RBI Update UPI: UPI ಬಳಕೆದಾರರಿಗೆ ಹೊಸ ಸೌಲಭ್ಯ, RBI ಮಹತ್ವದ ಘೋಷಣೆ.

UPI ಪಾವತಿ ಹೆಚ್ಚುತ್ತಿರುವ ಹಿನ್ನಲೆ RBI ಮಹತ್ವದ ಘೋಷಣೆಯನ್ನು ಹೊರಡಿಸಿದೆ.

RBI Announced UPI New Facility: ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಪಾವತಿಯ (Online Payment) ವಹಿವಾಟು ಹೆಚ್ಚುತ್ತಿರುವ ಹಿನ್ನಲೆ UPI ದಿನದಿಂದ ದಿನಕ್ಕೆ ತನ್ನ ಸೇವೆಯನ್ನು ವಿಸ್ತರಿಸುತ್ತಿದೆ. ಇತ್ತೀಚೆಗಂತೂ ಭಾರತೀಯ ರಿಸರ್ವ್ ಬ್ಯಾಂಕ್ ಯುಪಿಐ ನಲ್ಲಿ ಹೊಸ ಹೊಸ ಆಯ್ಕೆಯನ್ನು ಪರಿಚಯಿಸುತ್ತಿದೆ. ಗೂಗಲ್ ಪೇ, ಫೋನ್ ಪೇ, ಪೆಟಿಎಂ ಸೇರಿದಂತೆ ಇನ್ನಿತರ ಆನ್ಲೈನ್ ಡಿಜಿಟಲ್ ಪಾವತಿ ಅಪ್ಲಿಕೇಶನ್ ಗಳು ಜನರಿಗೆ ಹೆಚ್ಚಿನ ಅನುಕೂಲಗಳನ್ನು ಮಾಡಿಕೊಡುತ್ತಿದೆ.

ಸದ್ಯ ದೇಶದಲ್ಲಿ ಬಹುತೇಕ ಎಲ್ಲಾ ಜನರು UPI ವಹಿವಾಟುಗಳನ್ನ ಮಾಡುತ್ತಿದ್ದು ಇದು ದೇಶದ ಪ್ರಗತಿಗೆ ಇನ್ನಷ್ಟು ಸಹಾಯವನ್ನ ಮಾಡಿಕೊಟ್ಟಿದೆ ಎಂದು ಹೇಳಬಹುದು. ಇದರ ನಡುವೆ RBI ದೇಶದಲ್ಲಿ UPI ಬಳಸುವ ಜನರಿಗೆ ಸಾಕಷ್ಟು ಹೊಸ ಬದಲಾವಣೆಯನ್ನ ಜಾರಿಗೆ ತರುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. 

RBI Announced UPI New Facility
Image Credit: Informalnewz

UPI ಬಳಕೆದಾರರಿಗೆ ಹೊಸ ಸೌಲಭ್ಯ
ಈ ಆನ್ಲೈನ್ ಪಾವತಿಯ ಬಳಕೆಯ ಕಾರಣ ಗ್ರಾಹಕರು ಸಣ್ಣ ಪುಟ್ಟ ವಿಚಾರಗಳಿಗೆ ಬ್ಯಾಂಕ್ ಗಳಿಗೆ ಭೇಟಿ ನೀಡುವುದು ಕಡಿಮೆಯಾಗಿದೆ ಎಂದರೆ ತಪ್ಪಾಗಲಾರದು. ನಗದು ರಹಿತ ವಹಿವಾಟುಗಳು ಇಂದಿನ ದಿನಗಳಲ್ಲಿ ಹೆಚ್ಚುತ್ತಿದ್ದು, ಆನ್ಲೈನ್ ಮೂಲಕ ಪಾವತಿ ಹೆಚ್ಚಾಗಿದೆ.

ಇನ್ನು ಗ್ರಾಹಕರಿಗೆ ಇನ್ನಷ್ಟು ಅನುಕೂಲವಾಗಲು ಯುಪಿಐ (UPI) ವಹಿವಾಟುಗಳು ತನ್ನ ಸೇವೆಯನ್ನು ವಿಸ್ತರಿಸುವ ಮೂಲಕ ಇನ್ನಷ್ಟು ಗ್ರಾಹಕರನ್ನು ಸೆಳೆಯುತ್ತಿದೆ. ಇದೀಗ Reserve Bank Of India ಯುಪಿಐ ಬಳಕೆದಾರರಿಗೆ ಹೊಸ ಸೌಲಭ್ಯ ನೀಡುವುದಾಗಿ ಘೋಷಿಸಿದೆ. ಈ ನೂತನ ಸೌಲಭ್ಯ ಲಕ್ಷಣತರ ಬಳಕೆದಾರರಿಗೆ ಸಹಾಯವಾಗಲಿದೆ.

