License Close: ರಾತ್ರೋರಾತ್ರಿ ಇನ್ನೊಂದು ಬ್ಯಾಂಕಿನ ಲೈಸೆನ್ಸ್ ರದ್ದು ಮಾಡಿದ RBI, ಹಣ ತಗೆಯಲು ಪರದಾಡುತ್ತಿರುವ ಜನರು.

ಇನ್ನೊಂದು ಬ್ಯಾಂಕಿನ ಪರವಾನಿಗೆ ಈಗ RBI ರದ್ದು ಮಾಡಿದೆ.

RBI Cancelled Bank Licence: Reserve Bank Of India ಈಗಾಗಲೇ ದೇಶದಲ್ಲಿ ಸಾಕಷ್ಟು ಸಹಕಾರಿ ಬ್ಯಾಂಕ್ ಗಳ ಪರವಾನಗಿಯನ್ನು ರದ್ದುಗೊಳಿಸಿದೆ. ಇತ್ತೀಚಿನ ದಿನಗಳಲ್ಲಿ RBI ನಿಯಮ ಉಲ್ಲಂಘನೆ ಮಾಡಿದ ವಿವಿಧ ಬ್ಯಾಂಕ್ ಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಿದೆ. ಸದ್ಯ RBI ಈಗ ಇನ್ನೊಂದು ಬ್ಯಾಂಕಿನ ಲೈಸೆನ್ಸ್ ಅನ್ನು ರದ್ದು ಮಾಡಿದ್ದೂ ಸದ್ಯ ಬ್ಯಾಂಕಿನಲ್ಲಿ ಹಣ ಇಟ್ಟಿರುವ ಜನರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.

ಹಣ ತೆಗೆಯಲು ಜನರು ಸಂಕಷ್ಟದಲ್ಲಿದ್ದಾರೆ. RBI ಕಳೆದ ತಿಂಗಳಿನಲ್ಲಿ ನಾಲ್ಕು ಬ್ಯಾಂಕ್ ಗಳ ಲೈಸೆನ್ಸ್ ಅನ್ನು ರದ್ದುಗೊಳಿಸಿತ್ತು. ಸದ್ಯ ಕೇರಳದ ಸಹಕಾರಿ ಬ್ಯಾಂಕ್ ನ ಪರವಾನಗಿಯನ್ನು ರದ್ದುಗೊಳಿಸಿ ಗ್ರಾಹಕರಿಗೆ ಶಾಕ್ ನೀಡಿದೆ. RBI ನ ಈ ನಿರ್ಧಾರದ ಲಕ್ಷಾಂತರ ಬ್ಯಾಂಕ್ ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ.

RBI cancels Licence of The Ananthasayanam Co-operative Bank
Image Credit: Businesstoday

ಕಳೆದ ತಿಂಗಳಿನಲ್ಲಿ ಐದು ಬ್ಯಾಂಕ್ ಗಳ ಪರವಾನಗಿಯನ್ನು ರದ್ದುಗೊಳಿಸಿದ RBI
RBI ಈಗಾಗಲೇ ಐದು ಬ್ಯಾಂಕ್ ಗಳ ಪರವಾನಗಿಯನ್ನು ರದ್ದುಗೊಳಿಸಿದೆ. RBI ಬುಲ್ಧಾನಾ ಮೂಲದ Malkapur Urban Co-operative Bank Ltd, ಬೆಂಗಳೂರು ಮೂಲದ Sushruti Souharda Cooperative Bank, ಕರ್ನಾಟಕದ ತುಮುಕೂರಿನಲ್ಲಿರುವ Shree Sharada Mahila Cooperative Bank, ಮಹಾರಾಷ್ಟ್ರದ ಸತಾರದಲ್ಲಿರುವ Harihareshwar Bank ಮತ್ತು United India Cooperative Bank Ltd ವಿರುದ್ಧ RBI ಕಠಿಣ ಕ್ರಮ ಕೈಗೊಂಡಿದ್ದು ಈಗಾಗಲೇ ಪರವಾನಗಿಯನ್ನು ರದ್ದು ಮಾಡಿದೆ. ಇದೀಗ ಕೇರಳದ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್ (Kerala Co-Operative Bank) ಈ ಸಾಲಿಗೆ ಸೇರಿಕೊಂಡಿದೆ.

