಗೆ ಆಹಾರ ಇಲಾಖೆ ಸಿಹಿ ಸುದ್ದಿ ನೀಡಿದೆ.

APL And BPL Ration Card Application: Gruha Lakshmi ಹಾಗೂ Anna Bhagya ಯೋಜನೆಗಳು ಅನುಷ್ಠಾನಗೊಂಡಿದ್ದರು ಕೂಡ ಈ ಯೋಜನೆಗಳ ಲಾಭ ಸಂಪೂರ್ಣವಾಗಿ ಅರ್ಹರಿಗೆ ತಲುಪುತ್ತಿಲ್ಲ. ಯೋಜನೆಗಳ ಸಮಸ್ಯೆ ಬಗೆಹರಿಸುವುದು ಸರ್ಕಾರಕ್ಕೆ ಬಹುದೊಡ್ಡ ಚಿಂತೆಯಾಗಿದೆ.

ಇನ್ನು ಯೋಜನೆಗಳಲ್ಲಿ ಉಂಟಾಗುವ ತಾಂತ್ರಿಕ ದೋಷ ನಿವಾರಣೆಗೆ ಸರ್ಕಾರ ಹೆಚ್ಚಿನ ಕ್ರಮ ಕೈಗೊಳ್ಳುತ್ತಿದೆ. ಈಗಲೂ ಕೂಡ ಸರ್ಕಾರ ಯೋಜನೆಗೆ ಸಂಬಂಧಿಸಿದಂತೆ ವಿವಿಧ ಕ್ರಮ ಕೈಗೊಳ್ಳುತ್ತಿದೆ. ಸದ್ಯ ಗ್ಯಾರಂಟಿ ಯೋಜನಗಳ ಹಣ ಖಾತೆಗೆ ಜಮಾ ಆಗದವರಿಗೆ ಸರ್ಕಾರದಿಂದ ಗುಡ್ ನ್ಯೂಸ್ ಹೊರಬಿದ್ದಿದೆ.

BPL Ration Card Latest Updates
Image Credit: Original Source

ಹೊಸ ರೇಷನ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್
ಸದ್ಯ ರಾಜ್ಯದಲ್ಲಿ Gruha Lakshmi ಹಾಗೂ Anna Bhagya ಯೋಜನೆಗಳಿಗೆ Ration Card ಮುಖ್ಯ ಪುರಾವೆಯಾಗಿದೆ. ಇನ್ನು Ration Card ನಲ್ಲಿ ಸರಿಯಾದ ಮಾಹಿತಿ ಇಲ್ಲದೆ ಇದ್ದಾರೆ ಅಥವಾ BPL ರೇಷನ್ ಕಾರ್ಡ್ ಹೊಂದಿಲ್ಲದ ಕಾರಣ ಸಾಕಷ್ಟು ಅರ್ಹ ಫಲಾನುಭವಿಗಳು Gruha Lakshmi ಹಾಗೂ Anna Bhagya ಯೋಜನೆಗಳಿಂದ ವಂಚಿತರಾಗಿದ್ದಾರೆ.

ಈ ಕಾರಣಕ್ಕೆ ಸರ್ಕಾರ Ration Card ತಿದ್ದುಪಡಿ ಮತ್ತು ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಅವಕಾಶ ನಿದಿತ್ತು. ಇದೀಗ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಸಂಬಂಧಿಸಿದಂತೆ ಆಹಾರ ಇಲಾಖೆ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. BPL Card ನಿರೀಕ್ಷೆಯಲ್ಲಿದ್ದವರಿಗೆ ಆಹಾರ ಇಲಾಖೆ ಸಿಹಿಸುದ್ದಿ ನೀಡಿದೆ.

Ration Card Apply
Image Credit: Businessleague

ನಾಳೆ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಅವಕಾಶ
ಸದ್ಯ ಆಹಾರ ಇಲಾಖೆ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವವರಿಗೆ ಸಿಹಿ ಸುದ್ದಿ ನೀಡಿದೆ. ಹೊಸತಾಗಿ BPL ಅಥವಾ APL ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೆಂದು ಕಾಯುತ್ತಿರುವವರಿಗೆ ಈ ಸುದ್ದಿ ಖುಷಿ ನೀಡಬಹುದು. ಹೌದು, ಸರ್ಕಾರ December 3 ರಂದು ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದೆ. ರಾಜ್ಯದಾದ್ಯಂತ ನಾಳೆ ಜನರು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು. ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅರ್ಜಿ ಸಲ್ಲಿಕೆಗೆ ಸಮಯಾವಕಾಶವಿದೆ. ಕರ್ನಾಟಕ ಒನ್, ಗ್ರಾಮ ಒನ್, ಹಾಗೂ ಬೆಂಗಳೂರು ಒನ್, ಸೇವಾ ಕೇಂದ್ರಗಳಲ್ಲಿ ತೆರಳಿ ಅರ್ಜಿ ಸಲ್ಲಿಸಬಹುದು.

Join Nadunudi News WhatsApp Group

Join Nadunudi News WhatsApp Group