Ration Card: ಹೊಸ ರೇಷನ್ ಕಾರ್ಡ್ ನಿರೀಕ್ಷೆಯಲ್ಲಿ ಇರುವವರಿಗೆ, ಈ ರೀತಿಯಾಗಿ ಮನೆಯಲ್ಲಿ ಕುಳಿತು ಆನ್ಲೈನ್ ಅರ್ಜಿ ಸಲ್ಲಿಸಿ.

ಈ ವಿಧಾನದ ಮೂಲಕ ಮನೆಯಲ್ಲಿಯೇ ಕುಳಿತು ರೇಷನ್ ಕಾರ್ಡ್ ಅರ್ಜಿ ಸಲ್ಲಿಸಬಹುದು.

Ration Card Apply Online Process: ಜನಸಾಮಾನ್ಯರ ನೆರವಿಗಾಗಿ ಸರ್ಕಾರ ಉಚಿತ ಪಡಿತರನ್ನು (Ration) ನೀಡುತ್ತದೆ. ದೇಶದ ಅದೆಷ್ಟೋ ಬಡ ನಾಗರಿಕರು ಈ ಉಚಿತ ಪಡಿತರ ವಿತರಣೆಯ ಲಾಭವನ್ನು ಪಡೆಯುತ್ತಾರೆ. ಇನ್ನು ಸರ್ಕಾರ ಪಡಿತ ವಿತರಣೆಯಲ್ಲಿ ಇತ್ತೀಚಿಗೆ ಹೆಚ್ಚಿನ ಸೌಲಭ್ಯವನ್ನು ನೀಡುತ್ತಿದೆ. ಹೊಸ ಸೌಲಭ್ಯದ ಜೊತೆಗೆ ವಿವಿಧ ನಿಯಮಗಳನ್ನು ಜಾರಿಗೊಳಿಸುತ್ತಿದೆ.

ಇದೀಗ ರಾಜ್ಯದಲ್ಲಿ ಹೊಸ ಸಾರ್ಕಾರ ರಚನೆಯಾಗಿದ್ದು ಪಡಿತರ ವಿತರಣೆಯಲ್ಲಿ ಬಿಪಿಎಲ್ ಕಾರ್ಡ್ (BPL) ಹೊಂದಿರುವವರಿಗೆ ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತದೆ. ದೇಶದ ಬಡ ಕುಟುಂಬಗಳಿಗೆ ಮಾತ್ರ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಅನ್ನು ವಿತರಿಸಲಾಗುತ್ತದೆ. 

Online now one can apply for ration cards sitting at home.
Image Credit: informalnewz

ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಪ್ರಾರಂಭ
ಇದೀಗ ಆಹಾರ ಇಲಾಖೆ ಹೊಸ ರೇಷನ್ ಕಾರ್ಡ್ ನಿರೀಕ್ಷೆಯಲ್ಲಿ ಇದ್ದವರಿಗೆ ಗುಡ್ ನ್ಯೂಸ್ ನೀಡಿದೆ. ಹೊಸತಾಗಿ ಪಡಿತರ ಚೀಟಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಈ ಹಿಂದೆ ಚುನಾವಣೆಯ ಹಿನ್ನಲೆ ಬಿಪಿಎಲ್, ಎಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಅರ್ಜಿ ಸಲ್ಲಿಕೆ ಪ್ರಕ್ರಿಯನ್ನು ನಿಲ್ಲಿಸಿತ್ತು. ಆದರೆ ಇಂದಿನಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮತ್ತೆ ಆರಂಭಗೊಳ್ಳಲಿದೆ.

ನೀವು ಹೊಸ ರೇಷನ್ ಕಾರ್ಡ್ ಪಡೆಯುವ ನಿರೀಕ್ಷೆಯಲ್ಲಿದ್ದರೆ ಇಂದೇ ಅರ್ಜಿ ಸಲ್ಲಿಸಬಹುದು. ಯೋನಿಲಿಂ ನ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು.

Online now one can apply for ration cards sitting at home.
Image Credit: odishabytes

ಆನ್ಲೈನ್ ನಲ್ಲಿ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಯ ವಿಧಾನ
*ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಮೊದಲಿಗೆ https://ahara.kar.nic.in/ ವೆಬ್ ಸೈಟ್ ಗೆ ಭೇಟಿ ನೀಡಿ E -Service ಆಯ್ಕೆ ಮಾಡಬೇಕು.

Join Nadunudi News WhatsApp Group

*ನಂತರ ಆಧಾರ್ ಕಾರ್ಡ್ ವಿವರವನ್ನು ನೀಡಬೇಕು. ಇದಾದ ಬಳಿಕ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ.

*ಒನ್​ಟೈಮ್​ ಪಾಸ್​ವರ್ಡ್​ ಟು ಮೊಬೈಲ್​ ನಂಬರ್ ರಿಜಿಸ್ಟರ್​ಡ್ ವಿಥ್ ದ ಆಧಾರ್​ ಕಾರ್ಡ್ ಆಯ್ಕೆಯನ್ನು ಆರಿಸಿ ನಿಮ್ಮ ಫಿಂಗರ್ ಪ್ರಿಂಟ್ ಆಯ್ಕೆಯನ್ನು ನೀಡಿ ಇದಾದ ಬಳಿಕ ನಿಮ್ಮ ಕುಟುಂಬದ ಸದಸ್ಯರ ವಿವರವನ್ನು ನೀಡಬೇಕು.

*ಈ ಪ್ರಕ್ರಿಯೆ ಮುಗಿದ ಬಳಿಕ ರೇಷನ್ ಕಾರ್ಡ್ ಸಂಬಂದಿತಾ ಮಾಹಿತಿ ಕೇಳುತ್ತದೆ. ಎಲ್ಲ ಮಾಹಿತಿಯನ್ನು ನಮೂದಿಸಿದ ನಂತರ ಜನರೇಟ್ RC ಆಯ್ಕೆ ಮಾಡಿದರೆ ನಿಮ್ಮ ರೇಷನ್ ಕಾರ್ಡ್ ಅರ್ಜಿ ಪ್ರಕ್ರಿಯೆ ಮುಗಿಯುತ್ತದೆ.

Join Nadunudi News WhatsApp Group