Ration Card: ಕಾಂಗ್ರೆಸ್ ಸರ್ಕಾರದ ಮಹತ್ವದ ನಿರ್ಧಾರ, ಇಂತವರ ರೇಷನ್ ಕಾರ್ಡ್ ರದ್ದು ಮಾಡಲು ಆದೇಶ.

ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಂಡ ಸರ್ಕಾರ, ಇಂತವರ ರೇಷನ್ ಕಾರ್ಡ್ ರದ್ದುಗೊಳಿಸಲು ಆದೇಶ.

Ration Card Cancellation Rules Karnataka: ಜನಸಾಮಾನ್ಯರಿಗೆ ನೆರವಾಗಲು ಉಚಿತ ಪಡಿತರನ್ನು ನೀಡಲಾಗುತ್ತಿದೆ. ಆದರೆ ಕೆಲವು ಈ ಉಚಿತ ಪಡಿತರ ವಿತರಣೆಯ ಸೌಲಭ್ಯವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಪಡಿತರ ಚೀಟಿಯನ್ನು(Ration Card) ಬಳಸಿಕೊಂಡು ವಂಚಕರು ಅನೇಕ ರೀತಿಯ ದುಷ್ಕ್ರತ್ಯಗಳ್ನು ಮಾಡುತ್ತಿದ್ದಾರೆ.

ಇನ್ನು ಈ ರೀತಿಯ ವಂಚನೆಗಳನ್ನು ತಡೆಯಲು ಸರ್ಕಾರ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿವೆ. ರಾಜ್ಯದಲ್ಲಿ ಇದೀಗ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಸಿದ್ದರಾಮಯ್ಯ ಅವರು ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿ ಸಾಕಷ್ಟು ನಿಯಮಗಳನ್ನು ಜಾರಿಗೊಳಿಸಿದ್ದಾರೆ.

More than 33 thousand ration cards have been cancelled
Image Credit: informalnewz

ಇನ್ನು ರಾಜ್ಯದಲ್ಲಿ ಹೊಸ ಸರ್ಕಾರ ಬರುತ್ತಿದ್ದಂತೆ ಹಿಂದಿನ ಅನೇಕ ನಿಯಮಗಳು ಬದಲಾಗಿವೆ. ಇದೀಗ ಸರ್ಕಾರ ರೇಷನ್ ಕಾರ್ಡ್ ಸಂಬಂಧಿಸಿದಂತೆ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಇಂತವರ ರೇಷನ್ ಕಾರ್ಡ್ ರದ್ದು ಗೊಳಿಸಲು ಸರಕಾರ ಚಿಂತನೆ ನಡೆಸಿದೆ.

ಇಂತವರ ರೇಷನ್ ಕಾರ್ಡ್ ರದ್ದಾಗಲಿದೆ
ಇದೀಗ ಆಹಾರ ಇಲಾಖೆ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಸುಳ್ಳು ಮಾಹಿತಿ ನೀಡಿ ಪಡಿತರ ಚೀಟಿ ಪಡೆಯುವವರಿಗೆ ಇಲಾಖೆ ಶಾಕ್ ನೀಡುತ್ತಿದೆ. ಬಡ ಜನತೆಗಾಗಿ ಈ ಉಚಿತ ಪಡಿತರ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಆದರೆ ಆರ್ಥಿಕ ಸಬಲರು ಕೂಡ ಈ ಉಚಿತ ಪಡಿತರ ವಿತರಣೆಯ ಲಾಭವನ್ನು ಪಡೆಯುತ್ತಿದ್ದು ಈ ಮೂಲಕ ಸರ್ಕಾರಕ್ಕೆ ವಂಚಿಸುತ್ತಿದ್ದಾರೆ.

More than 33 thousand ration cards have been cancelled
Image Credit: mysirsa

ಇನ್ನು ನಿಯಮ ಉಲ್ಲಂಘನೆ ಮಾಡಿ ರಾಜ್ಯದಾದ್ಯಂತ ಆರ್ಥಿಕ ಸಬಲರು ಪಡೆಯುತ್ತಿದ್ದ 33 ,002 ರೇಷನ್ ಕಾರ್ಡ್ ಗಳನ್ನೂ ರದ್ದುಪಡಿಸಲಾಗಿದೆ.

Join Nadunudi News WhatsApp Group

33 ಸಾವಿರಕೂ ಅಧಿಕ ರೇಷನ್ ಕಾರ್ಡ್ ಗಳು ರದ್ದು
33,002 ರೇಷನ್ ಕಾರ್ಡ್ ಗಳನ್ನೂ ರದ್ದು ಮಾಡಿರುವ ಬಗ್ಗೆ ಆಹಾರ ಇಲಾಖೆ ಮಾಹಿತಿ ನೀಡಿದೆ. 21,679 ಅಂತ್ಯೋದಯ ಕಾರ್ಡ್ ಗಳನ್ನೂ ರದ್ದು ಮಾಡಲಾಗಿದೆ. ಇನ್ನು 17338 ಸರ್ಕಾರೀ ನೌಕರರ ಬಿಪಿಎಲ್ ಕಾರ್ಡ್ ಗಳನ್ನೂ ರದ್ದು ಮಾಡಲಾಗಿದೆ. ಬೆಂಗಳೂರಿನಲ್ಲಿ 34,705, ವಿಜಯಪುರದಲ್ಲಿ 28, 735, ಕಲಬುರಗಿ 16,945, ಬೆಳಗಾವಿ 16,765, ರಾಯಚೂರು 16,693 ಹಾಗೂ ಚಿತ್ರದುರ್ಗದಲ್ಲಿ 16,537 ರೇಷನ್ ಕಾರ್ಡ್ ಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Join Nadunudi News WhatsApp Group