India v\s England: ಇಂಗ್ಲೆಂಡ್ ವಿರುದ್ಧ ಸೋತ ಬೆನ್ನಲ್ಲೇ ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೆ ಬೇಸರದ ಸುದ್ದಿ, ಬೇಸರದಲ್ಲಿ ಶರ್ಮಾ

ಇಂಗ್ಲೆಂಡ್ ವಿರುದ್ಧ ತಂಡದಲ್ಲಿ ಸ್ಟಾರ್ ಆಟಗಾರನಿಗೆ ಗಾಯ, ತಂಡದಿಂದ ಹೊರಕ್ಕೆ

India And England Test Match: ಹೈದರಾಬಾದ್​ನ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಸೋಲನ್ನು ಕಂಡಿತ್ತು. ಈ ಸೋಲನ್ನು ಯಾರು ಕೂಡ ಊಹಿಸಿರಲಿಲ್ಲ. ಕಡಿಮೆ ಟಾರ್ಗೆಟ್ ಅನ್ನು ಕೂಡ ಬೆನ್ನಟ್ಟಲು ಸಾಧ್ಯವಾಗದೆ ಟೀಮ್ ಇಂಡಿಯಾ 28 ರನ್‌ ಗಳಿಂದ ಸೋಲು ಕಂಡಿದೆ.

ಇದರೊಂದಿಗೆ ಸರಣಿಯಲ್ಲಿ 0-1 ರಿಂದ ಹಿನ್ನಡೆಯಾಯಿತು. ಈ ಸೋಲಿನ ನಡುವೆ ಟೀಮ್ ಇಂಡಿಯಾ ಮತ್ತೊಂದು ಸಮಸ್ಯೆಯನ್ನು ಎದುರಿಸಬೇಕಾಗಿದೆ. ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಇಂಜುರಿಗೆ ತುತ್ತಾಗಿದ್ದು, ಮುಂದಿನ ಟೆಸ್ಟ್​ನಲ್ಲಿ ಆಡುವುದು ಅನುಮಾನವಾಗಿದೆ ಎನ್ನಲಾಗುತ್ತಿದೆ. ಇದು ಟೀಮ್ ಇಂಡಿಯಾದ ಮೇಲೆ ಪರಿಣಾಮ ಕೂಡ ಬೀರಲಿದೆ.

Ravindra Jadeja likely to miss second Test against England
Image Credit: Sportstiger

ಆಲ್ರೌಂಡರ್ ರವೀಂದ್ರ ಜಡೇಜಾ ಇಂಜುರಿಯಿಂದ ಬಳಲುತ್ತಿದ್ದಾರೆ

ಭಾರತದ ಎರಡನೇ ಇನ್ನಿಂಗ್ಸ್‌ನಲ್ಲಿ ಜಡೇಜಾ ಅವರು ಗಾಯಗೊಂಡಿದ್ದು, ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಜಡೇಜಾ ವೇಗವಾಗಿ ರನ್ ಗಳಿಸಲು ಪ್ರಯತ್ನಿಸಿದರು. ಆದರೆ ಅದು ಯಶಸ್ವಿಯಾಗಲಿಲ್ಲ ಮತ್ತು ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್, ಅತ್ಯುತ್ತಮ ಫೀಲ್ಡಿಂಗ್​ನಿಂದಾಗಿ ರನೌಟ್ ಆದರು. ಜಡೇಜಾ ರನೌಟ್ ಟೀಮ್ ಇಂಡಿಯಾಕ್ಕೆ ದೊಡ್ಡ ಹೊಡೆತವಾಯಿತು. ಇದರಿಂದಾಗಿ ಇಂಡಿಯಾ ಅಂತಿಮವಾಗಿ ಸೋಲನ್ನು ಎದುರಿಸಬೇಕಾಯಿತು.

ಜಡೇಜಾ ಔಟಾಗಿ ಪೆವಿಲಿಯನ್​ನತ್ತ ಸಾಗುತ್ತಿರುವಾಗ ಕಾಲು ನೋವಿರುವುದು ಕಂಡುಬಂದಿದೆ. ಜಡೇಜಾ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ. ಪಂದ್ಯದ ನಂತರ ಕೋಚ್ ರಾಹುಲ್ ದ್ರಾವಿಡ್ ಕೂಡ ಈ ವಿಚಾರದಲ್ಲಿ ಸ್ಪಷ್ಟ ಉತ್ತರ ನೀಡಲಿಲ್ಲ. ಪಿಟಿಐ ವರದಿಯ ಪ್ರಕಾರ, ದ್ರಾವಿಡ್ ಈ ಬಗ್ಗೆ ತಂಡದ ಫಿಸಿಯೋ ಜೊತೆ ಇನ್ನೂ ಮಾತನಾಡಿಲ್ಲ ಮತ್ತು ಇದು ಎಷ್ಟು ಗಂಭೀರವಾಗಿದೆ ಎಂದು ಏನನ್ನೂ ಹೇಳಲಾಗುವುದಿಲ್ಲ ಎಂದು ಹೇಳಿದರು.

Join Nadunudi News WhatsApp Group

Ravindra Jadeja Latest News
Image Credit: Mykhel

ಜಡೇಜಾ ಎರಡನೇ ಟೆಸ್ಟ್​ನಿಂದ ಹೊರಗುಳಿಯಬಹುದು

ವರದಿಯ ಪ್ರಕಾರ, ಜಡೇಜಾ ಅವರ ಮಂಡಿರಜ್ಜು ಗಾಯವು ಎಷ್ಟು ಗಂಭೀರವಾಗಿದೆ ಎಂಬುದರ ಮೇಲೆ ಜಡೇಜಾ ಯಾವಾಗ ಮತ್ತು ಎಷ್ಟು ಸರಣಿಯಲ್ಲಿ ಆಡಲು ಸಾಧ್ಯವಾಗುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ಗಾಯವು ಚಿಕ್ಕದಾಗಿದೆ ಎಂದು ಸಾಬೀತಾದರೂ, ಸಂಪೂರ್ಣವಾಗಿ ಗುಣಮುಖರಾಗಲು ಸಾಮಾನ್ಯವಾಗಿ ಒಂದು ವಾರದ ವಿಶ್ರಾಂತಿ ನೀಡಲಾಗುತ್ತದೆ. ಮುಂದಿನ ಪಂದ್ಯ ಫೆಬ್ರವರಿ 2 ರಿಂದ ವಿಶಾಖಪಟ್ಟಣಂನಲ್ಲಿ ನಡೆಯಲಿದೆ. ಇಂತಹ ಪರಿಸ್ಥಿತಿಯಲ್ಲಿ ಜಡೇಜಾ ಎರಡನೇ ಟೆಸ್ಟ್​ನಿಂದ ಹೊರಗುಳಿಯಬಹುದು ಎನ್ನಲಾಗಿದೆ.

Join Nadunudi News WhatsApp Group