ರಾತ್ರೋರಾತ್ರಿ ಇನ್ನೊಂದು ಬ್ಯಾಂಕಿನ ಲೈಸೆನ್ಸ್ ರದ್ದು ಮಾಡಿದ RBI
ಸದ್ಯ ಕೇಂದ್ರ ಬ್ಯಾಂಕ್ ತಿರುವನಂತಪುರ (ಕೇರಳ) ಅನಂತಶಯನಂ ಸಹಕಾರಿ ಬ್ಯಾಂಕ್ ಲಿಮಿಟೆಡ್‌ನ (Anantashayaman Shakari Bank Limites) ಪರವಾನಗಿಯನ್ನು ರದ್ದುಗೊಳಿಸಿದೆ. ಈ ಸಹಕಾರಿ ಬ್ಯಾಂಕ್ ನಲ್ಲಿ ಬಂಡವಾಳ ಮತ್ತು ಗಳಿಕೆಯ ಕೊರತೆ ಇರುವ ನಿಟ್ಟಿನಲ್ಲಿ ಆರ್ ಬಿಐ ಈ ಕ್ರಮ ಕೈಗೊಂಡಿದೆ. ಇನ್ನು ಪರವಾನಗಿ ರದ್ದಾದ ನಂತರ ಯಾವುದೇ ರೀತಿಯ ಬ್ಯಾಂಕಿಂಗ್ ವ್ಯವಹಾರವನ್ನು ಮಾಡದಂತೆ ಬ್ಯಾಂಕ್ ಗೆ ಸೂಚನೆ ನೀಡಿದೆ.

RBI Cancelled Bank Licence
Image Credit: Outlookindia

ಬ್ಯಾಂಕ್ ನ ಪರವಾನಗಿ ರದ್ದಾದ ಬಳಿಕ ಬ್ಯಾಂಕ್ ನಲ್ಲಿ ಯಾವುದೇ ರೀತಿಯ ಠೇವಣಿಯನ್ನು ಸ್ವೀಕರಿಸುವುದಾಗಲಿ ಅಥವಾ ಗ್ರಾಹಕರು ಬ್ಯಾಂಕ್ ನಲ್ಲಿ ಹಣವನ್ನು ಠೇವಣಿ ಮಾಡಲು ಯಾವುದೇ ರೀತಿಯ ಅನುಮತಿ ಇಲ್ಲ ಎಂದು RBI ಆದೇಶ ಹೊರಡಿಸಿದೆ. ಈ ಬ್ಯಾಂಕ್ ನ ಲೈಸನ್ಸ್ ರದ್ದು ಮಾಡಿದ ಬೆನ್ನಲ್ಲೇ ಇನ್ನು ನಾಲ್ಕು ಬ್ಯಾಂಕ್ ಗಳಿಗೆ ದಂಡವನ್ನು ವಿಧಿಸಿದೆ.

Join Nadunudi News WhatsApp Group

ಈ ಎಲ್ಲ ಬ್ಯಾಂಕುಗಳಿಗೆ ದಂಡ ವಿಧಿಸಿದ RBI
*ಪ್ರಾಥಮಿಕ ಸಹಕಾರ ಬ್ಯಾಂಕ್‌ ಗಳು ಸಂಬಂಧಿಸಿದ ನಿರ್ದೇಶನಗಳನ್ನು ಅನುಸರಿಸಲು ವಿಫಲವಾದ ಕಾರಣಕ್ಕಾಗಿ ಶ್ರೀ ವರ್ಣ ಸಹಕಾರಿ ಬ್ಯಾಂಕ್ ಲಿಮಿಟೆಡ್ ಗೆ RBI 1 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ.

*ಸಾಲಗಳು ಮತ್ತು ಮುಂಗಡಗಳಿಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ HCBL ಸಹಕಾರ ಬ್ಯಾಂಕ್ ಲಿಮಿಟೆಡ್ ಗೆ 11 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗಿದೆ.

RBI cancels Licence of The Ananthasayanam Co-operative Bank
Image Credit: Informalnewz

*ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿ ಯೋಜನೆ, 2014″ ಗೆ ಸಂಬಂಧಿಸಿದ ಸೂಚನೆಗಳನ್ನು ಅನುಸರಿಸದಿದ್ದಕ್ಕಾಗಿ ದಿ ಸ್ಟೇಟ್ ಟ್ರಾನ್ಸ್‌ಪೋರ್ಟ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಗೆ ರೂ 2 ಲಕ್ಷ ದಂಡವನ್ನು ವಿಧಿಸಲಾಗಿದೆ.

*ದಿ ಸಿಟಿಜನ್ಸ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಗೆ 6 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

Join Nadunudi News WhatsApp Group