Licence Cancelled : ಇಂದಿನಿಂದ ದೇಶದಲ್ಲಿ ಬಂದ್ ಆಗಲಿದೆ ಈ 4 ಬ್ಯಾಂಕುಗಳು, RBI ನಿರ್ಧಾರದಿಂದ ಸಂಕಷ್ಟದಲ್ಲಿ ಗ್ರಾಹಕರು.

ಹೊಸ ವರ್ಷದ ಮೊದಲ ದಿನವೇ ಬಂದ್ ಆಗಲಿದೆ ಈ 4 ಬ್ಯಾಂಕುಗಳು

RBI Cancelled Co- Operative Bank Licence: ಪ್ರಸ್ತುತ 2024 ಆರಂಭವಾಗಿದೆ. ಹೊಸ ವರ್ಷದಲ್ಲಿ ಅನೇಕ ನಿಯಮಗಳು ಬದಲಾಗಲಿವೆ. ಹೊಸ ವರ್ಷದಲ್ಲಿ ಅನೇಕ ಹಣಕಾಸಿನ ನಿಯಮಗಳು ಬದಲಾಗಲಿವೆ. ಹಣಕಾಸಿನ ನಿಯಮದಲ್ಲಿನ ಬದಲಾವಣೆ ಜನರ ಬ್ಯಾಂಕಿಂಗ್ ವ್ಯವಹಾರದ ಮೇಲೆ ಪರಿಣಾಮ ಬೀರಲಿದೆ. ಇನ್ನು ಕೇಂದ್ರ ಬ್ಯಾಂಕ್ ಇತ್ತೀಚಿಗೆ ಬ್ಯಾಂಕುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ.

2023 ರಲ್ಲಿ ಸಾಕಷ್ಟು ಸಹಕಾರಿ ಬ್ಯಾಂಕ್ ಗಳ ಪರವಾನಗಿಯನ್ನು RBI ರದ್ದುಪಡಿಸಿದೆ. ಈಗಾಗಲೇ RBI ಪರವಾನಗಿ ರದ್ದುಪಡಿಸಿರುವ ಬ್ಯಾಂಕ್ ಗಳನ್ನೂ ಮುಚ್ಚಲಾಗಿದೆ. ಎಲ್ಲ ರೀತಿಯ ಬ್ಯಾಂಕ್ ನ ವಹಿವಾಟುಗಳು ಕೂಡ ಸ್ಥಗಿತಗೊಂಡಿದೆ. ಇದೀಗ RBI ಹೊಸ ವರ್ಷದ ಆರಂಭದಲ್ಲಿಯೇ ನಾಲ್ಕು ಬ್ಯಾಂಕ್ ಗಳ ಪರವಾನಗಿಯನ್ನು ರದ್ದುಗೊಳಿಸುವ ಮೂಲಕ ಬ್ಯಾಂಕ್ ನ ವಹಿವಾಟನ್ನು ಸಂಪೂರ್ಣವಾಗಿ ನಿಲ್ಲಿಸಿದೆ.

RBI Latest News Update
Image Credit: Rightsofemployees

ಹೊಸ ವರ್ಷದ ಮೊದಲ ದಿನವೇ ಬ್ಯಾಂಕ್ ಬಂದ್ ಮಾಡಲು ಮುಂದಾದ RBI
ಸದ್ಯ Reserve Bank Of India ಹೊಸ ವರ್ಷದ ಮೊದಲ ದಿನವೇ ಸಹಕಾರಿ ಬ್ಯಾಂಕ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಕೇಂದ್ರ ಬ್ಯಾಂಕ್ ಸದ್ಯ ನಾಲ್ಕು ಸಹಕಾರಿ ಬ್ಯಾಂಕ್ ಗಳ ಪರವಾನಗಿಯನ್ನು ರದ್ದು ಮಾಡಿದೆ. ಡಿಐಸಿಜಿಸಿ ಯೋಜನೆಯಡಿ ಬ್ಯಾಂಕ್ ಗ್ರಾಹಕರು ಗರಿಷ್ಠ 5 ಲಕ್ಷ ರೂ. ಪಡೆಯುತ್ತಾರೆ. ಈ ವಿಮಾ ಯೋಜನೆಯಡಿ, ಬ್ಯಾಂಕ್ ದಿವಾಳಿಯಾದರೆ, ಗ್ರಾಹಕರು ಗರಿಷ್ಠ ರೂ. 5 ಲಕ್ಷ ಸಿಗಲಿದೆ. ಅಂದರೆ ಬ್ಯಾಂಕಿನಲ್ಲಿ ರೂ. 5 ಲಕ್ಷದವರೆಗೆ ಹಣವನ್ನು ಹೊಂದಿರುವವರು ಪೂರ್ಣ ಮೊತ್ತವನ್ನು ಪಡೆಯುತ್ತಾರೆ.