New facility for UPI users
Image Credit: Yourstory

RBI ಮಹತ್ವದ ಘೋಷಣೆ
UPI ಪಾವತಿ ಹೆಚ್ಚುತ್ತಿರುವ ಹಿನ್ನಲೆ RBI ಮಹತ್ವದ ಘೋಷಣೆಯನ್ನು ಹೊರಡಿಸಿದೆ. RBI ಯುಪಿಐ ವ್ಯವಸ್ಥೆಯಲ್ಲಿ ವಹಿವಾಟುಗಳಿಗಾಗಿ ಬ್ಯಾಂಕ್‌ಗಳು ನೀಡುವ ಪೂರ್ವ ಮಂಜೂರಾದ ಕ್ರೆಡಿಟ್ ಲೈನ್‌ಗಳನ್ನು ಸೇರಿಸಲು ಸಹ ಘೋಷಿಸಿದೆ. ಇದರಿಂದ ಗ್ರಾಹಕರಿಗೆ ಹೆಚ್ಚಿನ ಲಾಭವಾಗಲಿದೆ. ಇಲ್ಲಿಯವರೆಗೆ ಯುಪಿಐ ವ್ಯವಸ್ಥೆಯ ಮೂಲಕ ಠೇವಣಿ ಮೊತ್ತದ ವಹಿವಾಟುಗಳನ್ನು ಮಾತ್ರ ಮಾಡಬಹುದಾಗಿತ್ತು. ಇದೀಗ UPI ವ್ಯಾಪ್ತಿಯನ್ನು ವಿಸ್ತರಿಸಿದ್ದು ಗ್ರಾಹಕರು ಹೆಚ್ಚಿನ ಅನುಕೂಲವನ್ನು ಪಡೆಯಬಹುದು.

Join Nadunudi News WhatsApp Group

UPI ನಲ್ಲಿ ಸಾಲ ಸೌಲಭ್ಯ
ಬ್ಯಾಂಕ್‌ ಗಳಲ್ಲಿ ಈಗಾಗಲೇ ಅನುಮೋದಿಸಲಾದ ಸಾಲ ಸೌಲಭ್ಯದಿಂದ ವರ್ಗಾವಣೆಯನ್ನು ಅನುಮೋದಿಸಲು ಹೇಳಲಾಗಿದೆ. ಪ್ರಸ್ತುತ ಉಳಿತಾಯ ಖಾತೆಗಳು, Overdraft ಖಾತೆಗಳು, ಪ್ರಿಪೇಯ್ಡ್ ವ್ಯಾಲೆಟ್‌ಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು UPI ಗೆ ಲಿಂಕ್ ಮಾಡಬಹುದು. ರಿಸರ್ವ್ ಬ್ಯಾಂಕ್ ಯುಪಿಐ ಮೂಲಕ ಬ್ಯಾಂಕ್‌ಗಳಲ್ಲಿ ಪೂರ್ವ-ಅನುಮೋದಿತ ಸಾಲ ಸೌಲಭ್ಯದ ಬಗ್ಗೆ ಸುತ್ತೋಲೆಯನ್ನು ಸಹ ಹೊರಡಿಸಿದೆ.

Loan facility on UPI
Image Credit: Businesstoday

ಯುಪಿಐ ವ್ಯಾಪ್ತಿಗೆ ಸಾಲ ಸೌಲಭ್ಯವನ್ನೂ ಸೇರಿಸಲಾಗಿದೆ ಎಂದು RBI ಮೂಲಕ ಮಹತ್ವದ ವಿಷಯ ತಿಳಿಸಿದೆ. ವೈಯಕ್ತಿಕ ಗ್ರಾಹಕರ ಪೂರ್ವಾನುಮತಿಯೊಂದಿಗೆ ನಿಗದಿತ ವಾಣಿಜ್ಯ ಬ್ಯಾಂಕ್ ಮೂಲಕ ವ್ಯಕ್ತಿಗಳಿಗೆ ನೀಡಲಾದ ಪೂರ್ವ ಅನುಮೋದಿತ ಸಾಲ ಸೌಲಭ್ಯದ ಮೂಲಕ ಪಾವತಿ ಮಾಡಬಹುದು ಎಂದು ರಿಸರ್ವ್ ಬ್ಯಾಂಕ್ ಮಾಹಿತಿ ನೀಡಿದೆ.

Join Nadunudi News WhatsApp Group