Bank Locker: ಬದಲಾಯಿತು ಬ್ಯಾಂಕ್ ಲಾಕರ್ ನಿಯಮ, ಲಾಕರ್ ನಲ್ಲಿ ಚಿನ್ನ ಮತ್ತು ದಾಖಲೆ ಇಡುವ ಮುನ್ನ ನಿಯಮ ತಿಳಿಯಿರಿ.

ಬ್ಯಾಂಕ್ ಲಾಕರ್ ನಿಯಮದಲ್ಲಿನ ಬದಲಾವಣೆಯ ಬಗ್ಗೆ ಮಾಹಿತಿ ತಿಳಿಯಿರಿ.

RBI Bank Locker Rules: ದೇಶದ ಪ್ರತಿಷ್ಠಿತ ಬ್ಯಾಂಕ್ ಗಳು ಗ್ರಾಹಕರಿಗೆ ಸಾಕಷ್ಟು ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ. ಬ್ಯಾಂಕ್ ಗಳು ತನ್ನ ಗ್ರಾಹಕರ ಸುರಕ್ಷತೆಗಾಗಿ ವಿವಿಧ ರೀತಿಯ ನಿಯಮಗಳನ್ನು ಜಾರಿಗೊಳಿಸುತ್ತಿದೆ.

ಇನ್ನು ಬ್ಯಾಂಕ್ ಗಳಲ್ಲಿ ಲಾಕರ್ (Bank Locker) ವ್ಯವಸ್ಥೆ ಇರುತ್ತದೆ. ಹೊಸ ವರ್ಷದ ಆರಂಭದಿಂದ ಬ್ಯಾಂಕ್ ಲಾಕರ್ ನಿಯಮದಲ್ಲಿ ಬಾರಿ ಬದಲಾವಣೆಯನ್ನು ತರಲಾಗಿದೆ. ಬ್ಯಾಂಕ್ ಲಾಕರ್ ನಿಯಮದಲ್ಲಿನ ಬದಲಾವಣೆಯ ಬಗ್ಗೆ ಮಾಹಿತಿ ತಿಳಿಯೋಣ.

RBI Bank Locker Rules
Image Credit: Rightsofemployees

RBI Bank Locker Rules
ದೇಶದ ಲಕ್ಷಾಂತರ ಜನರು ತಮ್ಮ ಅಮೂಲ್ಯ ಆಸ್ತಿಗಳಾದ ಚಿನ್ನ, ಬೆಳ್ಳಿ ಮತ್ತು ನಗದನ್ನು ಸುರಕ್ಷಿತವಾಗಿಡಲು ಬ್ಯಾಂಕ್ ಲಾಕರ್‌ ಅನ್ನು ಬಳಸುತ್ತಾರೆ. ಆದರೂ ಕೂಡ ಕಳ್ಳತನ, ಬೆಂಕಿ, ಭಯೋತ್ಪಾದಕರ ದಾಳಿ, ಗ್ರಾಹಕರ ನಿರ್ಲಕ್ಷ್ಯ, ಪ್ರವಾಹ ಅಥವಾ ನೈಸರ್ಗಿಕ ವಿಕೋಪಗಳಿಂದ ಬ್ಯಾಂಕ್ ಲಾಕರ್‌ನಲ್ಲಿರುವ ನಿಮ್ಮ ಬೆಲೆಬಾಳುವ ವಸ್ತುಗಳು ಕಳವಾದರೆ ಅಥವಾ ಹಾನಿಗೊಳಗಾದರೆ, ಈ ನಷ್ಟವನ್ನು ಸರಿದೂಗಿಸಲು ಬ್ಯಾಂಕ್‌ನಿಂದ ಮೊದಲ ನಿರೀಕ್ಷೆ ಇರುತ್ತದೆ, ಆದರೆ RBI ನಿಯಮದ ಪ್ರಕಾರ ಬ್ಯಾಂಕಿಂಗ್ ಘಟಕವು ತನ್ನ ಲಾಕರ್‌ನಲ್ಲಿ ಇರಿಸಲಾಗಿರುವ ಬೆಲೆಬಾಳುವ ವಸ್ತುಗಳಿಗೆ ಜವಾಬ್ದಾರವಾಗಿರುದಿಲ್ಲ.