ಇಂದಿನಿಂದ ದೇಶದಲ್ಲಿ ಬಂದ್ ಆಗಲಿದೆ ಈ 4 ಬ್ಯಾಂಕುಗಳು
1. ಆರ್‌ಬಿಐ ಬೊಟೆಡ್ ಪೀಪಲ್ಸ್ ಕೋಆಪರೇಟಿವ್ ಬ್ಯಾಂಕ್‌ನ ಪರವಾನಗಿಯನ್ನು ರದ್ದುಗೊಳಿಸಿದೆ. ಇದು ಬ್ಯಾಂಕಿಂಗ್ ಅಲ್ಲದ ಸಂಸ್ಥೆ ಎಂದು ಗುರುತಿಸಲ್ಪಟ್ಟಿದ್ದು, ಇದರಿಂದ ಯಾವುದೇ ಬ್ಯಾಂಕಿಂಗ್ ವ್ಯವಹಾರ ನಡೆಸಲು ಸಾಧ್ಯವಿಲ್ಲ ಎಂದು RBI ಹೇಳಿಕೆ ನೀಡಿದೆ.

RBI Cancelled Co- Operative Bank Licence
Image Credit: Rightsofemployees

2. RBI ಆದರ್ಶ ಮಹಿಳಾ ನಗರಿ ಸಹಕಾರಿ ಬ್ಯಾಂಕ್‌ನ ಪರವಾನಗಿಯನ್ನು ಸಹ ರದ್ದುಗೊಳಿಸಿದೆ. ಇನ್ನುಮುಂದೆ ಯಾವುದೇ ಬ್ಯಾಂಕಿಂಗ್ ವಹಿವಾಟುಗಳನ್ನು ಮಾಡಲು ಸಾಧ್ಯವಿಲ್ಲ. ಬ್ಯಾಂಕ್ ದಿವಾಳಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆರ್‌ಬಿಐ ಈಗಾಗಲೇ ಮಹಾರಾಷ್ಟ್ರದ ಸಹಕಾರ ಸಂಘಗಳ ಆಯುಕ್ತ ಮತ್ತು ರಿಜಿಸ್ಟ್ರಾರ್‌ ಗೆ ಸೂಚನೆಗಳನ್ನು ನೀಡಿದೆ.

Join Nadunudi News WhatsApp Group

3. ಇನ್ನು RBI ಫೈಜ್ ಮರ್ಕೆಂಟೈಲ್ ಸಹಕಾರಿ ಬ್ಯಾಂಕ್ ನ ಪರವಾನಗಿಯನ್ನು ಕೂಡ ರದ್ದುಗೊಳಿಸಿದೆ. ಬಂಡವಾಳ ಮತ್ತು ಗಳಿಕೆಯ ಕೊರತೆಯ ಕಾರಣ RBI ಈ ನಿರ್ಧಾರವನ್ನು ಕೈಗೊಂಡಿದೆ.

4. ಬಂಡವಾಳ ಮತ್ತು ಗಳಿಕೆಯ ಕೊರತೆಯ ಕಾರಣ RBI ಮುಸಿರಿ ಅರ್ಬನ್ ಕೋಆಪರೇಟಿವ್ ಬ್ಯಾಂಕ್ ನ ಪರವಾನಗಿಯನ್ನು ಕೂಡ ರದ್ದುಪಡಿಸಿದೆ.

Join Nadunudi News WhatsApp Group