ಸೇಫ್ ಡಿಪಾಸಿಟ್ ಲಾಕರ್‌ಗೆ ವಾರ್ಷಿಕ ಬಾಡಿಗೆಯ 100 ಪಟ್ಟು ಮಾತ್ರ ಇರುತ್ತದೆ
ಬೆಂಕಿ, ಕಳ್ಳತನ, ಕಟ್ಟಡ ಕುಸಿತ ಅಥವಾ ನೌಕರರು ಮಾಡಿದ ವಂಚನೆಯಂತಹ ಸಂದರ್ಭದಲ್ಲಿ ಬ್ಯಾಂಕ್‌ನ ಹೊಣೆಗಾರಿಕೆಯು ಸೇಫ್ ಡಿಪಾಸಿಟ್ ಲಾಕರ್‌ಗೆ ವಾರ್ಷಿಕ ಬಾಡಿಗೆಯ 100 ಪಟ್ಟು ಮಾತ್ರ ಇರುತ್ತದೆ. ಇಲ್ಲಿ ಸಿಗುವ ಪರಿಹಾರ ತೀರಾ ಕಡಿಮೆ. ವಾರ್ಷಿಕ ಲಾಕರ್ ಶುಲ್ಕ ಸಾವಿರ ರೂಪಾಯಿಯಾಗಿದ್ದರೆ ನಿಮ್ಮ ಲಾಕರ್‌ನಲ್ಲಿ ಎಷ್ಟೇ ಬೆಲೆಬಾಳುವ ಆಸ್ತಿ ಇದ್ದರೂ ಬ್ಯಾಂಕ್ ಕೇವಲ ಒಂದು ಲಕ್ಷ ರೂಪಾಯಿಗಳನ್ನು ನೀಡುತ್ತದೆ.

Bank Locker Latest Update
Image Credit: Informalnewz

ಆಸ್ತಿಯ ಸುರಕ್ಷತೆಗಾಗಿ ಬ್ಯಾಂಕುಗಳು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತವೆ
ಗ್ರಾಹಕರ ಆಸ್ತಿಯನ್ನು ಸುರಕ್ಷಿತವಾಗಿರಿಸಲು ಬ್ಯಾಂಕುಗಳು ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಲಾಕರ್ ವಿಷಯದಲ್ಲಿ ಹಾನಿ ಅಥವಾ ನಷ್ಟದ ಸಂದರ್ಭದಲ್ಲಿ ಬ್ಯಾಂಕ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

Join Nadunudi News WhatsApp Group

ನಷ್ಟಕ್ಕೆ ಬ್ಯಾಂಕುಗಳು ಜವಾಬ್ದಾರರಾಗಿರುವುದಿಲ್ಲ
ಲಾಕರ್‌ನಲ್ಲಿ ಏನು ಇರಿಸಲಾಗಿದೆ ಹಾಗೆ ಅದರ ಮೌಲ್ಯವು ಬ್ಯಾಂಕ್‌ಗಳಿಗೆ ತಿಳಿದಿರುದಿಲ್ಲ. ಗ್ರಾಹಕರು ತಮ್ಮ ಲಾಕರ್‌ನ ಬೆಲೆಯನ್ನು ಬಹಿರಂಗಪಡಿಸಲು ನಿರ್ಬಂಧವನ್ನು ಹೊಂದಿರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪರಿಹಾರಕ್ಕೆ ಬೆಲೆ ಕಟ್ಟುವುದು ಅಸಾಧ್ಯವಾಗುತ್ತದೆ. ಹಾಗಾಗಿ ಲಾಕರ್ ನಷ್ಟಕ್ಕೆ ಬ್ಯಾಂಕುಗಳು ಜವಾಬ್ದಾರರಾಗಿರುವುದಿಲ್ಲ.

Join Nadunudi News WhatsApp Group